
ಕಲಬುರಗಿ,ಫೆ 10: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಪಂಥ ನಿರಪೇಕ್ಷತೆ ಹೇಳಿಕೆಯನ್ನು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಾಮರಾವ್ ಪ್ಯಾಟಿ ಅವರು ಸ್ವಾಗತಿಸಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‍ಎಸ್‍ಎಸ್ ಹೊಸ ದಿಗಂತಗಳು ವಿಷಯ ಕುರಿತು ಉಪನ್ಯಾಸ ನೀಡಿದ ಭಾಗವತ್ ಅವರು ಭಾರತದಲ್ಲಿರುವ ಎಲ್ಲರೂ ಹಿಂದೂಗಳು. ಹಿಂದೂ ಗುಣವಾಚಕ. ಧರ್ಮ ನಿರಪೇಕ್ಷತೆಯಿಂದ ಪಂಥ ನಿರಪೇಕ್ಷತೆ ಕಡೆಗೆ ಎಂಬ ಪದ ಪ್ರಯೋಗ ಸರಿ ಎಂದು ಪ್ರತಿಪಾದಿಸಿದ್ದಾರೆ ಎಂದು ಪ್ಯಾಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಂಥ ನಿರಪೇಕ್ಷತೆ ಕಾರ್ಯರೂಪಕ್ಕೆ ಬಂದರೆ ದಲಿತರು, ಬುಡಕಟ್ಟು ಜನಾಂಗ, ಆದಿವಾಸಿಗಳು, ಅತಿ ಹಿಂದುಳಿದ ಜಾತಿಯವರು ಸರಿಸಮ ಬಾಳಬಹುದು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಎಂದು ಅವರು ಆಗ್ರಹಿಸಿದ್ದಾರೆ.






















