ಗವಾಯಿ ಅವರತ್ತ “ಶೂ” ಎಸೆಯಲು ಯತ್ನಿಸಿದ ಪ್ರಕರಣ:ವಕೀಲ ರಾಕೇಶ್ ಕಿಶೋರ್ ಮೇಲೆ ದೇಶದ್ರೋಹದ ಕೇಸ್ ದಾಖಲಿಸಲು ಆಗ್ರಹಿಸಿ ಪ್ರತಿಭಟನೆ

ಕಲಬುರಗಿ,ಅ.7-ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಮೇಲೆ ದೇಶದ್ರೋಹದ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿ ಬೌದ್ಧ ಉಪಾಸಕರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಮಲ್ಲಪ್ಪ ಹೊಸಮನಿ, ಅರ್ಜುನ ಭದ್ರೆ, ಹಣಮಂತ ಬೋಧನಕರ, ಎ.ಬಿ.ಹೊಸಮನಿ, ರಾಜು ಕಪನೂರ, ದಿನೇಶ ದೊಡ್ಡಮನಿ, ದೇವಿಂದ್ರ ಸಿನ್ನೂರ, ಪ್ರಕಾಶ ಮೂಲಭಾರತಿ, ಅರ್ಜುನ ಗೊಬ್ಬರ, ಸುರೇಶ ಹಾದಿಮನಿ, ಎಸ್.ಜಿ.ಭಾರತಿ, ಬಸವರಾಜ ಕಣ್ಣೂರ ಅವರ ನೇತೃತ್ವದಲ್ಲಿ ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಟಾಯರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ನ್ಯಾಯಮೂರ್ತಿ ಗವಾಯಿ ಅವರ ಮೇಲೆ ನಡೆದ ಈ ದಾಳಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದ್ದು, ವಕೀಲ ರಾಕೇಶ್ ಕಿಶೋರ್ ಮೇಲೆ ದೇಶ ದ್ರೋಹದ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು. ಬೌದ್ಧ ಉಪಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.