Home ಜಿಲ್ಲೆ ಕಲಬುರಗಿ ಕಲಬುರ್ಗಿಯಲ್ಲಿ ೮೯೩ ನೇ ಬಸವ ಜಯಂತೋತ್ಸವ ಸೇಡಂನಲ್ಲಿ ಕರಪತ್ರ ಬಿಡುಗಡೆ

ಕಲಬುರ್ಗಿಯಲ್ಲಿ ೮೯೩ ನೇ ಬಸವ ಜಯಂತೋತ್ಸವ ಸೇಡಂನಲ್ಲಿ ಕರಪತ್ರ ಬಿಡುಗಡೆ

ಸೇಡಂ,ಏ,೧೩: ಕಲಬುರಗಿಯಲ್ಲಿ ಇದೇ ತಿಂಗಳು ೧೯ ರಂದು ನಡೆಯಲಿರುವ ಬಸವ ಜಯಂತಿ ೨೦೨೬ ಪ್ರಯುಕ್ತ ಬೃಹತ್ ಸಾರ್ವಜನಿಕ ಸಭೆ ಹಾಗೂ ೮೯೩ ನೇ ಬಸವ ಜಯಂತೋತ್ಸವ, ಬೃಹತ್ ಮೆರವಣಿಗೆಯ ಕರಪತ್ರಗಳನ್ನು ಜಯಂತೋತ್ಸವ ಸಮಿತಿ ಜಿಲ್ಲಾ ಪದಾಧಿಕಾರಿಗಳು ಇಲ್ಲಿ ಬಿಡುಗಡೆ ಮಾಡಲಾಯಿತು.ಪಟ್ಟಣದಲ್ಲಿರುವ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ
ಪೂರ್ವಭಾವಿ ಸಭೆಯಲ್ಲಿ ಜಯಂತೋತ್ಸವ ಸಮಿತಿಯ ಪದಾಧಿಕಾರಿಗಳು ಬಿಡುಗಡೆ ಮಾಡಿ ಮಾತನಾಡಿದರು.ಈ ವೇಳೆಯಲ್ಲಿ ಪೂಜ್ಯ ಶ್ರೀ ಡಾ. ಸದಾಶಿವ ಮಹಾಸ್ವಾಮಿಗಳು, ಪೂಜ್ಯ ಶ್ರೀ ಪಂಚಾಕ್ಷರಿ ಮಹಾಸ್ವಾಮಿ, ಸಚಿವ ಡಾ. ಶರಣಪ್ರಕಾಶ ಪಾಟೀಲ್ ಊಡಗಿ, ಬಿ.ಆರ್ ಪಾಟೀಲ್, ಬಿ.ಜಿ ಪಾಟೀಲ್,ಅಮರನಾಥ್ ಪಾಟೀಲ್, ರಾಜಶೇಖರ್ ನೀಲಂಗಿ, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್,ಶರಣು ಮೊದ್ದಿ, ರವಿಂದ್ರ ಶಾಹಬಾದಿ, ಶಿವಕುಮಾರ್ ಪಾಟೀಲ್ ತೇಲ್ಕೂರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು