ಆಫ್ಘನ್ ಮೇಲೆ ಪಾಕ್ ವೈಮಾನಿಕ ದಾಳಿ:ಮೂವರು ಕ್ರಿಕೆಟಿಗರು ಸೇರಿ ೧೦ ಮಂದಿ ಸಾವು

ಕಾಬೂಲ್, ಅ.೧೮- ಆಫ್ಘಾನಿಸ್ತಾನ ಮೇಲೆ ಪಾಕಿಸ್ತಾನ ಮತ್ತು ಆಫ್ಘಾನ್ ಸಂಘರ್ಷ ಮುಂದುವರೆದಿದ್ದು ನಿನ್ನೆ ತಡರಾತ್ರಿ ಪಾಕಿಸ್ತಾನ ನಡೆಸಿದ ವಾಯು ದಾಳಿಯಲ್ಲಿ ಆಫ್ಘಾನಿಸ್ತಾನ ಮೂವರು ಕ್ರಿಕೆಟಿಗರು ಸೇರಿ ಕನಿಷ್ಠ ೧೦ ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ,


ಉಭಯ ದೇಶಗಳ ನಡುವಿನ ಒಂದು ವಾರದ ರಕ್ತಸಿಕ್ತ ಗಡಿ ಘರ್ಷಣೆಯ ನಂತರ ೪೮ ಗಂಟೆಗಳ ಕದನ ವಿರಾಮವನ್ನು ಘೋಷಿಸಲಾಯಿತು, ಆದರೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ವೈಮಾನಿಕ ವಾಯುದಾಳಿ ನಡೆಸಿದೆ ಎಂದು ಆಫ್ಘಾನಿಸ್ತಾನದ ಆಧಿಕಾರಿಗಳು ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೆ ಎಂದಿದ್ದಾರೆ.


ಪಾಕಿಸ್ತಾನ, ನಿನ್ನೆ ತಡರಾತ್ರಿ ಪಕ್ತಿಕ ಪ್ರಾಂತ್ಯದ ೩ ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸಿದ್ದರಿಂದ ಮೂವರು ಕ್ರಿಕೆಟಿಗರು ಸೇರಿ ೧೦ ನಾಗರಿಕರು ಸಾವನಪ್ಪಿದ್ದು ೧೨ ಜನ ಗಾಯಗೊಂಡಿದ್ದಾರೆ ಸತ್ತವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ.


ಕ್ರಿಕೆಟ್ ಪಂದ್ಯಾವಳಿಗಾಗಿ ಈ ಪ್ರದೇಶಕ್ಕೆ ಬಂದಿದ್ದ ಮೂವರು ಯುವ ಕ್ರಿಕೆಟ್ ಆಟಗಾರರಾದ ಕಬೀರ್, ಸಿಬ್ಗಗತ್‌ಉಲ್ಲಾ ಮತ್ತು ಹರೂನ್ ಮೃತಪಟ್ಟಿದ್ದಾರೆ.
ಆಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್‌ಖಾನ್ ಮುತ್ತಕಿ ಅವರ ಭಾರತ ಭೇಟಿ ಬೆನ್ನಲ್ಲೇ ಪಾಕಿಸ್ತಾನ ಕಾಬೂಲ್ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಗೆ ಪ್ರತಿಕಾರವಾಗಿ ಆಫ್ಘಾನಿಸ್ತಾನ್ ಡುರಾಂಡ್ ಲೈನ್ ಗಡಿಯಲ್ಲಿ ೧೨ ಪಾಕಿಸ್ತಾನ ಸೈನಿಕರನ್ನು ಹತ್ಯೆ ಮಾಡಿತ್ತು. ಈಗ ಮತ್ತೆ ಪಾಕಿಸ್ತಾನವು ಗಡಿ ಭಾಗದಲ್ಲಿ ದಾಳಿ ನಡೆಸಿ ಮೂವರು ಕ್ರಿಕೆಟಿಗರು ಸೇರಿ ಹತ್ತು ಮಂದಿಯನ್ನು ಹತ್ಯೆ ಮಾಡಿದೆ.


ಪಾಕ್-ಆಫ್ಘಾನ್ ಸಂಘರ್ಷ ಹಿನ್ನೆಲೆಯಲ್ಲಿ ಆಫ್ಘಾನ್ ನಿರಾಶ್ರಿತ ಶಿಬಿರವನ್ನು ಬಂದ್ ಮಾಡಿದ್ದು ಪಾಕಿಸ್ತಾನದಿಂದ ೧೪ ಲಕ್ಷಕ್ಕೂ ಹೆಚ್ಚು ನಿರಾಶ್ರಿತರನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಲಾಗಿದೆ.


ತ್ರಿಕೋನ ಸರಣಿಯಿಂದ ಆಫ್ಘಾನ್ ಹಿಂದೆ ಆಫ್ಘಾನ್


ವೈಮಾನಿಕ ದಾಳಿಯಲ್ಲಿ ಆಫ್ಘಾನಿಸ್ತಾನದ ೩ ಕ್ರಿಕೆಟಿಗರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ, ಪಾಕಿಸ್ತಾನ, ಆಫ್ಘಾನಿಸ್ತಾನದ ನಡುವೆ ನಿಗದಿಯಾಗಿದ್ದ ತ್ರಿಕೋನ ಟಿ-೨೦ ಕ್ರಿಕೆಟ್ ಸರಣಿಯಿಂದ ಆಫ್ಘಾನಿಸ್ತಾನ ಹಿಂದೆ ಸರಿದಿದೆ.

ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ನಡುವಿನ ಗಡಿಯಾಚೆಗಿನ ದಾಳಿಯಲ್ಲಿ ಮೂವರು ಸ್ಥಳೀಯ ಕ್ರಿಕೆಟಿಗರು ಸಾವನ್ನಪ್ಪಿದ ನಂತರ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

ಪ್ರಮುಖ ಬೆಳವಣಿಗೆಯೊಂದರಲ್ಲಿ, ದೇಶದ ಉರ್ಗುನ್ ಜಿಲ್ಲೆಯಲ್ಲಿ ನಡೆದ ಗಡಿಯಾಚೆಗಿನ ದಾಳಿಯಲ್ಲಿ ಮೂವರು ಸ್ಥಳೀಯ ಕ್ರಿಕೆಟಿಗರು ಸಾವನ್ನಪ್ಪಿದ ಕಾರಣ, ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡಿದ್ದು ಪಾಕಿಸ್ತಾನದ ವಿರುದ್ದ ಕ್ರಿಕೆಟ್ ಆಡುವುದಿಲ್ಲ ಎಂದು ಘೋಷಿಸಿದೆ. ಇದರಿಂದ ಪಾಕಿಸ್ತಾನಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ನವೆಂಬರ್ ೧೭ ರಿಂದ ೨೯ ರವರೆಗೆ ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ನಡೆಯಬೇಕಿದ್ದ ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಪರಸ್ಪರ ಸೆಣಸಾಡಲು ಸಿದ್ಧವಾಗಿದ್ದವು ಎಂಬುದು ಗಮನಿಸಬೇಕಾದ ಸಂಗತಿ.

ಈ ಕುರಿತು ಮಾಹಿತಿ ನೀಡಿರುವ ಆಫ್ಘಾನಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ, ಪಕ್ತಿಕಾ ಪ್ರಾಂತ್ಯದ ರಾಜಧಾನಿ ಶರಾನಾದಲ್ಲಿ ಸ್ನೇಹಪರ ಪಂದ್ಯವನ್ನು ಆಡಿ ಮನೆಗೆ ಮರಳುತ್ತಿದ್ದ ಮೂವರು ಸ್ಥಳೀಯ ಕ್ರಿಕೆಟಿಗರ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿ ಅವರ ಸಾವಿಗೆ ಕಾರಣವಾಗಿರುವುದು ನೋವು ತಂದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ದ ತ್ರಿಕೋನ ಕ್ರಿಕೆಟ್ ಸರಣಿಯಿಂದ ಹಿಂದೆ ಸರಿದಿರುವುದಾಗಿ ಪ್ರಕಟಿಸಿದೆ.

ಪಕ್ತಿಕಾ ಪ್ರಾಂತ್ಯದ ಉರ್ಗುನ್ ಜಿಲ್ಲೆಯ ಧೈರ್ಯಶಾಲಿ ಕ್ರಿಕೆಟಿಗರ ದುರಂತ ಹುತಾತ್ಮತೆಯ ಬಗ್ಗೆ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತನ್ನ ದುಃಖ ವ್ಯಕ್ತಪಡಿಸುತ್ತದೆ” ಎಂದು ಎಸಿಬಿ ಟ್ವೀಟ್ ಮಾಡಿದೆ.

ದುರಂತ ಘಟನೆಗೆ ಪ್ರತಿಕ್ರಿಯೆಯಾಗಿ ಮತ್ತು ಸಂತ್ರಸ್ತರಿಗೆ ಗೌರವದ ಸೂಚಕವಾಗಿ, ನವೆಂಬರ್ ಅಂತ್ಯದಲ್ಲಿ ನಡೆಯಲಿರುವ ಪಾಕಿಸ್ತಾನ ಒಳಗೊಂಡ ಮುಂಬರುವ ತ್ರಿಕೋನ ಟಿ೨೦ ಸರಣಿಯಲ್ಲಿ ಭಾಗವಹಿಸುವುದರಿಂದ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಹೇಳಿದೆ.


ರಷೀದ್‌ಖಾನ್ ಖಂಡನೆ


ಪಾಕ್ ದಾಳಿಯಿಂದ ಆಫ್ಘಾನಿಸ್ತಾನದ ಮೂವರು ಕ್ರಿಟಿಗರು ಸಾವನ್ನಪ್ಪಿರುವುದಕ್ಕೆ ಆಫ್ಘಾನಿಸ್ತಾನದ ಕ್ರಿಕೆಟಿಗರು ಕಿಡಿ ಕಾರಿದ್ದು ಕ್ರಿಕೆಟಿಗ ರಷೀದ್ ಖಾನ್ ಸೇರಿದಂತೆ ಹಲವರು ಪಾಕ್‌ನ ಕೃತ್ಯವನ್ನು ಖಂಡಿಸಿದ್ದಾರೆ,