
ಕಲಬುರಗಿ,ಏ.1-ಚಿತ್ರಕಲೆ ಭಾವನೆಗಳು ಮತ್ತು ಅನುಭವಗಳ ಅಭಿವ್ಯಕ್ತಿಯ ಮಾಧ್ಯಮವಾಗಿದ್ದು, ಅದು ಒಂದು ಜಾಗತಿಕ ಭಾಷೆಯಾಗಿದೆ ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪೆÇ್ರ.ಆರ್.ಆರ್. ಬಿರಾದಾರ್ ಹೇಳಿದರು.
ಸಿಯುಕೆಯ ಸಂಗೀತ ಮತ್ತು ಲಲಿತಕಲೆಗಳ ವಿಭಾಗದಲ್ಲಿ ಏರ್ಪಡಿಸಲಾಗಿರುವ ದೃಶ್ಯಕಲಾ ಪ್ರದರ್ಶನವನ್ನು ಉದ್ಘಾಟಿಸಿ, ಕಲಾಕೃತಿಗಳನ್ನು ವೀಕ್ಷಿಸಿದ ಅವರು ‘ಯಾವುದೇ ಬಗೆಯ ಕಲೆಗಳು ಮನುಷ್ಯನಿಗೆ ಆನಂದವನ್ನು ಮತ್ತು ಸಂಸ್ಕಾರವನ್ನು ನೀಡುತ್ತವೆ, ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತವೆ, ಆರೋಗ್ಯವನ್ನು ವೃದ್ಧಿಸುತ್ತವೆ ಮತ್ತು ಜನರನ್ನೂ ಒಂದುಗೂಡಿಸುತ್ತವೆ, ಹಾಗಾಗಿ ಪ್ರತಿಯೊಬ್ಬರೂ ಕಲೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ರಚಿಸಿದ ಇಲ್ಲಿನ ಎಲ್ಲ ಕಲಾಕೃತಿಗಳಲ್ಲಿ ಸಾಮಾಜಿಕ ಸಂವೇದನೆ, ಪರಿಸರದ ಕಾಳಜಿ ಮೊದಲಾದ ಸಂಗತಿಗಳು ಅಭಿವ್ಯಕ್ತಗೊಂಡಿದ್ದು, ನೋಡುಗರಲ್ಲಿ ಪ್ರಕೃತಿ, ಪ್ರಾಣಿ -ಪಕ್ಷಿಗಳ ಬಗ್ಗೆ ಪ್ರೀತಿ, ಅಭಿಮಾನ ಮೂಡಿಸುತ್ತವೆ ಎಂದರಲ್ಲದೆ ದೇಶ, ಭಾಷೆ, ಸಂಸ್ಕøತಿಗಳ ಬಗ್ಗೆಯೂ ಅರಿವು, ಅಭಿಮಾನಿ ಮೂಡಿಸುವಂತಹ ಕಲಾಕೃತಿಗಳನ್ನೂ ರಸಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಗ್ರಂಥಾಲಯದ ಮುಖ್ಯಸ್ಥರಾದ ಡಾ. ಪರಶುರಾಮ ಕಟ್ಟಿಮನಿ ಅವರು ‘ವಿದ್ಯಾರ್ಥಿಗಳ ಪ್ರತಿಭೆ ಅತ್ಯಂತ ಸೃಜನಶೀಲವಾದದ್ದು, ಅವರ ಕಲಾಕೃತಿಗಳಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ ಎಂದು ವಿವರಿಸುತ್ತ ಭವಿಷ್ಯದಲ್ಲಿ ಉತ್ತಮ ಕಲಾವಿದರಾಗಿ ಬೆಳೆಯುವ ಎಲ್ಲ ಲಕ್ಷಣಗಳು ಇವರ ಕಲಾಕೃತಿಗಳಲ್ಲಿ ಬಿಂಬಿತವಾಗಿವೆ, ಭವಿಷ್ಯದಲ್ಲಿ ಎಲ್ಲರೂ ದೇಶದ ಸಾಂಸ್ಕøತಿಕ ಆಸ್ತಿಯಾಗುವುದರಲ್ಲಿ
ಸಂದೇಹವಿಲ್ಲ ಎಂದರು.
ವಿಭಾಗದ ಮುಖ್ಯಸ್ಥರು ಹಾಗೂ ಮಾನವಿಕ ಮತ್ತು ಭಾಷಾ ನಿಕಾಯದ ಡೀನರಾದ ಪೆÇ್ರ. ವಿಕ್ರಮ ವಿಸಾಜಿ ಅವರು ಮಾತನಾಡಿ, ಒಬ್ಬೊಬ್ಬರಲ್ಲಿ ಒಂದೊಂದು ಸಾಮಥ್ರ್ಯ ಅಡಗಿರುತ್ತದೆ ಅದು ಬಣ್ಣ, ನಾದ, ಕಲ್ಲು, ಕೊರಡು ಅಥವಾ ಶಬ್ಧಗಳ ಮೂಲಕ ಕಲಾಕೃತಿಗಳಾಗಿ ಹೊರಹೊಮ್ಮಿ, ಕಲಾವಿದರು ಮತ್ತು ನೋಡುಗರ ಹೃದಯಗಳೆರಡನ್ನೂ ಸಂಸ್ಕಾರಗೊಳಿಸುತ್ತವೆ. ದೇಶದ ಬೇರೆ ಬೇರೆ ಪ್ರದೇಶಗಳಿಂದ ಬಂದಿರುವ ಈ ಎಲ್ಲ ವಿದ್ಯಾರ್ಥಿಗಳು ಅತ್ಯಂತ ಪ್ರತಿಭಾಶಾಲಿಗಳಾಗಿದ್ದಾರೆ, ಇತ್ತೀಚಿಗೆ ಎಲ್ಲರೂ ಸೇರಿ ಕಲಬುರಗಿಯಲ್ಲಿ ಏರ್ಪಡಿಸಿದ್ದ ಕಲಾ ಪ್ರದರ್ಶನ ಅವಿಸ್ಮರಣೀಯವಾದುದು, ಮೊನ್ನೆ ಕೊಚ್ಚಿ ಬೈನಾಲೆ ಅಂತಾರಾಷ್ಟ್ರೀಯ ಕಲಪ್ರದರ್ಶನವನ್ನೂ ನೋಡಿ ಬಂದಿದ್ದಾರೆ ಎಂದು ಬಣ್ಣಿಸಿದರು.
ವಿಭಾಗದ ಅಧ್ಯಾಪಕರು ಮತ್ತು ಕಲಾ ಪ್ರದರ್ಶನದ ಸಂಯೋಜಕರು ಆಗಿರುವ ಡಾ. ಶಿವಾನಂದ ಬಂಟನೂರ ಮಾತನಾಡಿ ‘ನಮ್ಮ ವಿದ್ಯಾರ್ಥಿಗಳಲ್ಲಿರುವ ವಿಶೇಷ ಆಸಕ್ತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅವರ ಆಸಕ್ತಿಗಳಿಗೆ ಅನುಗುಣವಾಗಿ ತರಬೇತಿ ನೀಡಲಾಗುತ್ತಿದ್ದು, ಒಟ್ಟು ಏಳು ಜನ ವರ್ಣಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ನಾಲ್ಕು ಜನ ವಿದ್ವಾಂಸರು ಪಿ ಎಚ್ ಡಿ ಅಧ್ಯಯನ ಮಾಡುತ್ತಿದ್ದಾರೆ, ವಿದ್ಯಾರ್ಥಿಗಳ ಕ್ರಿಯಾಶೀಲತೆ ಮತ್ತು ಸಾಧನೆ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ ಎಂದು ವಿವರಿಸಿದರು.
ಸಮಾರಂಭದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಶಿವಾನಿ ರಾವತ್ ಹಾಗೂ ಶ್ವೇತಾ ದೂದಿ ಸ್ವಾಗತ ಗೀತೆ ಹಾಡಿದರು, ವಿಭಾಗದ ಅಧ್ಯಾಪಕ ವಿನಯಕುಮಾರ್ ಆರ್. ಕಾರ್ಯಕ್ರಮ ನಿರೂಪಿಸಿದರು, ಸಂಶೋಧನಾ ವಿದ್ಯಾರ್ಥಿ ಪ್ರಶಾಂತ ಕುವರ್ ವಂದಿಸಿದರು.
ಕಲಾ ಪ್ರದರ್ಶನದಲ್ಲಿ ವಿಭಾಗದ ಸಂಶೋಧನಾ ವಿದ್ವಾಂಸರಾದ ನಯನಬಾಬುರಾವ್, ಪ್ರಶಾಂತ್ ಕುಮಾರ್, ರಮೇಶ್ ಮೋತುಕುರಿ, ಅಶ್ವಿನಿ ರಾಜಶೇಖರ ಕಲ್ಯಾಣಿ, ಹಾಗೂ ಸ್ನಾತಕೋತ್ತರ ಪೇಂಟಿಂಗ್ ವಿದ್ಯಾರ್ಥಿಗಳಾದ ಶಿವಾನಿ ರಾವತ್, ಸಿತಾಂಶು ಮುಖರ್ಜಿ, ಲೆಂಕೆ ಗೀತಾ, ದಕ್ಷಿತಾ ಲಾಂಜೆವರ್, ಶ್ವೇತಾ ಶಿವಾನಿ, ಬಿ ಜಿ ಲಿಂಗಡೋ ಮೌಪಲಾಂಗ್, ಕುಮಾರ್ ಮುರುಳಿ ಅವರು ತಮ್ಮ ವರ್ಣ ಚಿತ್ರ ಮತ್ತು ಶಿಲ್ಪಕಲಾ ಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿರುವರು. ಕಲಾ ಪ್ರದರ್ಶನವು 2ನೇ ಏಪ್ರಿಲ್ ಸಂಜೆ 5.30 ವರೆಗೆ ಇರುತ್ತದೆ.




























