ಎಪ್ಪತ್ತು ವರ್ಷ ಮೀರಿದ ಪತ್ರಿಕಾ ವಿತರಕರಿಗೆ ಐದು ಸಾವಿರ ಪಿಂಚಣಿ ನೀಡಿ

ಕಲಬುರಗಿ,ಸೆ.2-ಎಪ್ಪತ್ತು ವರ್ಷ ಮೀರಿದ ಹಿರಿಯ ಪತ್ರಿಕಾ ವಿತರಕರಿಗೆ ತಿಂಗಳಿಗೆ ಐದು ಸಾವಿರ ರೂಪಾಯಿ ಪಿಂಚಣಿ ಹಣ ನೀಡಬೇಕು, ಪತ್ರಿಕಾ ವಿತರಕರಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು, ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಸ್ವ-ನಿಧಿ ಯೋಜನೆಯನ್ನು ಪ್ರಾರಂಭಿಸಬೇಕು, ಪತ್ರಿಕಾ ವಿತರಕರಿಗೆ ಸರ್ಕಾರ ಸಬ್ಸಿಡಿ ದರದಲ್ಲಿ ಇವಿ ಬೈಕ್ ದೊರಕಿಸಿಕೊಡುವ ವ್ಯವಸ್ಥೆ ಮಾಡಬೇಕು, ಸರ್ಕಾರ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಧನಸಹಾಯ ಮಾಡಬೇಕು ಎಂದು ಪತ್ರಿಕಾ ವಿತರಕರ ಜಿಲ್ಲಾ ಘಟಕದ ಅಧ್ಯಕ್ಷ ರಮಾಕಾಂತ ಜಿಡಗೇಕರ್ ಹಾಗೂ ಉಪಾಧ್ಯಕ್ಷ ಬಸವರಾಜ ಖಾನಾಪುರ ಒತ್ತಾಯಿಸಿದ್ದಾರೆ.