ಕುಖ್ಯಾತ ಮನೆಗಳ್ಳರ ಬಂಧನ: 12.14 ಲಕ್ಷ ರೂ.ಮೊತ್ತದ ಸ್ವತ್ತು ಜಪ್ತಿ

ಕಲಬುರಗಿ,ಜ.30-ನಾಲ್ಕು ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಎಂ.ಬಿ.ನಗರ ಪೊಲೀಸರು ಇಬ್ಬರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿ 67 ಗ್ರಾಂ.ಬಂಗಾರದ ಆಭರಣ, 1,02,000 ರೂ.ನಗದು ಮತ್ತು ಒಂದು ಪಲ್ಸರ್ ಬೈಕ್ ಸೇರಿ 12.14 ಲಕ್ಷ ರೂ.ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ನಗರ ಪೊಲೀಸ್ ಆಯುಕ್ತಾಲಯರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಬೀಗ ಮುರಿದು ಕಳ್ಳರು 4.35 ಲಕ್ಷ ರೂಪಾಯಿ ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ ಎಂದು ವೀರೇಂದ್ರ ಪಾಟೀಲ ಬಡಾವಣೆಯ ವೀರಭದ್ರಯ್ಯ ಅವರು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಆರೋಪಿಗಳ ಪತ್ತೆಗೆ ಡಿಸಿಪಿ ಪ್ರವೀಣ್ ಹೆಚ್.ನಾಯಕ್, ಕಲಬುರಗಿ ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಿವನಗೌಡ ಪಾಟೀಲ, ಎಂ.ಬಿ.ನಗರ ಪೊಲೀಸ್ ಠಾಣೆ ಪಿಐ ಖಾಜಾ ಹುಸೇನ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜು ಟಾಕಳೆ, ದಸ್ತಯ್ಯ, ಬೀರಪ್ಪ, ಸಂತೋಷ, ಬಸವರಾಜ, ಗುರುರಾಜ, ನಾಗರಾಜ, ಮಹೇಶ, ಕಾಶಿರಾಯ, ಸಿದ್ದರಾಮ ಹಾಗೂ ಚನ್ನವೀರ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತಾಂತ್ರಿಕ ಹಾಗೂ ವೈಜ್ಞಾನಿಕ ಮಾಹಿತಿ ಕಲೆ ಹಾಕಿ ಆಳಂದ ತಾಲ್ಲೂಕಿನ ಕಮಸರ ನಾಯಕ ತಾಂಡಾದ ಅಪ್ಪಾಜಿ ಅಲಿಯಾಸ್ ಅಪ್ಪು ತಂದೆ ಗಂಗಾರಾಮ ಚವ್ಹಾಣ್ (22), ಆಳಂದ ತಾಲ್ಲೂಕಿನ ಶಕಾಪುರ ತಾಂಡಾದ ಸಂತೋಷ ಅಲಿಯಾಸ್ ಅಂತ್ಯಾ ತಂದೆ ಗೋವಿಂದ್ ಚವ್ಹಾಣ್ (30) ಎಂಬುವವರನ್ನು ಬಂಧಿಸಿ 67 ಗ್ರಾಂ.ಬಂಗಾರದ ಆಭರಣ, 1,02,000 ರೂ.ನಗದು ಮತ್ತು ಕೃತ್ಯಕ್ಕೆ ಬಳಸಿದ ಒಂದು ಪಲ್ಸರ್ ಬೈಕ್ ಸೇರಿ 12.14 ಲಕ್ಷ ರೂ.ಮೌಲ್ಯದ ಸ್ವತ್ತುನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕುತ್ಯಾತ ಮನೆಗಳ್ಳರನ್ನು ಬಂಧಿಸುವಲ್ಲಿ ಂiÀiಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.