ಫಿಜಿಯೋಥೆರಪಿಯಿಂದ ಮನುಷ್ಯ ಸದೃಢವಾಗಿರಲು ಸಾಧ್ಯ: ಡಾ.ಹಲ್ಮಡಗಿ

ಕಲಬುರಗಿ,ಸೆ.13-ಪ್ರತಿಯೊಬ್ಬ ಮನುಷ್ಯನು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿರಲು ಫಿಜಿಯೋಥೆರಪಿ ಇಂದ ಮಾತ್ರ ಸಾಧ್ಯ ಎಂದು ಜ್ಞಾನ ಕಸ್ತೂರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಜಗನ್ನಾಥ್ ಹಲ್ಮಡಗಿ ಹೇಳಿದರು.
ಅವರು ನಗರದ ಹೊರ ವಲಯದಲ್ಲಿನ ಕಪನೂರ್ ಕೈಗಾರಿಕಾ ಪ್ರದೇಶದಲ್ಲಿರುವ ಜ್ಞಾನ ಕಸ್ತೂರಿ ಶಿಕ್ಷಣ ಸಂಸ್ಥೆಯ ನೂತನ ಚಲನ ಶೀಲತೆ ಪುನರ್ವಸತಿ ವಿಜ್ಞಾನ ಸಂಸ್ಥೆಯ ಬೌತ ಚಿಕಿತ್ಸೆಯ ಕಾಲೇಜಿನಲ್ಲಿ ವಲ್ರ್ಡ್ ಫಿಜಿಯೋಥೆರಪಿ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮನುಷ್ಯನು ಜೀವಿಸಲು ಆಹಾರ, ಗಾಳಿ,ನೀರು ಎಷ್ಟು ಮುಖ್ಯವೋ ಅಷ್ಟೇ ಫಿಜಿಯೋಥೆರಪಿಯು ನಮಗೆ ಮುಖ್ಯವಾಗಿದೆ ಎಂದರು.
ಈ ಕೋರ್ಸ್ ಕಲಿಯುವ ವಿದ್ಯಾರ್ಥಿಗಳಿಗೆ ಸರಕಾರಿ ಅರೆ ಸರಕಾರಿ ಹುದ್ದೆ ಅಷ್ಟೇ ಅಲ್ಲದೆ ಸ್ವಂತ ಉದ್ಯೋಗ ಸೃಷ್ಟಿಸಿಕೊಳ್ಳಲು ಮತ್ತು ಈ ತರಬೇತಿ ಕಲಿತ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗಕ್ಕೆ ಬೆನ್ನುಹತ್ತದೆ ಸ್ವಂತ ಉದ್ಯೋಗ ಮಾಡಬಹುದು ಇಂದಿನ ದಿನಗಳಲ್ಲಿ ಇಂಜಿನಿಯರ್ ಡಾಕ್ಟರ್ ಆಗಲು ಸಾಕಷ್ಟು ಹಣ ಸುರಿಯಬೇಕಾಗುತ್ತದೆ ಅದರ ಬದಲು ಒಳ್ಳೆಯ ತರಬೇತಿಯೂ ಸಹ ಇದ್ದು ಈ ತರಬೇತಿಯಿಂದ ಸರಕಾರಿ ನೌಕರಿಯು ಹಾಗೂ ಸ್ವಂತ ಆಸ್ಪತ್ರೆಯನ್ನು ಇಟ್ಟುಕೊಳ್ಳಲು ಸಾಧ್ಯ ಅಲ್ಲದೆ ಕಡಿಮೆ ವೆಚ್ಚದಲ್ಲಿ ಒಳ್ಳೆಯ ಉದ್ಯೋಗ ದೊರಕಲಿದೆ ಎಂದರು. ಈ ಸಂಸ್ಥೆಯ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ನೀತಾ ವಿನೋದ್ ಭೀಮಳ್ಳಿ ಹಾಗೂ ಅನೇಕ ಪದಾಧಿಕಾರಿಗಳನ್ನು ಸ್ಮರಿಸಿದರು.
ಡಾ.ಎ.ಕೆ. ಪತಿ ಒರಿಸ್ಸಾದವರಾಗಿದ್ದು ಕಲ್ಯಾಣ ಕರ್ನಾಟಕ ಭಾಗಕ್ಕೆ ಕಳೆದ 30 ವರ್ಷಗಳಿಂದ ಫಿಜಿಯೋಥೆರಫಿ ಎಂದರೆ ಏನು ಅದರಿಂದ ಗುಣಮುಖ ಮಾಡಲು ಹೇಗೆ ಸಾಧ್ಯ ಎಂಬುವ ಬಗ್ಗೆ ವಿಸ್ತಾರವಾಗಿ ತಿಳಿಸುತ್ತಾ ಬಂದಿದ್ದಾರೆ ಎಂದು ಅವರನ್ನು ಬಣ್ಣಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಸಚಿನ್ ಜೀವಣಗಿ, ಡಾ.ರಾಹುಲ್ ಲಡ್ಡ, ನೀತ ಭೀಮಳ್ಳಿ, ಡಾ.ಸಂಗಮೇಶ್ವರ, ಡಾ.ಚಿದಂಬರ ಪಾಟೀಲ್ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಎ.ಕೆ.ಪತಿ ಫಿಜಿಯೋಥೆರಫಿ ಕುರಿತು ಮಾರ್ಮಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ವಿಜಯಕುಮಾರ್, ವಿಶ್ವನಾಥ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಅರ್ಪಿತ ಕುಲಕರ್ಣಿ ನೆರವೇರಿಸಿದರು.