ನವಾಬಿ ವೈಟ್ ಮಟನ್ ಪಲಾವ್

ಬೇಕಾಗುವ ಸಾಮಗ್ರಿಗಳು

*ಮಟನ್- ೧/೨ ಕೆ.ಜಿ, ಈರುಳ್ಳಿ -೨

*ತೆಂಗಿನ ಹಾಲು ೧ ಕಪ್

*ಬಾಸುಮತಿ ಅಕ್ಕಿ ೧ ಕಪ್

*ಶಾಹಿ ಜೀರಿಗೆ – ೧, ಪುದೀನಾ ಸ್ವಲ್ಪ

*ಶುಂಠಿ, ಬೆಳ್ಳುಳ್ಳಿ ಪೇಸ್ಟ್ -೧ ಚಮಚ

*ಚಕ್ಕೆ – ೧, *ಲವಂಗ ೪

*ಅನಾನಸ್ ಹೂ ೧

*ಜಾಪತ್ರೆ – ೧, *ಹಸಿರು ಮೆಣಸಿನಕಾಯಿ ೮

  • ೧ ಚಮಚ, *ಬೆಳ್ಳುಳ್ಳಿ ೧ ಚಮಚ

*ಉಪ್ಪು – ರುಚಿಗೆ ತಕ್ಕಷ್ಟು, ತುಪ್ಪ -೩ ಚಮಚ

*ಎಣ್ಣೆ -೨೦೦ ೨.

ಮಾಡುವ ವಿಧಾನ :

ಕುಕ್ಕರ್‌ಗೆ ಮಟನ್, ಚಕ್ಕೆ, ಲವಂಗ, ಏಲಕ್ಕಿ, ಅನಾನಸ್ ಹೂ, ಜಾಪತ್ರೆ ಹಾಕಿ ಪ್ರೈ ಮಾಡಿ. ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಸ್ವಲ್ಪ ಉಪ್ಪು, ಅಗತ್ಯವಿರುವಷ್ಟು ನೀರು ಹಾಕಿ ೩ ವಿಷಲ್ ಕೂಗಿಸಿ. ಬೆಂದ ಮೇಲೆ ಪಾತ್ರೆಯೊಂದಕ್ಕೆ ಸೋಸಿಕೊಳ್ಳಿ. ಬಾಣಲಿಗೆ ತುಪ್ಪ, ಎಣ್ಣೆ ಹಾಕಿ. ಕಾದ ಮೇಲೆ ಜೀರಿಗೆ, ಈರುಳ್ಳಿ, ಪುದೀನ ಹಾಕಿ ಹುರಿಯಿರಿ. ಶುಂಠಿ, ಬೆಳ್ಳುಳ್ಳಿ ಪೇಸ್ಟ್, ತೆಂಗಿನ ಹಾಲು, ಬಾಸುಮತಿ ಅಕ್ಕಿ, ಉಪ್ಪು, ಬೇಯಿಸಿಕೊಂಡ ಮಟನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯಕ್ಕೆ ತಕ್ಕಷ್ಟು ಸೋಸಿಕೊಂಡ ನೀರು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ. ಈಗ ರುಚಿಕರವಾದ ನವಾಬಿ ವೈಟ್ ಮಟನ್ ಪಲಾವ್ ಸವಿಯಲು ಸಿದ್ಧ.