Home ಜಿಲ್ಲೆ ಕಲಬುರಗಿ ನೀಲೂರ ; ಶಿವಶರಣೆ ನಿಂಬೆಕ್ಕದೇವಿಯ ಭಕ್ತಿಗೀತೆಗಳ ಕೃತಿ ಲೋಕಾರ್ಪಣೆ

ನೀಲೂರ ; ಶಿವಶರಣೆ ನಿಂಬೆಕ್ಕದೇವಿಯ ಭಕ್ತಿಗೀತೆಗಳ ಕೃತಿ ಲೋಕಾರ್ಪಣೆ

ಅಫಜಲಪುರ:ಮಾ.22: ಸುಕ್ಷೇತ್ರ ನೀಲೂರ ಗ್ರಾಮದ ಶಿವಶರಣೆ ನಿಂಬೆಕ್ಕ ದೇವಿಯ ಜೀವನ ಚರಿತ್ರೆ ಹಾಗೂ ಐತಿಹಾಸಿಕ ಪವಾಡಗಳ ಕುರಿತು ಅಫಜಲಪುರದ ಹಿರಿಯ ಸಾಹಿತಿ ಬಸವರಾಜ ಹೂಗಾರ ಕೋರಳ್ಳಿ ಇವರು ರಚಿಸಿರುವ ಭಕ್ತಿಗೀತೆಗಳ ಕೃತಿಯನ್ನು ಪೂಜ್ಯ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹಾಗೂ ಚಿನ್ಮಯಗಿರಿಯ ಶ್ರೀ ವೀರಮಹಾಂತ ಶಿವಾಚಾರ್ಯರು ಲೋಕಾರ್ಪಣೆಗೊಳಿಸಿದರು.

ತಾಲೂಕಿನ ನೀಲೂರ ಗ್ರಾಮದ ಶ್ರೀ ನಿಂಬೆಕ್ಕದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಈ ಭಾಗದಲ್ಲಿ ಐತಿಹಾಸಿಕ ಮತ್ತು ಧಾರ್ಮಿಕ ಕಾರ್ಯಗಳಿಂದ ಹೆಸರುವಾಸಿಯಾಗಿರುವ ಶಿವಶರಣೆ ನಿಂಬೆಕ್ಕದೇವಿಯು ಸಾಕಷ್ಟು ಪವಾಡಗಳನ್ನು ಮಾಡಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ನೀಲೂರ ಗ್ರಾಮದ ಭಕ್ತರು ಯಾವತ್ತೂ ಕೂಡ ಧಾರ್ಮಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದು ಸಂತಸ ತಂದಿದೆ ಎಂದರು.

ಗ್ರಾಮದ ಹಿರಿಯ ಮುಖಂಡ ಮಲ್ಲಿನಾಥ ಹಾಳಮಳ್ಳಿ ಅವರು ಮಾತನಾಡಿ, ಶಿವಶರಣೆ ನೀಲೂರ ನಿಂಬೆಕ್ಕದೇವಿಯ ಭಕ್ತಿಗೀತೆಗಳ ಕೃತಿ ಇಂದು ಲೋಕಾರ್ಪಣೆಯಾಗಿದ್ದು ನಮಗೆಲ್ಲ ಸಂತಸ ತಂದಿದೆ. ಈ ಕೃತಿಯಿಂದ ನಿಂಬೆಕ್ಕ ದೇವಿಯ ಐತಿಹಾಸಿಕ ಜೀವನ ಚರಿತ್ರೆಯು ಸಮಾಜದ ಮುನ್ನಲೆಗೆ ಬರಲಿದ್ದು ನಿಂಬೆಕ್ಕ ದೇವಿಯ ತತ್ವಸಿದ್ಧಾಂತ ಹಾಗೂ ಅವರ ಮಾರ್ಗದರ್ಶನದ ಹಾದಿಯಲ್ಲಿ ಎಲ್ಲರೂ ಸಾಗೋಣ ಎಂದು ತಿಳಿಸಿದರು.

ಸಮಾರಂಭದಲ್ಲಿ ಶಶಿಕುಮಾರ ದೇವರು ಮೇಳಕುಂದ, ಶ್ರೀ ಬಂಗಾರ ಜಡೆ ನೀಲಕಂಠೇಶ್ವರ ಹಿರೇಮಠದ ಧರ್ಮದರ್ಶಿ ಶ್ರೀ ಶರಣಯ್ಯ ಸ್ವಾಮಿಗಳು, ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಕರಜಗಿ, ಶರಣಬಸಪ್ಪ ಪದಕಿ, ರಮೇಶ್ ಸರಡಗಿ, ಗುರಯ್ಯ ಮಠ, ಮಲ್ಲಿನಾಥ ಹಾಳಮಳ್ಳಿ, ಭಗವಂತರಾವ ಕಾಮಜಿ, ಶಿವಲಿಂಗಪ್ಪ ಮುಗದಿ, ನಾಗಪ್ಪ ಠಕ್ಕಾ, ಬಾಬುರಾವ ಕುಲಕರ್ಣಿ, ಸಾಯಬಣ್ಣ ಹೂಗಾರ, ಮಲ್ಲಿನಾಥ ಕಾಮದಿ, ಅಂಬರೀಶ ಹೂಗಾರ ಕೋರಳ್ಳಿ, ವೈಜನಾಥ ಸಾವಳಗಿ, ಸಾತಲಿಂಗಪ್ಪ ಲೋಣಿ, ಶಿವಾನಂದ ಅಂಬಲಗಿ, ವಸಂತ ಜಾದವ, ಸುರೇಶ ಮುಗದಿ, ಅಪ್ಪಾಸಾಬ ಹಾಳಮಳ್ಳಿ, ಶರಣು ಹಾಳಮಳ್ಳಿ, ಶ್ರೀಶೈಲ್ ಕಾಮಜಿ, ಸೇರಿದಂತೆ ಅನೇಕರು ಉಪಸ್ಥಿತರಿದರು. ಗ್ರಂಥ ದಾಸೋಹಿಗಳಾದ ಲಿಂ.ನಾಗೇಶಪ್ಪಾ ಹಾಳಮಳ್ಳಿ ಕುಟುಂಬಸ್ಥರು ಹಾಜರಿದ್ದರು. ನಿರೂಪಣೆಯನ್ನು ಸಂಗಮನಾಥ ಹೂಗಾರ ನಡೆಸಿಕೊಟ್ಟರು.