Home ಜಿಲ್ಲೆ ಕಲಬುರಗಿ ಎನ್‍ಎಸ್‍ಎಸ್‍ನಿಂದ ವ್ಯಕ್ತಿತ್ವ ವಿಕಸನ: ಡಾ.ಕಾಂತಾ

ಎನ್‍ಎಸ್‍ಎಸ್‍ನಿಂದ ವ್ಯಕ್ತಿತ್ವ ವಿಕಸನ: ಡಾ.ಕಾಂತಾ

ಕಲಬುರಗಿ,ಏ.1-ರಾಷ್ಟ್ರೀಯ ಸೇವಾ ಯೋಜನೆಯು ಶಿಬಿರಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ, ಸಹಬಾಳ್ವೆ, ಶ್ರಮದಾನ ಮಾಡುವುದರ ಮೂಲಕ ವ್ಯಕ್ತಿತ್ವ ವಿಕಾಸನಗೊಳಿಸುತ್ತದೆ. ತಂದೆ ತಾಯಿಗಳಿಗೆ, ಹಿರಿಯರಿಗೆ ಗೌರವ ಕೊಡುವುದೇ ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸಿದ್ದಪ್ಪಾ ಎಂ.ಕಾಂತಾ ಹೇಳಿದರು.
ಫರಹತಾಬಾದನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ 2025-26 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಇಂದುಮತಿ ಪಾಟೀಲ್ ಅವರು ಮಾತನಾಡುತ್ತಾ ಎನ್.ಎಸ್.ಎಸ್. ಶಿಬಿರದ ಮೂಲಕ ಗ್ರಾಮದ ಮತ್ತು ಕಾಲೇಜಿನ ಆವರಣದ ಪರಿಸರ ಸಂರಕ್ಷಣೆ,ಆರೋಗ್ಯ ಜಾಗೃತಿ,ಶ್ರಮದಾನ ಪ್ರಗತಿಪರ ಚಿಂತನೆ ಪ್ರಾಕೃತಿಕ ವಿಕೋಪ ಮತ್ತು ಪ್ರಕೃತಿ ಸಂರಕ್ಷಣೆ ಶೈಕ್ಷಣಿಕಮತ್ತು ಸಾಂಸ್ಕøತಿಕ ಚಟುವಟಿಕೆಗಳು ಮಕ್ಕಳು ಮತ್ತು ಮಹಿಳಾ ಜಾಗೃತಿ ಕೈಗೊಳ್ಳುವಲ್ಲಿ ಯಶಸ್ವಿಯಾಗಿದೆ ಇಂಥ ಚಟುವಟಿಕೆಗಳು ಇಡೀ ಶೈಕ್ಷಣಿಕ ವರ್ಷ ಕೈಗೊಂಡರೆ ವಿದ್ಯಾರ್ಥಿಗಳಲ್ಲಿ ಸ್ವಯಂ ಶ್ರಮದಾನದ ಪರಿಕಲ್ಪನೆ ಮೂಡುತ್ತದೆ ಎಂದರು.
ವೇದಿಕೆಯ ಮೇಲೆ ಡಾ.ಅಂಬೇಡ್ಕರ್ ಪದವಿ ಮಹಾ ವಿದ್ಯಾಲಯ ಕಲ್ಬುರ್ಗಿಯ ಪ್ರಾಧ್ಯಾಪಕರಾದ ಡಾ. ಶಿವಕುಮಾರ್ ಕಾಲೇಜಿನ ಸಾಂಸ್ಕೃತಿಕ ಸಂಚಾಲಕರಾದ ಡಾ. ಶಶಿಕಾಂತ್ ಪಾಟೀಲ್ ಮತ್ತು ಇತರರು ಉಪಸ್ಥಿತರಿದ್ದರು.
ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಡಾ.ಭೀಮಣ್ಣಾ ಎಚ್ ಸ್ವಾಗತಕೋರಿ ಪ್ರಸ್ತಾವಿಕ ಮಾತನಾಡಿದರು. ಡಾ.ಗಾಂಧೀಜಿ ಮೋಳಕೆರೆ ನಿರೂಪಿಸಿದರು. ಡಾ.ಹರ್ಷವರ್ಧನ್ ಬಿ ವಂದಿಸಿದರು.