
ಬೆಂಗಳೂರು, ಏ. ೧೩- ವಿಧಾನಸೌಧಕ್ಕೆ ಮತ್ತೆ ತಾವು ವಾಪಸ್ ಬರುವುದು ಜನರ ಆಶೀರ್ವಾದ ಅದು ಭಗವಂತನ ಇಚ್ಛೆ ಮೇಲೆ ನಿಂತಿದೆ ಎಂದು ಕೇಂದ್ರದ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಕೇಂದ್ರದ ಸಚಿವರಾಗಿ ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಿಧಾನಸೌಧಕ್ಕೆ ಮಂಡ್ಯದಲ್ಲಿ ಕೈಗಾರಿಕೆಸ್ಥಾಪನೆ ಸಂಬಂಧ ಚರ್ಚಿಸಲು ವಿಧಾನಸೌಧಕ್ಕೆ ಇಂದು ಆಗಮಿಸಿದ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಕೆಲ ವಿಚಾರಗಳ ಚರ್ಚೆಗಾಗಿ ವಿಧಾನಸೌಧಕ್ಕೆ ಬಂದಿದ್ದೇನೆ ಎಂದರು.
ಮತ್ತೆ ವಿಧಾನಸೌಧಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ ಅವೆಲ್ಲಾ ಭಗವಂತ ಮತ್ತು ರಾಜ್ಯದ ಜನತೆನಿಗದಿ ಮಾಡುತ್ತಾರೆ. ಜನರ ಆಶೀರ್ವಾದದ ಜತೆಗೆ ಭಗವಂತ ನಮ್ಮ ಹಣೆಯಲ್ಲಿ ಬರೆದಿದ್ದರೆ ಅದು ಹಾಗೆಯೇ ಆಗ ತ್ತದೆ ನೋಡೋಣ. ಮುಂದಿನ ದಿನಗಳಲ್ಲಿ ಭಗವಂತನ ಇಚ್ಛೆ ಏನಿದೆ ಎಂದರು.
ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ವಿಧಾನಸೌಧಕ್ಕೆ ಬರಲು ಜನರ ಆಶೀರ್ವಾದ ಪಡೆಯಲು ಪ್ರಯತ್ನ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ಸಭೆ
ಇದಾದ ಬಳಿಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಮಂಡ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆಟೋಮೋಟಿವ್ ರಿಸರ್ಚ್ ಕೈಗಾರಿಕೆಯ ಸಂಬಂಧ ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮತ್ತು ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದರು
ಅದ್ಧೂರಿ ಸ್ವಾಗತ
ಕೇಂದ್ರ ಸಚಿವರಾದ ನಂತರ ವಿಧಾನಸೌಧಕ್ಕೆ ಮೊದಲ ಬಾರಿಗೆ ಆಗಮಿಸಿದ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಶಾಸಕರು ವಿಧಾನಸೌಧದ ಬಳಿ ಅದ್ಧೂರಿಯಾಗಿ ಸ್ವಾಗತಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಶಾಸಕರುಗಳಾದ ಶರವಣ, ಬೋಜೇಗೌಡ ಸೇರಿದಂತೆ ಹಲವು ಶಾಸಕರುಕುಮಾರಸ್ವಾಮಿ ಅವರಿಗೆಹೂ ಗುಚ್ಛ ನೀಡಿ ಸ್ವಾಗತಿಸಿದ್ದು, ವಿಶೇಷವಾಗಿತ್ತು.























