ನಮ್ಮ ನಡೆ ಹಳ್ಳಿ ಕಡೆ ಪಂಚ ಗ್ಯಾರಂಟಿ ತಿಳುವಳಿಕೆ

ಬೀದರ್: ಜೂ.೨೯:ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯ ನಮ್ಮ ನಡೆ ಹಳ್ಳಿ ಕಡೆ ಎಂಬ* ಕಾರ್ಯಕ್ರಮವನ್ನು ಬೀದರ್ ದಕ್ಷಿಣ ಮಾಜಿ ಶಾಸಕ ಅಶೋಕ್ ಖೇಣಿ
ಅವರ ಆದೇಶದ ಮೇರೆಗೆ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಮತ್ತು ಶಕ್ತಿ ಯೋಜನೆಗಳ ಬಗ್ಗೆ ಬೀದರ ದಕ್ಷಿಣ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ತಲುಪಿ ಯೋಜನೆ ಬಗ್ಗೆ ಸಮಿತಿ ಗಮನಕ್ಕೆ ತರುಬೇಕು ಮತ್ತು ಇದರ ಸದುಪಯೋಗ ಎಲ್ಲರಿಗೂ ಸಿಗಬೇಕೆಂದು ಎಂದು ಆದೇಶ ಮಾಡಿದರು, ಬೀದರ್ ತಾಲೂಕಿನ ಪಂಚ್ ಗ್ಯಾರಂಟಿ ಕಮಿಟಿಯ ಉಪಾಧ್ಯಕ್ಷರಾದ ಶ್ರೀ ರಾಜಕುಮಾರ ಮಡಕಿ ರವರ ಹಾಗೂ ಸದಸ್ಯರ ನೇತೃತ್ವದಲ್ಲಿ, ನಮ್ಮ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಆಣದೂರ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಆಣದೂರ ವಾಡಿ (ಖಾದರ್ ನಗರ) ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಪ್ರತಿ ಯಜಮಾನಿಗೆ ಪ್ರತಿ ತಿಂಗಳು ಹಣ ದೊರಕೂತಿದೇವೋ ಇಲ್ಲವೋ ಎಂದು, ಸಮೀಕ್ಷೆ ಮಾಡಿ ದೊರಕದ, ಯಜಮಾನಿಗೆ ತಕ್ಷಣವೇ ದೊರಕುವಂತೆ, ಪಂಚ್ ಗ್ಯಾರಂಟಿದವರು ಸಂಬAಧ ಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಕರೆ ಮುಖಾಂತರ ತಿಳಿಸಿರುತ್ತಾರೆ, ಮತ್ತು ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಮತ್ತು ಶಕ್ತಿ ಯೋಜನೆಗಳ ಮಹತ್ವವದ ಬಗ್ಗೆ ಮನೆ ಮನೆಗೆ ತೆರಳಿ ಜನರಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಕಮಿಟಿಯ ಸದಸ್ಯರುಗಳಾದ ಉದಯಕುಮಾರ ಚಟನಳ್ಳಿ, ಶಿವಕುಮಾರ ಕುತ್ತಾಬಬಾದ್, ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ರಾಜಕುಮಾರ, ದತ್ತಾತ್ರಿ ಪಾಟೀಲ್, ಮತ್ತು ಅನೇಕ ಗ್ರಾಮಸ್ಥರು ಪಾಲ್ಗೊಂಡಿದ್ದರು.