ಟ್ರಾಫಿಕ್ ಜಾಮ್ ನಿಂದ ಹೈರಾಣಗುತ್ತಿರುವ ಜನತೆ

oplus_2

ವಿಜಯಪುರ.ಅ೧೮: ಪಟ್ಟಣದಲ್ಲಿ ಅಂಗ ತಟ್ಟಿ ನಂಜುಂಡಪ್ಪ ವೃತ್ತ (ಟೌನ್ ಹಾಲ್ ಸರ್ಕಲ್) ನಿಂದ ಕೋಲಾರ ರಸ್ತೆಯವರೆಗೂ ರಸ್ತೆಯ ಅಗಲೀಕರಣ ಹಾಗೂ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಸುಮಾರು ತಿಂಗಳಿಂದ ನಡೆಯುತ್ತಿದೆ.


ಕಾಮಗಾರಿ ಪ್ರಯುಕ್ತ ರಸ್ತೆಯಲ್ಲಿ ಏಕಮುಖ ಸಂಚಾರ ವಿಧಿಸಿದ್ದು, ಅದರಲ್ಲಿಯೂ ಶುಕ್ರವಾರದ ಸಂತೆ ನಡೆಯುತ್ತಲಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ತಿರುಪ,ತಿ ಶಿಡ್ಲಘಟ್ಟ, ಸೇರಿದಂತೆ ರಾಜ್ಯ ಹಾಗೂ ಅಂತರ್ರ್‍ಆಜ್ಯ ವಿಭಾಗದ ಎಲ್ಲಾ ಸರ್ಕಾರಿ, ಖಾಸಗಿ ಬಸ್ಸುಗಳು ಮತ್ತು ವಾಹನಗಳು ಇದೆ ಅಂಗತಟ್ಟಿ ನಂಜುಂಡಪ್ಪ ವೃತ್ತದ ಮೂಲಕವೇ ಹಾದು ಹೋಗಬೇಕಾಗಿದ್ದು, ಇಲ್ಲಿ ದಿನ ಬೆಳಗಿನಿಂದ ರಾತ್ರಿಯವರೆಗೂ ಟ್ರಾಫಿಕ್ ಜಾಮ್ ಆಗುತ್ತಾ ವಾಹನಗಳು ಹಾಗೂ ಜನರು ಸಂಚರಿಸಲು ಪರದಾಡುತ್ತಿದ್ದರು ಸಹ, ಪೊಲೀಸ್ ಇಲಾಖೆ ಬಸ್ ನಿಲ್ದಾಣದಲ್ಲಿ ಆಗಲಿ, ಅಂಗತಟ್ಟಿ ನಂಜುಂಡಪ್ಪ ವೃತ್ತದಲ್ಲಾಗಲಿ, ಬಸವೇಶ್ವರ ಬಸ್ ನಿಲ್ದಾಣ (ಮೋರಿ ಸ್ಟಾಪ್) ನಲ್ಲಾಗಲಿ ಯಾವುದೇ ಪೊಲೀಸ್ ಸಿಬ್ಬಂದಿಯನ್ನು ನೇಮಿಸದೆ ಜನರೇ ಸಂಚಾರ ನಿಯಂತ್ರಣ ಮಾಡಿಕೊಳ್ಳಲಿ ಎಂದು ಬಿಟ್ಟಂತೆ ಕಾಣುತ್ತಿದೆ. ಎಂದು ಸಾರ್ವಜನಿಕರು ಆರೋಪಿಸಿರುತ್ತಾರೆ.


ಅದರಲ್ಲಿಯೂ ಬೆಳಗಿನ ಸಮಯ ೯ ರಿಂದ ೧೧ ಗಂಟೆಯವರೆಗೆ ಹಾಗೂ ಸಂಜೆ ೩.೩೦ ರಿಂದ-೫:೩೦ರ ವರೆಗೆ ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳ ಸುಮಾರು ನಾಲ್ಕರಿಂದ ಐದು ಸಾವಿರಕ್ಕೂ ಹೆಚ್ಚು ಮಕ್ಕಳು ಇದೇ ಜಾಗದಲ್ಲಿ ಸಂಚರಿಸಲಿದ್ದು, ಸಾಕಷ್ಟು ಪೊಲೀಸ್ ಇಲಾಖೆಯ ಸಭೆಗಳಲ್ಲಿಯೂ ಇದರ ಬಗ್ಗೆ ಪೊಲೀಸರಿಗೆ ಗಮನಕ್ಕೆ ತಂದಿದ್ದರು ಪತ್ರಿಕೆಗಳಲ್ಲಿ ಹಲವು ಬಾರಿ ಪ್ರಕಟಗೊಂಡಿದ್ದರು ಸಹ ಪೊಲೀಸರು ವಾಹನದಟ್ಟಣೆಯನ್ನು ನಿಯಂತ್ರಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ.


ಹಣ ವಸೂಲಿ ಆರೋಪ;. ಪೊಲೀಸ ಇಲಾಖೆಯ ಸಿಬ್ಬಂದಿಯವರು ಈ ಪರಿಯಲ್ಲಿ ಪಟ್ಟಣದಲ್ಲಿ ಟ್ರಾಫಿಕ್ ಜಾಮ್ ನಿಂದ ಸಾರ್ವಜನಿಕರು ಪರದಾಡುತ್ತಿದ್ದರೆ, ಪಟ್ಟಣದ ಹೊರ ಭಾಗದಲ್ಲಿ ಜಂಗ್ಲಿ ಪೀರ್ ಬಾಬಾ ದರ್ಗಾ ಬಳಿ, ಮತ್ತಿತರೆ ಆಯಕಟ್ಟು ಪ್ರದೇಶಗಳಲ್ಲಿ ನಿಂತುಕೊಂಡು ಹೆಲ್ಮೆಟ್ ಇಲ್ಲ, ಡಿಎಲ್ ಇಲ್ಲ, ತ್ರಿಬಲ್ ರೈಡಿಂಗ್ ಮುಂತಾದ ಕೇಸುಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಹಣ ಸಂಗ್ರಹಣೆಯಲ್ಲಿ ತೊಡಗಿರುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿರುತ್ತಾರೆ.


ಅದರಲ್ಲಿಯೂ ಈ ಹಿಂದೆ ಇದ್ದ ಎಲ್ಲಾ ಪಿಎಸ್‌ಐ ಹಾಗೂ ವೃತ ನಿರೀಕ್ಷಕರುಗಳು ರಸ್ತೆಗೆ ಬಂದು ಕರ್ತವ್ಯ ನಿರ್ವಹಿಸುವುದನ್ನು ಕಂಡಿದ್ದೆವು ಆದರೆ ಇದೀಗ ರಸ್ತೆಗೆ ಬಾರದೇ ಠಾಣೆಯಲ್ಲಿಯೇ ಕುಳಿತು ಇರುವ ಸಬ್ ಇನ್ಸ್ಪೆಕ್ಟರ್ ಹಾಗೂ ಇನ್ಸ್ಪೆಕ್ಟರ್ ಗಳನ್ನು ಯಾರೆಂದು ಯಾರಿಗೂ ತಿಳಿಯದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿರುತ್ತಾರೆ.
ಸರ್ಕಾರ, ಶಾಸಕರು ಹಾಗೂ ಮುಖಂಡರುಗಳು ಈ ಸಮಸ್ಯೆಗೆ ಪರಿಹಾರ ದೊರಕಿಸಲು ಪ್ರಯತ್ನಿಸಬೇಕಾಗಿದೆ