Home ಜಿಲ್ಲೆ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಂಸ್ಥಾಪನ ದಿನಾಚರಣೆ

ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಂಸ್ಥಾಪನ ದಿನಾಚರಣೆ

ಸಂಜೆವಾಣಿ ವಾರ್ತೆ,
ವಿಜಯಪುರ, ಏ. ೭: ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವನ್ನು ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಭಾರತಮಾತೆ ಹಾಗೂ ಪಕ್ಷದ ಸಂಸ್ಥಾಪನೆ ಮಾಡಿದ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಕಾರ್ಯಕರ್ತರು ಉತ್ಸಾಹದಿಂದ ಬಿಜೆಪಿ ಪಕ್ಷದ ಧ್ವಜವನ್ನು ಪ್ರದರ್ಶಿಸಿ ದೇಶಾಭಿಮಾನದ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ರಾಷ್ಟ್ರಾಭಿಮಾನವನ್ನೇ ಉಸಿರಾಗಿಸಿಕೊಂಡಿರುವ ಬಿಜೆಪಿ ಇಂದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿದೆ. ಶ್ಯಾಂ ಪ್ರಸಾದ್ ಮುಖರ್ಜಿ, ಪಂ.ದೀನದಯಾಳ ಉಪಾಧ್ಯಾಯ ಅವರಂತಹ ಶ್ರೇಷ್ಠ ಚಿಂತನೆಯ ಸ್ವರೂಪದಲ್ಲಿ ಉದಯಿಸಿದ ಬಿಜೆಪಿ ಇಂದಿಗೂ ಜನ ಸೇವೆಯನ್ನೇ ಉಸಿರಾಗಿಸಿಕೊಂಡಿದೆ. ಪಕ್ಷ ಇಂದು ಹೆಮ್ಮರವಾಗಿ ಬೆಳೆದಿದೆ. ಬಿಜೆಪಿಯ ದೇಶನಿಷ್ಠೆಯ ಫಲವಾಗಿಯೇ ಇಂದು ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅರಳಿದೆ. ಉತ್ತಮ ಆಡಳಿತ ನೀಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ವಿಶ್ವದಲ್ಲಿಯೇ ದೊಡ್ಡ ಹೆಸರು ಮಾಡಿದೆ ಎಂದರು.
ಬಿಜೆಪಿ ಪಕ್ಷ ನಮ್ಮ ಉಸಿರು, ಕಾರ್ಯಕರ್ತರು ನಮ್ಮ ಆಸ್ತಿ, ಈ ಪವಿತ್ರ ಪಕ್ಷದಲ್ಲಿರುವ ಅವಕಾಶ ನನಗೆ ಒದಗಿ ಬಂದಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಭಾರತೀಯ ಸಂಸ್ಕೃತಿ, ಅದಮ್ಯ ದೇಶಭಕ್ತಿ, ದೇಶಕ್ಕಾಗಿ ಸಮರ್ಪಣಾ ಮನೋಭಾವ, ಸ್ವದೇಶಿ, ಸ್ವಾಭಿಮಾನ, ಆತ್ಮ ನಿರ್ಭರ ಈ ಎಲ್ಲ ತತ್ವಗಳು ಬಿಜೆಪಿಯ ಆಧಾರ ಸ್ತಂಭಗಳಾಗಿವೆ. ಉಳಿದ ರಾಜಕೀಯ ಪಕ್ಷಗಳಂತೆ ಬಿಜೆಪಿ ಅಲ್ಲ. ಬಿಜೆಪಿ ಜನ ಹಿತ, ರಾಷ್ಟ್ರ ಹಿತವೇ ಆದ್ಯ ಎಂದರು.
ಬಿಜೆಪಿ ಪಕ್ಷ ಇಂದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿರುವುದೇ ಬಿಜೆಪಿಯ ಬದ್ಧತೆಯ ಒಂದು ಸಾಕ್ಷಿ ಎಂದರು.
ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ ಮಾತನಾಡಿದರು.
ಪ್ರಮುಖರಾದ ವಿಜುಗೌಡ ಪಾಟೀಲ, ಸಂಜೀವ ಐಹೊಳೆ, ವಿವೇಕಾನಂದ ಡಬ್ಬಿ, ವಿಜಯಕುಮಾರ ಕೊಡಗಿನೂರ, ಸಂಜಯ ಪಾಟೀಲ ಕನಮಡಿ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಮಹೇಂದ್ರಕುಮಾರ ನಾಯಕ, ಎಸ್.ಎ. ಪಾಟೀಲ, ಬಸವರಾಜ ಬೈಚಬಾಳ, ಉಮೇಶ ಕೊಳಕೂರ, ರಮೇಶ ಬಿದನೂರ, ಮಲ್ಲಿಕಾರ್ಜುನ ಜೋಗೂರ, ಸ್ವಪ್ನಾ ಕಣಮುಚನಾಳ, ಮಲ್ಲು ಕಲಾದಗಿ, ಸಂದೀಪ ಪಾಟೀಲ, ಸಿದ್ದನಗೌಡ ಬಿರಾದಾರ, ವಿಜಯ ಜೋಶಿ, ಹರ್ಷಗೌಡ ಪಾಟೀಲ, ಪಾಪುಸಿಂಗ್ ರಜಪೂತ, ಭರತ ಕೋಳಿ, ಶರಣಬಸಪ್ಪ ಕುಂಬಾರ, ವಿನಾಯಕ ದಹಿಂಡೆ, ಅಪ್ಪು ಕುಂಬಾರ, ವಿಕಾಸ ಪದಕಿ, ಮಹಾದೇವ ದರ್ಗಾ, ಕಲ್ಮೇಶ ಹಿರೇಮಠ ಹಾಗೂ ವಾರೀಶ ಕುಲಕರ್ಣಿ ಪಾಲ್ಗೊಂಡಿದ್ದರು.