ಪ್ರತಿಭಟನೆ

ಲಕ್ಷ್ಮೇಶ್ವರ,ಅ25: ತಾಲೂಕ ತಹಶೀಲ್ದಾರ ಕಾರ್ಯಾಲಯದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ ಜಯಂತಿ ಹಾಗೂ ವಿಜಯೋತ್ಸವವನ್ನು ಆಚರಿಸಲು ತಹಶೀಲ್ದಾರರು ನಿರ್ಲಕ್ಷ್ಯ ಹಾಗೂ ಅಗೌರವ ತೋರಿದ್ದಾರೆ ಎಂದು ಆಕ್ಷೇಪಿಸಿ ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಘಟಕದಿಂದ ತಹಶೀಲ್ದಾರರ ಕಾರ್ಯಾಲಯದರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.


ಪ್ರತಿಭಟನೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಹೆಚ್ಚುವರಿ ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು ಆದರೆ ಪ್ರತಿಭಟನಾಕಾರರು ತಹಶೀಲ್ದಾರರನ್ನು ಅಮಾನತು ಮಾಡಬೇಕು ಎಂದು ಬಿಗಿಪಟ್ಟು ಹಿಡಿದು ಅಹೋರಾತ್ರಿ ಭಜನೆ ಮಾಡುವ ಮೂಲಕ ಧರಣಿ ಸತ್ಯಾಗ್ರಹ ಮುಂದುವರಿಸಿದ್ದರು.


ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಅವರು ಶುಕ್ರವಾರ ತಹಶೀಲ್ದಾರ ಕಚೇರಿಗೆ ಬಂದು ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದರು. ಆದರೆ ಪ್ರತಿಭಟನಾಕಾರರು ತಹಶೀಲ್ದಾರರ ಅಮಾನತ್ತು ಮಾಡಬೇಕು ಎಂದು ಬಿಗಿಪಟ್ಟು ಹಿಡಿದು ಕುಳಿತರು.ಜಿಲ್ಲಾಧಿಕಾರಿಗಳು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕ ಘಟಕದ ಅಧ್ಯಕ್ಷ ಮಂಜುನಾಥ್ ಮಾಗಡಿ ಸೇರಿದಂತೆ ಮುಖಂಡರೊಂದಿಗೆ ಚರ್ಚೆ ನಡೆಸಿದರು ಸಮುದಾಯದವರು ತಮ್ಮ ಪಟ್ಟನ್ನು ಸಡಿಲಗೊಳಿಸಲಿಲ್ಲ.


ಆಗ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಅವರು ಮಾಡಿದ ತಪ್ಪಿಗೆ ತಾವು ಕ್ಷಮೆ ಯಾಚಿಸುವುದಾಗಿ ಹೇಳಿದರು ಮತ್ತು ಈ ಕೂಡಲೇ ತಹಶೀಲ್ದಾರರನ್ನು ಕಡ್ಡಾಯವಾಗಿ ರಜೆ ಮೇಲೆ ಕಳಿಸುವುದಾಗಿ ಮತ್ತು ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಕಾರ್ಯನಿರ್ವಹಿಸದಂತೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರಲ್ಲವೇ ಸಮಾಜದ ಮುಖಂಡರು ನಿರ್ಧರಿಸುವ ದಿನಾಂಕದಂದು ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ಆಚರಿಸಲು ಸಿದ್ಧತೆ ಮಾಡುವಂತೆ ಹಾಗೂ ತಾವು ಸಹ ಪಾಲ್ಗೊಳ್ಳವುದಾಗಿ ಹೇಳಿದರು.


ಆಗ ಪ್ರತಿಭಟನಾಕಾರರು ಸಮ್ಮತಿ ಸೂಚಿಸಿದರು.
ಚರ್ಚೆಯಲ್ಲಿ ಚೆನ್ನಪ್ಪ ಜಗಲಿ ಶರಣು ಗೋಡಿ ಬಸವರಾಜ್ ಹೊಗೆಸೊಪ್ಪಿನ ಶಿವಾನಂದ ಕಟಗಿ ಶಿವನ ಗೌಡ್ರು ಅಡರಕಟ್ಟಿ ನಾಗರಾಜ್ ಚಿಂಚಲಿ ದ್ಯಾಮಣ್ಣ ಕಮತ ದ ಬಸವರಾಜ ಅರಳಿ ಹೊನ್ನಪ್ಪ ವಡ್ಡರ ಬಸವರಾಜ್ ಜಾಲಗಾರ ಚಂದ್ರು ಮಾಗಡಿ ಮಲ್ಲಿಕಾರ್ಜುನರಾಲೊಟಿ ಮಂಜುನಾಥ್ ಗೌರಿ ಪ್ರಕಾಶ್ ಮಾದನೂರ ಪ್ರವೀಣ್ ಬಾಳಿಕಾಯಿ ಬಸವರಾಜ್ ಪೂಜಾರ್ ಮುತ್ತು ನೀರಲಗಿ ಅಭಯ್ ಜೈ ಪವನ್ ಬಂಕಾಪುರ ಶಂಕರ್ ಬ್ಯಾಡಗಿ ಸೇರಿದಂತೆ ತಾಲೂಕ ಘಟಕದ ಪದಾಧಿಕಾರಿಗಳು ಗ್ರಾಮ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.