
ಕಲಬುರಗಿ,ಫೆ 26: ಕೃತಕ ಬುದ್ಧಿಮತ್ತೆ(ಎಐ) ಶೃಂಗಸಭೆಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ದಿಲ್ಲಿಪೆÇಲೀಸರು ಬಂಧಿಸಿದ್ದನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಟೈಯರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಕೀಲ್ ಅಹ್ಮದ್ ಸರಡಗಿ ಮಾತನಾಡಿ,
ಎಪ್‍ಸ್ಟೈನ್ ಫೈಲ್‍ನಲ್ಲಿ ಹೆಸರಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಘನತೆ ಕುಗ್ಗಿಸಿದ್ದಾರೆ. ದೇಶದ ರೈತರ ಹಿತಾಸಕ್ತಿ ಬಲಿಕೊಟ್ಟು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ಮಂಡಿಯೂರಿದ್ದಾರೆ. ಇದೀಗ ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿಸಿರುವ ಚಿಬ್ ಅವರನ್ನು ಬಿಡುಗಡೆ ಮಾಡದಿದ್ದರೆ,ದೇಶಾದ್ಯಂತ ಪ್ರತಿಭಟನೆಗಳು ನಡೆಯಲಿವೆ ಎಂದು ಎಚ್ಚರಿಸಿದರು.
ಸಾಮಾಜಿಕ ಜಾಲತಾಣದ ಅಧ್ಯಕ್ಷ ಫಾರೂಕ್ ಪಟೇಲ್ ಮುದಬಾಳ, ಎಂ.ಡಿ.ಅಸ್ವಾನ್, ರಾಮಪ್ರಸಾದ್ ಕಾಂಬಳೆ, ಪರಶುರಾಮ ನಾಟೀಕಾರ, ಏಜಾಜ್ ಲಿಂಬಡಕರ್, ರಾಜು ಮಾಳಗೆ, ಶರ್ಫುದ್ದಿನ್ ಮೇಸ್ತ್ರಿ, ಅಸ್ಲಂ ಸಿಂದಗಿ, ಅಮರ್ ಮಚರ್ಂಟ್, ಎಸ್.ಕೆ. ಶೋಯೆಬ್, ಭೀಮು ಅಟ್ಟೂರ, ಚಂದ್ರಶೇಖರ ಹಡಪದ, ರಮೇಶ ಹಡಪದ, ಪ್ರಶಾಂತ, ಚಂದ್ರು ಇತರರಿದ್ದರು.



























