Home ಜಿಲ್ಲೆ ಸಮಗ್ರ ಕೃಷಿ ಪದ್ಧತಿ ಅವಲೋಕನ

ಸಮಗ್ರ ಕೃಷಿ ಪದ್ಧತಿ ಅವಲೋಕನ


ನವಲಗುಂದ,ಮಾ.೨೪: ತಾಲ್ಲೂಕಿನ ನಾಗನೂರ ಗ್ರಾಮದ ಸಹಜ ಕೃಷಿಕ ಶೌಕತಅಲಿ ಲಂಬೂನವರ ಸಮಗ್ರ ಕೃಷಿ ತೋಟಕ್ಕೆ ನರಗುಂದ ತಾಲ್ಲೂಕಿನ ನರಗುಂದ, ವಾಸನ, ಸಂಕದಾಳ,ಕನಕಿಕೊಪ್ಪ ಗ್ರಾಮಗಳ ರೈತರು ಭೇಟಿ ನೀಡಿದರು.


ಲಂಬೂನವರ ಅವರು ಅಳವಡಿಸಿಕೊಂಡ ಸಮಗ್ರ ಕೃಷಿ ಪದ್ಧತಿಯಲ್ಲಿನ ಸಾವಯವ ಕೃಷಿ ಘಟಕ, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಎರೆಹುಳು ಗೊಬ್ಬರ ಉತ್ಪಾದನಾ ಘಟಕ, ಸಾಗವಾನಿ, ಶ್ರೀಗಂಧ, ರಕ್ತ ಚಂದನ, ಬೇವು, ನುಗ್ಗೆ, ನೀರಸೇಬು, ಪೇರಲ, ದಾಳಿಂಬೆ ಅಲ್ಲದೆ ವಿವಿಧ ತರಕಾರಿ ಹಾಗೂ ಹತ್ತು ಹಲವಾರು ಸಸ್ಯಗಳ ಕುರಿತು ಶೌಕತಅಲಿ ಲಂಬೂನವರಿAದ ಮಾಹಿತಿ ಪಡೆದರು.


ವಿದ್ಯುತ್ ಬಳಕೆ ಇಲ್ಲದೇ ಸಂಪೂರ್ಣ ಸೌರಶಕ್ತಿ ಮೂಲಕ ನೀರೆತ್ತುವ ಪಂಪ್ ಹಾಗೂ ಹನಿ ನೀರಾವರಿ ಪದ್ಧತಿ ವೀಕ್ಷಿಸಿದರು. ನರಗುಂದ ಕೃಷಿ ಇಲಾಖೆಯ ಸಿಬ್ಬಂದಿ ಎಸ್.ಬಿ.ಸಥೆ , ರೈತರಾದ ಬಸನಗೌಡ ಅಣ್ಣಿಗೇರಿ, ಸತೀಶ ಪಾಟೀಲ, ಭೀಮಪ್ಪ ದೊಡಮನಿ, ಮಲ್ಲನಗೌಡ ಚಿನ್ನಪ್ಪಗೌಡ್ರ ಸೇರಿ ೩೦ಕ್ಕೂ ಹೆಚ್ಚು ರೈತರು ಇದ್ದರು