ಬ್ಯಾಂಕ್ ಅಧಿಕಾರಿಗಳಿಗೆ ಸಿಸಿಟಿವಿ ಅಳವಡಿಸುವಂತೆ ಪೊಲೀಸರಿಂದ ನೋಟಿಸ್

ಕೊಲ್ಹಾರ:ಜೂ.19:ಪಟ್ಟಣದಲ್ಲಿರುವ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ಪೆÇಲೀಸ್ ಅಧಿಕಾರಿಗಳಿಂದ ಬುಧವಾರ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವಂತೆ ಜಾಗೃತಿ ಮೂಡಿಸಿ ನೋಟಿಸ್ ನೀಡಿದರು.
ಬ್ಯಾಂಕ್ ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ಬ್ಯಾಂಕುಗಳಲ್ಲಿ ಗುಣಮಟ್ಟದ ಸಿಸಿಟಿವಿ ಅಳವಡಿಸಬೇಕು ಮತ್ತು ಎಟಿಎಂ ಗಳಲ್ಲಿ ಹಗಲು ಮತ್ತು ರಾತ್ರಿ ಸರದಿಯಲ್ಲಿ ಸೆಕ್ಯೂರಿಟಿಗಳನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ಇದರಿಂದ ಕಳ್ಳತನ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಪಟ್ಟಣದ ಪೆÇಲೀಸ್ ಠಾಣೆ ಪಿಎಸ್‍ಐ ಎಂ ಬಿ ಬಿರಾದಾರ್ ಮಾಹಿತಿ ತಿಳಿಸಿದ್ದರು.