Home ಜಿಲ್ಲೆ ಕಲಬುರಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಡಳಿತ ನಿಯಂತ್ರಣ ವರ್ಗಾವಣೆಗೆ ವಿರೋಧ

ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಡಳಿತ ನಿಯಂತ್ರಣ ವರ್ಗಾವಣೆಗೆ ವಿರೋಧ

ಕಲಬುರಗಿ,ಮಾ.13-ಶಾಲಾ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಪದವಿ ಪೂರ್ವ ಉಪನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರ್ಗಾಯಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಬೆಂಗಳೂರು, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಬೋಧಕೇತರ ಸಿಬ್ಬಂದಿಗಳ ಸಂಘದ ಕಲಬುರಗಿ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರಸ್ತಾವನೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸ್ವಾಯತ್ತತೆ, ಸಂಸ್ಥಾತ್ಮಕ ಅಸ್ತಿತ್ವ ಹಾಗೂ ಸ್ಥಾಪಿತ ಆಡಳಿತಾತ್ಮಕ ವ್ಯವಸ್ಥೆಗೆ ಗಂಭೀರ ಧಕ್ಕೆಯನ್ನ ಉಂಟುಮಾಡುವ ಕ್ರಮವಾಗಿದ್ದು, ಸರ್ಕಾರ ತಕ್ಷಣವೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಒಂದು ವೇಳೆ ಸರ್ಕಾರ ಈ ಆದೇಶವನ್ನು ಹಿಂಪಡೆಯದಿದ್ದರೆ ಮುಂದಿನ ದ್ವಿತೀಯ ಪಿಯುಸಿ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸುವುದಾಗಿ ಸಂಘದ ವತಿಯಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಜೇ. ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ನರಸಪ್ಪ ರಂಗೋಲಿ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶಿವಾನಂದ ಖಜೂರಿ, ಪ್ರಧಾನ ಕಾರ್ಯದರ್ಶಿ ಶೈಲ ಬೋನಾಳ, ಬೋಧಕೇತರ ಸಂಘದ ಅಧ್ಯಕ್ಷ ನೆಸರ ಬೆಳಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಬಳುಂಡಗಿ, ರಾಜ್ಯ ಪರಿಷತ್ ಸದಸ್ಯ ಧರ್ಮರಾಯ ಜವಳಿ, ನಿವೃತ್ತ ಜಂಟಿ ನಿರ್ದೇಶಕ ಶಿವಶರಣಪ್ಪ ಮುಳೆಗಾಂವ , ಶರಣಗೌಡ ಪಾಟೀಲ, ನಾಮದೇವ ಕಡಕೊಳ, ಭೀಮರಾಯ ಅರಕೇರಿ, ಬಿ.ಎಚ್. ನಿರಗುಡಿ, ಡಾ.ಪ್ರಹ್ಲಾದ ಬುರ್ಲಿ, ಸಿ.ಚಿ. ಲಿಂಗಣ್ಣ, ಬಿ.ಎಸ್. ಮಾಲಿಪಾಟೀಲ, ಉಮೇಶ್ ಅಷ್ಟಗಿ, ಮಹಾದೇವ ನಲಕಂಠೆ, ಸುಜಾತ ಬಿರಾದಾರ, ಭಾರತಿ ಕೊಭಾ, ಪ್ರಭಾತಿ ಪಾಟೀಲ, ದಶರಥ ರಾಠೋಡ, ಬಸವರಾಜ ಅಂಗಡಿ, ಜಯಶ್ರೀ ಪಾಟೀಲ, ಸವಿತಾ ನಾಸಿ, ಮಂಜುಳಾ, ಜಯಶ್ರೀ ಬಿರಾದಾರ, ಲೀಲಾವತಿ ನಾಗಶೆಟ್ಟಿ, ಸುವರ್ಣ ಬಿರಾದಾರ, ಜಮುನಾ ಟಿಳೆ, ನೀಲಮ್ಮ ಪಾಟೀಲ, ಶಾಂತಾ ಮಾಲಿ ಪಾಟೀಲ, ಸವಿತಾ ನಾಟೀಕಾರ, ಬಲರಾಮ ಚವ್ಹಾಣ, ಶಿವಶರಣಪ್ಪ ತಮ್ಮಾಗೊಳ, ಶರಣಮ್ಮ, ಇಂದುಮತಿ, ತುಳಜಾ ರಾಮ್ಸರ, ಸುವರ್ಣ ಭೀಮಳ್ಳಿ, ನಾಗರತ್ನ ಇಂಡಿ, ರೇವಮ್ಮ ಸನ್ನತಿ, ವಿಠಲ್ ರಾವ್ ಬಾವಿಮನಿ, ಸುರಚಂದ ಗಾಂಧಿ, ಸುನಿಲ್ ರಾಥೋಡ್, ರಂಗಸ್ವಾಮಿ, ಕಾಶಿನಾಥ್ ಮುಖರ್ಜಿ, ಸಂತೋಷ್ ಪಾಂಚಳ್, ಹಮೀದಲಿ, ಜಟ್ಟಿಂಗ್ ರಾಯ್ ಶಾಕಾಪುರ್, ಅಂಬಾದಾಸ್ ಜಾಧವ್, ದೀಕ್ಷಿತ್, ಮಲ್ಲಿನಾಥ್, ಸುಮಂಗಲ ನಾಟಿಕರ್ ಸೇರಿದಂತೆ ಅನೇಕ ಉಪನ್ಯಾಸಕರು, ಪ್ರಾಂಶುಪಾಲರು ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.