
ಇಸ್ಲಾಮಾಬಾದ್, ಜೂ.೩೦- ವಿಶ್ವಸಂಸ್ಥೆ ನಿರ್ಣಯಗಳು ಮತ್ತು ಕಾಶ್ಮೀರಿ ಜನತೆಯ ಆಕಾಂಕ್ಷೆಗಳಿಗೆ ಅನುಗುಣವಾಗಿ ಕಾಶ್ಮೀರ ವಿಷಯದ ನ್ಯಾಯಸಮ್ಮತವಾದ ನಿರ್ಣಯಕ್ಕೆ ಪಾಕಿಸ್ತಾನ ಪ್ರತಿಪಾದಿಸುತ್ತದೆ ಎಂದು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಹೇಳಿದ್ದಾರೆ.
ಕರಾಚಿಯಲ್ಲಿ ಪಾಕಿಸ್ತಾನ್ ನೌಕಾ ಅಕಾಡೆಮಿಯಲ್ಲಿ ಮಾತನಾಡಿದ ಅವರು ‘ಕಾಶ್ಮೀರವು ಪಾಕಿಸ್ತಾನದ ಕಂಠನಾಳ(ಕತ್ತಿನಲ್ಲಿರುವ ಪ್ರಧಾನ ಅಭಿದಮನಿ)ವಾಗಿದ್ದು ಪ್ರದೇಶದಲ್ಲಿ ಶಾಶ್ವತ ಶಾಂತಿಗಾಗಿ ಕಾಶ್ಮೀರ ಸಮಸ್ಯೆಗೆ ನ್ಯಾಯಯುತ ಮತ್ತು ಶಾಂತಿಯುತ ನಿರ್ಣಯಕ್ಕೆ ಆಗ್ರಹಿಸಿದರು.
ಕಾಶ್ಮೀರಿ ಜನರ ಹಕ್ಕುಗಳು ಮತ್ತು ದೀರ್ಘಕಾಲದ ವಿವಾದದ ಪರಿಹಾರಕ್ಕಾಗಿ ನಾವು ದೃಢವಾಗಿ ನಿಲ್ಲುತ್ತೇವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ ಮತ್ತು ಕಾಶ್ಮೀರದ ಜನರ ಆಕಾಂಕ್ಷೆಗಳ ಪ್ರಕಾರ, ಭಾರತವು ಭಯೋತ್ಪಾದನೆ ಎಂದು ಕರೆಯುವುದು ವಾಸ್ತವವಾಗಿ ಕಾನೂನುಬದ್ಧ ಹೋರಾಟವಾಗಿದೆ ಎಂದು ಹೇಳಿದರು.
ಕಾಶ್ಮೀರ ಸಮಸ್ಯೆಗೆ ನ್ಯಾಯಯುತ ಮತ್ತು ಶಾಂತಿಯುತ ಪರಿಹಾರವಿಲ್ಲದೆ, ಪ್ರಾದೇಶಿಕ ಶಾಂತಿ ಯಾವಾಗಲೂ ಸಾಧಿಸಲಾಗದು ಮತ್ತು ದಕ್ಷಿಣ ಏಷ್ಯಾ ಯಾವಾಗಲೂ ಅಪಾಯದಲ್ಲಿದೆ ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಬೇಕು. ಜೆಕೆಯಲ್ಲಿ ಸ್ವ-ನಿರ್ಣಯದ ಹಕ್ಕಿಗಾಗಿ ಹೋರಾಡುತ್ತಿರುವವರಿಗೆ ನಾನು ಗೌರವ ಸಲ್ಲಿಸುತ್ತೇನೆ, ಅವರ ಪರಿಶ್ರಮ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಅಸಿಮ್ ಮುನೀರ್ ಹೇಳಿದರು.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಪದೇ ಪದೇ ಸ್ಪಷ್ಟಪಡಿಸಿದೆ, ಇದರ ಸಾಂವಿಧಾನಿಕ ಸ್ಥಾನಮಾನವನ್ನು ಆಗಸ್ಟ್ ೫, ೨೦೧೯ ರಂದು ಮತ್ತಷ್ಟು ಸ್ಪಷ್ಟಪಡಿಸಲಾಯಿತು. ಪಾಕಿಸ್ತಾನವು ಕಾಶ್ಮೀರದಲ್ಲಿ ಕೋಮು ದ್ವೇಷ ಮತ್ತು ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ.
ಅಂತರರಾಷ್ಟ್ರೀಯ ವೇದಿಕೆಗಳಲ್ಲಿ, ಭಾರತವು ಪಾಕಿಸ್ತಾನವನ್ನು ಭಯೋತ್ಪಾದನೆಯ ಕೇಂದ್ರವೆಂದು ಬಣ್ಣಿಸಿದೆ, ವಿಶೇಷವಾಗಿ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಮತ್ತು ಟಿಆರ್‌ಎಫ್‌ನಂತಹ ಸಂಘಟನೆಗಳಿಗೆ ಸಂಬಂಧಿಸಿದಂತೆ. ಪಾಕಿಸ್ತಾನದ ಬೆಂಬಲವು ವಾಸ್ತವವಾಗಿ ಭಯೋತ್ಪಾದಕರಿಗೆ ಮಿಲಿಟರಿ ತರಬೇತಿ, ಹಣಕಾಸು ಮತ್ತು ಲಾಜಿಸ್ಟಿಕಲ್ ಬೆಂಬಲವನ್ನು ನೀಡುತ್ತದೆ ಎಂದು ಭಾರತ ತಿಳಿಸಿದೆ.