
ನವದೆಹಲಿ,ಅ.೧೭- ದೇಶದಲ್ಲಿ ನಕ್ಸಲೀಯರನ್ನು ಮುಂದಿನ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಬೇರು ಸಮೇತ ದೇಶದಿಂದ ಕಿತ್ತೊಗೆಯುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿಲ್ಲಿ ಹೇಳಿದ್ದಾರೆ.
೨೦೨೬ ಮಾರ್ಚ್ ೩೧ಕ್ಕೆ ದೇಶವನ್ನು ನಕ್ಸಲ್ ಮುಕ್ತ ಮಾಡುವ ಸಂಕಲ್ಪ ಹೊಂದಿದ್ದು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳ ಜೊತೆ ಸೇರಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅಮಿತ್ ಶಾಮ ಛತ್ತೀಸ್ ಘಡದಲ್ಲಿ ವಿಷ್ಣು ದೇವ್ ಸಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ೨,೧೦೦ ಮಂದಿ ನಕ್ಸಲರು ಶರಣಾಗಿದ್ದು ೧,೭೮೫ ಬಂಧನವಾಗಿದೆ, ಈ ವೇಳೆ ೪೭೭ ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಅಂಕಿ ಸಂಖ್ಯೆ ಕುರಿತು ಮಾಹಿತಿ ನೀಡಿದ್ದಾರೆ.
“ಒಂದು ಕಾಲದಲ್ಲಿ ಭಯೋತ್ಪಾದಕ ನೆಲೆಗಳಾಗಿದ್ದ ಛತ್ತೀಸ್‌ಗಢದ ಅಬುಜ್‌ಮರ್ ಮತ್ತು ಉತ್ತರ ಬಸ್ತರ್ ಅನ್ನು ಇಂದು ನಕ್ಸಲ್ ಭಯೋತ್ಪಾದನೆಯಿಂದ ಮುಕ್ತಗೊಳಿಸಲಾಗಿದೆ ಎಂದು ಘೋಷಿಸಿರುವುದು ಅಪಾರ ಸಂತೋಷದ ವಿಷಯ ಎಂದಿದ್ದಾರೆ.”
ದಕ್ಷಿಣ ಬಸ್ತರ್‌ನಲ್ಲಿ ನಕ್ಸಲ್‌ವಾದದ ಕುರುಹು ಇದೆ, ಅದನ್ನು ಭದ್ರತಾ ಪಡೆಗಳು ಶೀಘ್ರದಲ್ಲೇ ಅಳಿಸಿಹಾಕಲಿವೆ” ೭೮”ಭಾರತದ ಸಂವಿಧಾನದ ಮೇಲಿನ ನಂಬಿಕೆ ಇರಿಸಿ, ಹಿಂಸಾಚಾರ ತ್ಯಜಿಸುವ ಅವರ ನಿರ್ಧಾರ ಶ್ಲಾಘನೀಯ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಿಂದ ನಕ್ಸಲ್ ಮುಕ್ತಗೊಳಿಸುವ ಉದ್ದೇಶ ಹೊಂದಿದೆ. ನೇತೃತ್ವದ ಸರ್ಕಾರದ ನಿರಂತರ ಪ್ರಯತ್ನಗಳಿಂದಾಗಿ ನಕ್ಸಲ್‌ವಾದ ಕೊನೆಯುಸಿರೆಳೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ” ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿ ಸ್ಪಷ್ಟವಾಗಿದೆ ಶರಣಾಗಲು ಬಯಸುವವರಿಗೆ ಸ್ವಾಗತ, ಮತ್ತು ಬಂದೂಕನ್ನು ಹಿಡಿದಿಟ್ಟುಕೊಳ್ಳುವುದನ್ನು ಮುಂದುವರಿಸುವವರು ಪಡೆಗಳ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ
“ನಕ್ಸಲ್‌ವಾದದ ಹಾದಿಯಲ್ಲಿರುವವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಬೇಕೆಂದು ಮತ್ತೊಮ್ಮೆ ಮನವಿ ಮಾಡುತ್ತೇನೆ. ಮುಂದಿನ ವರ್ಷದ ಮಾರ್ಚ್ ೩೧ರ ಮೊದಲು ನಕ್ಸಲ್ ವಾದವನ್ನು ಬೇರುಸಹಿತ ಕಿತ್ತುಹಾಕಲು ನಾವು ಬದ್ಧರಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.