ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ಪ್ರತಿಭಟನೆ

ಕಲಬುರಗಿ,ಅ.೨೧: ವಾಲ್ಮೀಕಿ ಸಮುದಾಯಕ್ಕೆ ಅವಹೇಳನ ಮಾಡಿದ ಮಾಜಿ ಸಂಸದ ರಮೇಶ ಕತ್ತಿಯನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘದ ಮುಖಂಡರು ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಮೇಶ ಕತ್ತಿ ಭಾವಚಿತ್ರವನ್ನು ಕತ್ತೆಯ ಕೊರಳಿಗೆ ಹಾಕಿ ಮೆರವಣಿಗೆ ಮಾಡಿದರು. ನಂತರ ಎಲ್ಲ ಮುಖಂಡರು ರಮೇಶ ಕತ್ತಿಯ ವಿರುದ್ಧನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜವಾಬ್ದಾರಿ ಸ್ಥಾನದಲ್ಲಿ ಇರುವ ರಮೇಶ ಕತ್ತಿ ವಾಲ್ಮೀಕಿ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ರಮೇಶ ಕತ್ತಿಯ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು. ಒಂದುವೇಳೆ ಸರಕಾರ ನಿರ್ಲಕ್ಷ್ಯ ವಹಿಸಿದ್ದರೆ ವಾಲ್ಮೀಕಿ ಸಮಾಜ ಹಾಗೂ ವಿವಿಧ ದಲಿತಪರ ಸಂಘಟನೆಯಿAದ ರಾಜ್ಯಾದ್ಯಂತ ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶ
ವಾಲ್ಮೀಕಿ ನಾಯಕರ ಸಂಘದ ಕಲಬುರಗಿ ವಿಭಾಗೀಯ ಅಧ್ಯಕ್ಷ ನಂದಕುಮಾರ ಮಾಲಿ ಪಾಟೀಲ, ಸಮಾಜದ ಜಿಲ್ಲಾಧ್ಯಕ್ಷ ಶರಣು ಸುಬೇದಾರ, ಮಾರುತಿ ಜಮಾದಾರ್, ವೆಂಕಟೇಶಕವಾಲ್ದಾರ್, ಶ್ರವಣಕುಮಾರ ನಾಯಕ, ನಾಗೇಂದ್ರ ಜವಳಿ, ಸುರೇಶ ಗುಡೂರ್, ವಿಶ್ವ ಮದಕರಿ, ದೇವು, ವಾಲ್ಮೀಕಿ ಸಮಾಜದ ಹಾಗೂ ದಲಿತ ಪರ ಸಂಘಟನೆಯ ನಗರ ಮತ್ತು ವಿವಿಧ ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.