ವೆನೆಜುವೆಲಾ ವಿಪಕ್ಷ ನಾಯಕಿ ಮಾರಿಯಾಗೆ ನೋಬೆಲ್ ಪ್ರಶಸ್ತಿ:ಟ್ರಂಪ್ ‌ಕನಸು ಭಗ್ನ

ಓಸ್ಲೊ,ಅ.10-ವೆನೆಜುವೆಲಾದ ವಿಪಕ್ಷ ನಾಯಕಿ ಮಾರಿಯಾ ಕೊರಿನಾ ಮಚಾದೋ ಅವರಿಗೆ ಈ ಬಾರಿಯ ನೋಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.ನೊಬೆಲ್ ಶಾಂತಿ ಪ್ರಶಸ್ತಿಯ ನಿರೀಕ್ಷೆಯಲ್ಲಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕನಸು ಭಗ್ನಗೊಂಡಿದೆ.


ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಅವಿಶ್ರಾಂತ ಕೆಲಸ ಮತ್ತು ಸರ್ವಾಧಿಕಾರಿ ಪ್ರಜಾಪ್ರಭುತ್ವದ ವಿರುದ್ಧ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆ ಸಾಧಿಸಲು ಹೋರಾಟ ನಡೆಸುತ್ತಿರುವ ಮಾರಿಯಾ ಕೊರಿನಾ ಮಚಾದೋ ಅವರಿಗೆ 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ನಾರ್ವೆಯ ನೊಬೆಲ್ ಸಮಿತಿ ತೀರ್ಮಾನಿಸಿದೆ.


ಮಾರಿಯಾ ಕೊರನಾ ಮಚಾದೊ ಅವರು 2002ರಲ್ಲಿ ಚುನಾವಣಾ ಮೇಲ್ವಿಚಾರಣೆ ಮತ್ತು ನಾಗರಿಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮೀಸಲಾಗಿರುವ ಸ್ಮೇಟ್ ಎಂಬ ಸಂಘಟನೆಯ ಸಹ-ಸ್ಥಾಪಕರೊಂದಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. 2013ರಲ್ಲಿ ತಾವೇ ಸ್ಥಾಪಿಸಿದ ಉದಾರವಾದಿ ರಾಜಕೀಯ ಪಕ್ಷವಾದ ವೆಂಟೆ ವೆನೆಜುವೆಲಾದ ರಾಷ್ಟ್ರೀಯ ಸಂಯೋಜಕರಾದರು. ತಮ್ಮ ವೃತ್ತಿಜೀವನದುದ್ದಕ್ಕೂ ಮಚಾದೊ ಅವರು, ಹ್ಯೂಗೋ ಚ್ವೆಜ್ ಮತ್ತು ನಿಕೋಲ್ಸ್ ಮಡುರೊ ಅವರ ಆಡಳಿತದ ವಿಮರ್ಶಕರಾಗಿದ್ದರು. ಮಾರಾ ಕೊರಿನಾ ಅವರು ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.


1967ರ ಅಕ್ಟೋಬರ್ 7ರಂದು ಕ್ಯಾರಕಾಸ್‌ನಲ್ಲಿ ಜನಿಸಿದ ಮಾರಿಯಾ, ಮಾರಾ ಕೊರಿನಾ ಮಚಾದೊ ಅವರು ವೆನೆಜುವೆಲಾದ ಖ್ಯಾತ ರಾಜಕಾರಣಿ, ಕೈಗಾರಿಕಾ ಎಂಜಿನಿಯರ್ ಮತ್ತು ಮಾನವ ಹಕ್ಕುಗಳ ವಕೀಲರಾಗಿದ್ದಾರೆ.


ಬೆಲ್ಲೊ ಕ್ಯಾಥೋಲಿಕ್ ವಿಶ್ವವಿದ್ಯಾನಿಲಯದಿಂದ ಕೈಗಾರಿಕಾ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಕ್ಯಾರಕಾಸ್‌ನಲ್ಲಿರುವ ಇನ್‌ಸ್ಟಿಟ್ಯೂಟೊ ಡಿ ಎಸ್ಟುಡಿಯೋಸ್ ಸುಪೀರಿಯರ್ಸ್ ಡಿ ಅಡ್ಮಿನಿಸ್ಟ್ರೇಷಿಯನ್ (ಐಇಎಸ್‌ಎ) ನಿಂದ ಫೈನಾನ್ಸ್​ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.