
ಅಫಜಲಪುರ,ಅ.20: ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿರುವ ಹೊಸ ಪೆÇಲೀಸ್ ಠಾಣೆ ಉದ್ಘಾಟನೆಯಾಗಿ ಹಲವು ದಿನಗಳಾದರೂ ಪ್ರವೇಶದ ದಾರಿಯಲ್ಲಿ ಬೆಳಕಿನ ಸಮಸ್ಯೆ ಬಗೆಹರಿದಿಲ್ಲ. ಠಾಣೆಯೊಳಗಡೆ ವಿದ್ಯುತ್ ವ್ಯವಸ್ಥೆ ಇದ್ದರೂ, ಮುಖ್ಯ ದ್ವಾರದಿಂದ ಕಟ್ಟಡದವರೆಗೂ ಇರುವ ಸುಮಾರು 100 ಮೀಟರ್ ಸಿಸಿ ರಸ್ತೆ ಕತ್ತಲಲ್ಲಿ ಮುಳುಗಿದೆ.ರಾತ್ರಿ ವೇಳೆಯಲ್ಲಿ ಜನರು ಹಾಗೂ ಹಿರಿಯರು ಭಯದಿಂದಲೇ ಹಾದು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ದೀಪಾವಳಿ ಹಬ್ಬದಿಂದ ಪಟ್ಟಣದ ಬೀದಿಗಳು ಬೆಳಕಿನಿಂದ ಹೊಳೆಯುತ್ತಿದ್ದರೂ ಜನರ ಭದ್ರತೆಗೆ ಕಾವಲು ನಿಲ್ಲಬೇಕಾದ ಠಾಣೆ ಪ್ರವೇಶದ್ವಾರವೇ ಕತ್ತಲಲ್ಲಿ ಇರುವುದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೀಪಾವಳಿ ಹಬ್ಬ ನಿಮಿತ್ತ ಪಟ್ಟಣದಲ್ಲಿ ಪ್ರತೀ ಮನೆಯಲ್ಲಿ ಬೆಳಕು ಹೊಳೆಯುತ್ತಿದೆ. ಆದರೆ ನಮಗೆ ಕಾವಲುಗಾರರಿಗೂ ಬೆಳಕು ಮಾಡಿ ಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇವೆ.
ಮಂಜುನಾಥ ನಾಯಿಕೋಡಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷರು ಅಫಜಲಪುರ