Home ಜಿಲ್ಲೆ ಕಲಬುರಗಿ ಕೇಂದ್ರ ಸರ್ಕಾರದ ಪಿಂಚಣಿ ನೀತಿ ವಿರುದ್ದ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಆಕ್ರೋಶ

ಕೇಂದ್ರ ಸರ್ಕಾರದ ಪಿಂಚಣಿ ನೀತಿ ವಿರುದ್ದ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಆಕ್ರೋಶ

ಚಿತ್ತಾಪುರ:ಮಾ.26:ಕೇಂದ್ರ ಸರ್ಕಾರವು ಪಿಂಚಣಿದಾರರನ್ನು ವರ್ಗೀಕರಿಸುವ ಮತ್ತು ಪಿಂಚಣೆ ವ್ಯತ್ಯಾಸಗಳನ್ನು ಕಾಯ್ದುಕೊಳ್ಳುವ ವಿವಾದಾತ್ಮಕ ಕ್ರಮವನ್ನು ಜಾರಿಗೆ ತಂದಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘವು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಚಿತ್ತಾಪುರ ಪಟ್ಟಣದ ನೌಕರರ ಭವನದಿಂದ ತಹಶೀಲ್ ಕಛೇರಿಯ ವರೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ ಅವರ ವಿರುದ್ದ ದಿಕ್ಕಾರ ಕೂಗುತ್ತ ತಹಶೀಲ್ದಾರ್ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ರೇವಣಸಿದ್ದಪ್ಪ ರೋಣದ್ ಅವರು ಮಾತನಾಡಿ ಕೇಂದ್ರ ಸರ್ಕಾರವು ಯಾವುದೇ ಮುನ್ಸೂಚನೆ ನೀಡದೆ, ಹಣಕಾಸು ಮಸೂದೆಯ ಭಾಗವಾಗಿ ಈ ಹೊಸ ಪಿಂಚಣಿನಿಯಮವನ್ನು 25 ರಂದು ಲೋಕಸಭೆಯಲ್ಲಿ ಅಂಗೀಕರಿಸಿತ್ತು. ಇಂದು ಈ ಕಾಯ್ದೆಯು ಅಧಿಕೃತವಾಗಿ ಜಾರಿಗೆ ಬಂದಿದ್ದು, ಇದು ನಿವೃತ್ತ ನೌಕರರ ಹಿತಾಸಕ್ತಿಗೆ ಮಾರಕವಾಗಿದೆ ಎಂದರು.
ಈ ಕಾಯ್ದೆಯ ಜಾರಿ ಯಿಂದಾಗಿ ನಿವೃತ್ತಿಯ ದಿನಾಂಕದ ಆಧಾರದ ಮೇಲೆ ಪಿಂಚಣಿದಾರರನ್ನು ವರ್ಗೀಕರಿಸಲಾಗುತ್ತದೆ. ಇದರಿಂದಾಗಿ ಕೇಂದ್ರವೇತನ ಆಯೋಗದ ಶಿಫಾರಸ್ಸುಗಳ ಪ್ರಯೋಜನಗಳು ಹಳೆಯ ಪಿಂಚಣಿದಾರರಿಗೆ ಸಿಗದೆ ಹೋಗುವ ಆತಂಕವಿದೆ. ಇದು ಸಂವಿಧಾನಾತ್ಮಕವಾಗಿ ದೊರೆತಿರುವ ನ್ಯಾಯಯುತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದುಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಸಂಘದ ಶಶಿಧರ್ ಪಾಟೀಲ್,ಮಲ್ಲಣ್ಣ ಮಾಸ್ತರ್,ವಿಜಯಕುಮಾರ ಲೊಡ್ಡೆನೋರ್,ಮಹಾದೇವಪ್ಪ,ಕೀಶನ್ ರಾಠೋಡ್, ಸುಭಾಷ್ ಮೆಂಗಜಿ,ಸಿದ್ದಯ್ಯ ಸ್ಥಾವರಮಠ್,ಬಾಬು ಕರದಾಳ್, ಮಲ್ಲಿಕಾರ್ಜುನ,ಶಿವನಾಗಪ್ಪ,ದೊಡ್ಡಪ್ಪ,ದೇವಿಂದ್ರಪ್ಪ ಶಹಾಬಾದಕರ್,ತುಕಾರಾಮ್ ನಾಯಕ್,ಮಾತಿಲಾಲ್,ಶಬ್ಬಿರ್ ಮಿಯ್ಯಾ,ಸರಳಾಬಾಯಿ,ಶಾಂತಾಬಾಯಿ,ಸರಸ್ವತಿ ಪಾಟೀಲ್, ಮಾಯಾದೇವಿ ರಾಣದ್,ಹಾಜಪ್ಪ ಬಿರಾಳ್,ಮಹೇಬೂಬ್ ಅಲಿ,ಲಕ್ಷ್ಮಣ್ ಭಜಂತ್ರಿ,ನಬಿಸಾಬ್,ಮೋನಯ್ಯ ಪಂಚಾಳ್,ಸಿದ್ದಣ್ಣ ಸೇರಿದಂತೆ ಅನೇಕ ಸದಸ್ಯರು ಇದ್ದರು