
ಸೇಡಂ, ಆ,17: ಶಿಕ್ಷಣವೇ ಮಕ್ಕಳ ಭವಿಷ್ಯದ ಬೆಳವಣಿಗೆಗೆ ಮೂಲವಾಗಿದ್ದು ಮಕ್ಕಳು ಹವಣೆಯಿಂದ ಓದಿ ಉತ್ತಮ ಸಾಧನೆಯನ್ನು ನಮ್ಮ ಗ್ರಾಮದ ಮಕ್ಕಳು ಮಾಡಲು ಮುಂದಾದಾಗ ನಾವು ನಿತ್ಯ ಅವರ ಸಹಕಾರಕ್ಕೆ ನಿಲ್ಲುತ್ತೇವೆ ಎಂದು ಸಮಾಜ ಸೇವಕರಾದ ಇಬ್ರಾಹಿಂ ಪಟೇಲ್ ಬೀರನಳ್ಳಿ ಹೇಳಿದರು.
ತಾಲೂಕಿನ ಬೀರನಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿರುವ 79ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯವಾಗಿ ಧ್ವಜಾರೋಹಣದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‍ಗಳನ್ನು ವಿತರಿಸಿ ಅವರು ಮಾತನಾಡಿದರು.ಈ ವೇಳೆಯಲ್ಲಿ ಮಿರಾಜ್ ಪಟೇಲ್,ಸಾಧಿಕ್ ಪಟೇಲ್,ಎಸ್‍ಡಿಎಂಸಿ ಅಧ್ಯಕ್ಷ ಪ್ರಶಾಂತ್ ಜಮಾದಾರ, ಮುಖ್ಯಗುರುಗಳು, ಶಿಕ್ಷಕರು, ಸಿಬ್ಬಂದಿಗಳು ಹಾಗೂ ಪಾಲಕರು ಇದ್ದರು.