ಆನ್‍ಲೈನ್ ವಂಚನೆ : 6.5 ಲಕ್ಷ ರೂ ಟೋಪಿ !!

ಕಲಬುರಗಿ,ಫೆ.6: ಷೇರು ಮಾರುಕಟ್ಟೆ ಹೆಸರಲ್ಲಿ ಆನ್‍ಲೈನ್ ಮೂಲಕ ಹಣ ತೊಡಗಿಸಿ 6.56 ಲಕ್ಷ ರೂ ಹಣ ಕಳೆದುಕೊಂಡ ನಗರದ ಇಎಸ್‍ಐಸಿ ಆಸ್ಪತ್ರೆ ಸಿಬ್ಬಂದಿಯೊಬ್ಬರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಇಎಸ್‍ಐಸಿ ಆಸ್ಪತ್ರೆಯ ಸಿಬ್ಬಂದಿ ಸಾಕ್ರೇ ಕೋರಿ ಉಶಾಕುಮಾರ ತಂದೆ ಎಸ್ ಕೆ ಯಲ್ಲಪ್ಪರಾವ್ ಎಂಬುವವರೇ ಹಣ ಕಳೆದುಕೊಂಡು ವಂಚನೆಗೀಡಾದವರು.
ಇವರು ಫೇಸ್ ಬುಕ್‍ನಲ್ಲಿ ಬಂದಿದ್ದ ಷೇರು ಮಾರುಕಟ್ಟೆ ಬಗ್ಗೆ ಇರುವ ರೀಲ್ ಅನ್ನು ಪದೇ ಪದೇ ನೋಡಿದಾಗ ಮುಂಬೈ ಮೂಲದ ವ್ರೀತಿಕಾ ಆನಂದ ಎಂಬ ಮಹಿಳೆ ಮೆಸೆಂಜರ್ ಮೂಲಕ ಕರೆ ಮಾಡಿ
ವೆಂಚುರಾ ಸ್ಟಾಕ್ ಮಾರ್ಕೆಟ್ ಬಗ್ಗೆ ವಿವರಿಸಿ ಅದರಲ್ಲಿ ಹೆಚ್ಚಿನ ಲಾಭ ಆಗುತ್ತದೆ ಎಂದು ಸುಳ್ಳು ಹೇಳಿ ಮನವೊಲಿಸಿದ್ದಾಳೆ.ನಂತರ ವೆಂಚುರಾ ಸ್ಟಾಕ್ ಮಾರ್ಕೆಟ್ ಆ್ಯಪ್ ಇನ್ ಸ್ಟಾಲ್ ಮಾಡಲು ಹೇಳಿದ್ದಾಳೆ. ಆ್ಯಪ್ ಮೂಲಕ ಹಂತ ಹಂತವಾಗಿ 6.56 ಲಕ್ಷ ರೂ ಹಣ ತೊಡಗಿಸಿ ,ನಂತರ ಮೋಸ ಹೋಗಿದ್ದು ಅರಿವಾಗಿ ಸಾಕ್ರೇ ಕೋರಿ ಉಶಾಕುಮಾರ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.