ಭಾರತದಲ್ಲಿ ಹಿಂದೂ ರಾಷ್ಟ್ರ ನಿರ್ಮಾಣ ನಮ್ಮ ಗುರಿ : ತೊಗಾಡಿಯಾ

ವಿಜಯಪುರ, ಜೂ. 19:ಭಾರತ ಹಿಂದೂ ರಾಷ್ಟ್ರವಾಗಬೇಕು, ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಬಜರಂಗ ದಳ ಮುಖಂಡ ಪ್ರವೀಣ ಭಾಯ್ ತೊಗಾಡಿಯಾ ಹೇಳಿದರು.
ಬುಧವಾರ ವಿಜಯಪುರ ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ಧಿಗಾರರ ಜೊತೆಗೆ ಮಾತನಾಡಿದರು.
ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ಮಾಡಿದ್ದೇವು.
ಅಯೋದ್ಯೆಯಲ್ಲಿ ಒಂದು ಲಕ್ಷ ಜನರನ್ನು ಸೇರಿಸಿ ಮಂದಿರಕ್ಕಾಗಿ ಹೋರಾಟ ಮಾಡಿದ್ದೇವೆ. ಮಹಾಮಾರಿ ಕೊರೋನಾ ವೇಳೆ ದೇಶದಲ್ಲಿ 578 ಉಚಿತ ಆಹಾರ ಮಳಿಗೆಗಳನ್ನು ಸ್ಥಾಪನೆ ಮಾಡಿದ್ದೇವೆ.
ಕುಂಭ ಮೇಳದಲ್ಲಿ ಉಚಿತ ಅನ್ನದಾಸೋಹ ವಸತಿ ಸೌಲಭ್ಯ ಒಂದೂವರೆ ತಿಂಗಳು ಕಾಲ ಸೇವೆ ಮಾಡಿದ್ದೇವೆ. ಒಂದು ಲಕ್ಷ ಹೊದಿಕೆಗಳನ್ನು ನೀಡಿದ್ದೇವು ಎಂದು ತಿಳಿಸಿದರು.
ಪ್ರತಿ ಶನಿವಾರ ಸಾಯಂಕಾಲ ಎಲ್ಲರೂ ಕೂಡಿ ಹನುಮಾನ್ ಚಾಲೀಸ್ ಪಠಣೆ ಮಾಡುವ ಗುರಿ ನಮ್ಮದಾಗಿದೆ.
ಒಂದು ಲಕ್ಷ ಸ್ಥಳಗಳಲ್ಲಿ ಹನುಮಾನ್ ಚಾಲೀಸ್ ಪಠಣ ಮಾಡುವ ಗುರಿ ಇದೆ.
ಹನುಮಾನ್ ಚಾಲೀಸ್ ನಿಂದ ಸಮೃದ್ದಿ, ಸುರಕ್ಷೆ, ಆರೋಗ್ಯ, ಮಕ್ಕಳ ಅಭಿವೃದ್ಧಿ, ಮಹಿಳಾ ಸುರಕ್ಷತೆ, ಉದ್ಯೋಗ,
ಹಿಂದೂ ಡೆವೆಲಪ್ಮೆಂಟ್ ಸೆಂಟರ್ ಮೂಲಕ ಬಡವರಿಗೆ ಸಹಾಯ ಮಾಡುವ ಉದ್ದೇಶವಿದೆ ಎಂದರು.
ಹನುಮಾನ್ ಚಾಲೀಸ್ ಮೂಲಕ ಹಿಂದೂ ಸಂಘಟನೆ ಮಾಡುತ್ತಿದ್ದೇವೆ.
ದೇಶದಲ್ಲಿ ಯಾವ ಸ್ಥಳದಲ್ಲಾದರೂ ಹಿಂದೂಗಳಿಗೆ ಸಹಾಯ ಮಾಡಲು ಸಂಘಟನೆ ಬದ್ದವಾಗಿದೆ. ಉಚಿತ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ನುಡಿದರು.
ಕಾಯ್ದೆ ಹಾಗೂ ದಂಡನೆಯಿಂದ ಹಿಂದುತ್ವ ಬೆಳೆಸುತ್ತೇವೆ. ಬಾಂಗ್ಲಾ ನುಸುಳುಕೋರರ ತಡೆಯಬೇಕು. ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಯಾಗಬೇಕು. ಹಿಂದೂಗಳು ಮೂವರು ಅಥವಾ ಇಬ್ಬರು ಮಕ್ಕಳನ್ನು ಹೊಂದಬೇಕು. ಇದು ಪ್ರವೀಣ ಭಾಯ್ ತೊಗಾಡಿಯಾ ಭ್ರಹ್ಮೋಸ್ ಮಿಸೈಲ್ ಎಂದರು.
ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದೇವೆ.
ದೇಶದಲ್ಲಿ ಹಿಂದೂಗಳನ್ನು ಬಹು ಸಂಖ್ಯಾತರನ್ನಾಗಿ ಮಾಡುವುದೇ ಮುಖ್ಯ ಉದ್ದೇಶ. ಹಿಂದೂಗಳು ತಮ್ಮ ದೈನಂದಿನ ವ್ಯವಹಾರ ಕೆಲಸ ಕಾರ್ಯ ಯಾರ ಜೊತೆ ಮಾಡಬೇಕೆಂಬುದನ್ನು ತೀರ್ಮಾನಿಸಲಿ ಎಂದು ನುಡಿದರು.
ಮಂಗಳೂರಿನಲ್ಲಿ ಕೋಮು ಘರ್ಷಣೆ ಘಟನೆ ಕುರಿತ ಪ್ರಶ್ನೆಗೆ ಉತ್ತರಿಸಿದ ತೊಗಾಡಿಯಾ, ಸಮರ್ಪಕ ಮಾಹಿತಿ ಇಲ್ಲದೇ ಮಾತನಾಡಲಾರೆ ಎಂದು ಹೇಳಿದರು.
ಆಪರೇಷನ್ ಸಿಂಧೂರ ಮುಗಿಸಿಲ್ಲ ಎಂಬುದು ಖುಷಿಯ ವಿಚಾರವಾಗಿದೆ.
ದೇಶದ ಸೈನಿಕರು ಸಮರ್ಥವಾಗಿ ರಕ್ಷಣೆ ಮಾಡುತ್ತಿದ್ದಾರೆ.
ದೇಶದಲ್ಲಿ ರೈತರ ಆತ್ಮಹತ್ಯೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೃಷಿ ಖರ್ಚು ಹೆಚ್ಚಾಗುತ್ತಿವೆ. ಉತ್ಪಾದನೆ ಕಡಿಮೆಯಾಗುತ್ತಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ನಾಲ್ಕು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂದೆ ನಾನು ಲಕ್ಷಾಂತರ ರೈತರೊಂದಿಗೆ ಹೋರಾಟ ಮಾಡುತ್ತೇವೆ ಎಂದರು.
ಅಹಮದಾಬಾದ್ ನಲ್ಲಿ ವಿಮಾನ ಅವಘಡ ದುಃಖದ ಸಂಗತಿ. ತನಿಖೆಯಲ್ಲಿ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ.
ವಿಮಾನದ ಪೈಲಟ್ ಉತ್ತಮ ಪೈಲಟ್ ಆಗಿದ್ದ. ಎರಡು ಇಂಜಿನ್ ಒಟ್ಟಿಗೆ ಬಂದ್ ಆಗಿದ್ದವು. ದುರಂತ ಯಾಕೆ ಆಗಿದೆ ಎಂಬುದು ಗೊತ್ತಿಲ್ಲ. ತನಿಖೆಯಲ್ಲಿ ಅವಘಡಕ್ಕೆ ಕಾರಣ ತಿಳಿದು ಬರಲಿದೆ ಎಂದು ಹೇಳಿದರು.
ನಾನು ಯಾವುದೇ ಸರ್ಕಾರಗಳ ಬಗ್ಗೆ ಮಾತನಾಡಲ್ಲ. ಅಧಿಕಾರದಲ್ಲಿದ್ದವರು ಸಮರ್ಥರಿದ್ದಾರೆ.ಪ್ರಧಾನಿ ಮೋದಿ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರವರ ಕೆಲಸ ಮಾಡುತ್ತಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.