Home ಜಿಲ್ಲೆ ನೇರಡಗಂ ಸಿದ್ದಲಿಂಗೇಶ್ವರ ಅದ್ದೂರಿ ರಥೋತ್ಸವ

ನೇರಡಗಂ ಸಿದ್ದಲಿಂಗೇಶ್ವರ ಅದ್ದೂರಿ ರಥೋತ್ಸವ

ಸೈದಾಪುರ:ಮಾ.೮:ಕರ್ನಾಟಕ – ತೆಲಂಗಾಣ ಉಭಯ ರಾಜ್ಯಗಳ ಗಡಿ ಅಂಚಿನ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಮಹಾರಥೋತ್ಸವವು ಶುಕ್ರವಾರ ಸಾಯಂಕಾಲ ಸಹಸ್ರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ಸಾಗಿತು.
ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀಮಠದ ಪೀಠಾಧಿಪತಿ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಸಿದ್ದಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ಮಂದಿರದ ಸುತ್ತಲೂ ಐದು ಸುತ್ತುಗಳ ಪ್ರದಕ್ಷಣೆ ಹಾಕಲಾಯಿತು. ರಥೋತ್ಸವ ದುದ್ದಕ್ಕೂ ಮಹಿಳೆಯರು ಆರತಿ ಹಿಡಿದು ಭಕ್ತಿ ಸಮರ್ಪಿಸಿದರು, ಪುರುಷರು ಭಜನೆ ಹಾಗೂ ಯುವ ಸಮೂಹ ಬಣ್ಣ ಬಣ್ಣದ ಆಕರ್ಷಕ ಪಟಾಕಿಗಳನ್ನು ಸಿಡಿಸುವ ಮೂಲಕ ಸಂಭ್ರಮಿಸಿತು. ಇದೆಲ್ಲದಕ್ಕೂ ಮಿಗಿಲಾಗಿ ನಂದಿಕೋಲು ಕುಣಿತ, ಪುರವಂತರ ಭಕ್ತಿ ಸೇವೆ ಕಣ್ಮನ ಸೆಳೆಯಿತು.
ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಶ್ರೀ ಸಿದ್ದಲಿಂಗೇಶ್ವರ ಮಠಕ್ಕೆ ವಿವಿಧ ಬಗೆಯ ವಿದ್ಯುತ್ ದೀಪ, ಹೂ ಮತ್ತುರಂಗೋಲಿಯಿAದ ಸಿಂಗರಿಸಲಾಗಿತ್ತು. ರಥೋತ್ಸವದಲ್ಲಿ ವಳಬಳ್ಳಾರಿಯ ಸಿದ್ದಲಿಂಗ ಶ್ರೀಗಳು, ಪೂಜ್ಯ ಶ್ರೀ ಶಾಂತಲಿAಗ ಸ್ವಾಮೀಜಿದುದನಿ, ಗುರುಮಠಕಲನ ಶಾಂತAವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು, ಚೇಗುಂಟಾದ ಕ್ಷೀರಲಿಂಗ ಮಹಾಸ್ವಾಮಿಗಳು, ಕಡೇಚೂರು ಸಂಸ್ಥಾನ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಖೇಳಗಿ ಶ್ರೀಗಳು, ಕಲ್ಲೂರಿನ ಶ್ರೀಗುರು ಶಂಭುಲಿAಗ ಮಹಾಸ್ವಾಮಿಗಳು, ಹೊಸಪೇಟೆಯ ಕೆಂಪಿನಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಕೊಡ್ಲಾದ ಶಂಭುಲಿAಗ ಮಹಾಸ್ವಾಮಿಗಳು, ಗುಡಗುಂಟಾದ ಸದಾನಂದ ಮಹಾಸ್ವಾಮಿಗಳು, ಆದೋನಿಯ ಗುರುಸಿದ್ದ ಸ್ವಾಮಿಗಳು, ತೆಲಂಗಾಣರಾಜ್ಯದ ಸಚಿವ ವಾಕಿಟಿ ಶ್ರೀಹರಿ, ಸಂಸದೆ ಡಿ.ಕೆಅರುಣಾ, ಮಾಜಿ ಶಾಸಕ ಚಿಟ್ಟೆಂ ರಾಮಮೋಹನರೆಡ್ಡಿ ಸೇರಿದಂತೆ ಕರ್ನಾಟಕ, ತೆಲಂಗಾಣ ಸೇರಿದಂತೆ ನಾನಾ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದು ರಥೋತ್ಸವವನ್ನು ಕಣ್ತುಂಬಿ ಕೊಂಡಿದ್ದಲ್ಲದೆ ಶ್ರೀ ಸಿದ್ದಲಿಂಗೇಶ್ವರ ಮಹಾತ್ಮಾರ ಕೃಪಾಶೀರ್ವಾದ ಪಡೆದರು.