Home ಜಿಲ್ಲೆ ಕಲಬುರಗಿ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ

ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ

ಕಲಬುರಗಿ,ಮಾ.6-ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ, ಚಿತಾಪೂರ ತಾಲೂಕಿನ ಚಾಮನೂರಿನ ಸೇತುವೆ ಕೆಲಸ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರವಣಕುಮಾರ ನಾಯಕ, ಸಾಮಾಜಿಕ ಹೋರಾಟಗಾರ ಮಾರೆಪ್ಪ ನಾಯಕ ಮಗದಂಪೂರ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಜೇವರ್ಗಿ ತಾಲೂಕು ಅಧ್ಯಕ್ಷ ಸಿದ್ದು ಕವಲ್ದಾರ, ಮುಖಂಡರಾದ ನಿಂಗಣ್ಣ ಚಿಗರಹಳ್ಳಿ, ಮೌನೇಶ ಹಾಲಗಡ್ಲಾ,ಭೀಮು ಇಜೇರಿ,ಯಲ್ಲಪ್ಪ ದೊರೆ ಜನಿವಾರ, ಸಂಜು ದೇಸಾಯಿ, ಧರ್ಮರಾಜ ಚಿಗರಹಳ್ಳಿ, ಈರಣ್ಣ ಗುತ್ತೇದಾರ, ಬಸವರಾಜ ದೊರೆ,ರಾಜು ನಾಯ್ಕೋಡಿ,ರಾಜು ಮೆಲಗಿರಿ,ನಾಗು ಹಂಗರಗಿ ಹಾಗೂ ನೂರಾರು ಜನರು ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜೇವರ್ಗಿ ತಾಲೂಕಿನ ನರಿಬೋಳ, ಚಿತಾಪೂರ ತಾಲೂಕಿನ ಚಾಮನೂರಿನ ಸೇತುವೆ ಕೆಲಸ ಪ್ರಾರಂಭವಾಗಿ ಒಂದುವರೆ ವರ್ಷದಲ್ಲೆ ಸ್ಥಗಿತಗೋಂಡು ಆರೆಳು ವರ್ಷಗಳೆ ಆಗಿದೆ. ಆದರೂ ಪೂರ್ಣಗೋಂಡಿಲ್ಲಾ ಇನ್ನು ಸ್ಪಲ್ಪ ಒಂದುವರೆ ಕಾಲಂ ಬಾಕಿ ಇರುವಾಗ ಸ್ವಲ್ಪವೆ ಬಜೆಟ್ನಲ್ಲಿ ಆಗಬೆಕಾದಿದ್ದ ಕೇಲಸ ಇವಾಗ ಹೆಚ್ಚು ಬಜೆಟ್ ಬೆಕಾಗಿದೆ ಇತ್ತಿಚೆಗೆ ಬಂದ ಪ್ರವಾಹದಿಂದ ಸೇತುವೆ ಕಚ್ಚಿಕೋಂಡು ಹೋಗಿರುವುದೆ ಇದಕ್ಕೆ ಕಾರಣ. ಇತ್ತಿಚಗೆ ಕೆಕೆಆರ್ಡಿಬಿ ಅದ್ಯಕ್ಷರು ಜೇವರ್ಗಿ ಶಾಸಕರಾದ ಡಾ.ಅಜಯ್ ಸಿಂಗ್ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆಯಲ್ಲಿ ಒಂದು ತಿಂಗಳಲ್ಲಿ ಟೇಂಡರ ಕರೆದು ಕೇಲಸ ಪ್ರಾರಂಭಿಸುವುದಾಗಿ ತಿಳಿಸಿದ್ದರು. ಆದರೆ ಕೆಲಸ ಪ್ರಾರಂಭಿಸಿಲ್ಲ. ಶಿಘ್ರ ಕೇಲಸ ಪ್ರಾರಂಬಿಸಬೆಕು ಎಂದು ಆಗ್ರಹಿಸಿ ಇಂದು ರಾಷ್ಠ್ರೀಯ ಹೆದ್ದಾರಿ ವಿಭಾಗೀಯ ಕಛೇರಿ ಇರುವ ಬೆಳಗಾವಿಯ ಸುವರ್ಣಸೌದಕ್ಕೆ ಮುತ್ತಿಗೆ ಹಾಕಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪೆÇೀಲಿಸರು ಗ್ರಾಮಸ್ಥರನ್ನು ಸುವರ್ಣಸೌದದ ಒಳಗೆ ಹೋಗಲೂ ಬಿಡದೆ ಇದ್ದಾಗ ಬೆಳಗಾವಿಯ ಉಸ್ತುವಾರಿ ಸಚಿವರಾದ ಸತಿಶ್ ಜಾರಕಿಹೋಳಿ ಅವರ ಮನೆ ಮುಂದೆ ಪ್ರತಿಬಟನೆ ಮಾಡುತ್ತೆವೆ ಎಂದು ತಿಳಿಸಿದಾಗ ಅಧಿಕಾರಿಗಳ ತಂಡವೆ ಸ್ಥಳಕ್ಕೆ ಬಂದು ಮನವಿ ಸ್ವಿಕರಿಸಿದರು ಎಂದು ಎಂ.ಎಸ್.ಪಾಟೀಲ ನರಿಬೋಳ ತಿಳಿಸಿದ್ದಾರೆ.