Home ಜಿಲ್ಲೆ ಕಲಬುರಗಿ ಸಿಯುಕೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಸಿಯುಕೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕಲಬುರಗಿ,ಮಾ.6: ವಿಕಸಿತ ಭಾರತವನ್ನು ಸಾಧಿಸುವಲ್ಲಿ ವಿಜ್ಞಾನಿಗಳ ಪಾತ್ರ ದೊಡ್ಡದಿದೆ ಎಂದು ಸಿಯುಕೆಯ ಕುಲಸಚಿವ ಪೆÇ್ರ. ಆರ್.ಆರ್ ಬಿರಾದಾರ ಹೇಳಿದರು.
ಅವರು ಸಿಯುಕೆಯ ರಸಾಯನಶಾಸ್ತ್ರ ವಿಭಾಗ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮುಂದುವರೆದು ಮಾತನಾಡಿ ಪ್ರತಿ ವರ್ಷ ಫೆಬ್ರವರಿ 28 ರಂದು ಸರ್ ಸಿ ವಿ ರಾಮನ್ ಅವರ ‘ರಾಮನ್ ಎಫೆಕ್ಟ್’ ದಿನವನ್ನು ಒಂದು ನಿರ್ದಿಷ್ಟ ಥೀಮ್‍ನೊಂದಿಗೆ ಆಚರಿಸಲಾಗುತ್ತಿದೆ. ಈ ವರ್ಷದ ಥೀಮ್ ‘ವಿಜ್ಞಾನದಲ್ಲಿ ಮಹಿಳೆಯರು: ವಿಕಸಿತ ಭಾರತ ಸಾಧನೆಯನ್ನು ವೇಗಗೊಳಿಸುವುದು’ ಆಗಿದೆ. 2047 ರ ವೇಳೆಗೆ ಭಾರತವನ್ನು ವಿಕಸಿತ ಭಾರತವಾಗಿ ಪರಿವರ್ತಿಸಲು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಔಷಧ, ಬಾಹ್ಯಾಕಾಶ ಇತ್ಯಾದಿ ಕ್ಷೇತ್ರಗಳಲ್ಲಿನ ವಿಜ್ಞಾನಿಗಳ ಕೊಡುಗೆಗಳು ಬಹಳಷ್ಟು ಮಹತ್ವದ್ದಾಗಿವೆ. ಪ್ರಸಕ್ತ ವರ್ಷದ ಕಾರ್ಯಕ್ರಮದ ಗಮನವು ವೈಜ್ಞಾನಿಕ ತಂತ್ರಜ್ಞಾನ, ಎಂಜಿನಿಯರಿಂಗ್, ಔಷಧಗಳು, ಗಣಿತ, ಬಾಹ್ಯಾಕಾಶ ಇತ್ಯಾದಿ ವಿಭಾಗಗಳಲ್ಲಿನ ಲಿಂಗ ಅಂತರವನ್ನು ತುಂಬುವುದು ಮತ್ತು ಆ ಮೂಲಕ ವಿಕಸಿತ ಭಾರತ ಕಡೆಗೆ ಭಾರತದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವುದು ಆಗಿದೆ. ಹವಾಮಾನ ಬದಲಾವಣೆ, ಸೈಬರ್ ಭದ್ರತೆ ಮತ್ತು ಶಿಕ್ಷಣ, ಆರೋಗ್ಯ, ಡಿಜಿಟಲ್ ಮಾರ್ಕೆಟಿಂಗ್, ನೀರು ಮತ್ತು ಗಾಳಿ, ಕೃಷಿ, ಬಾಹ್ಯಾಕಾಶ, ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ತೊಡೆದುಹಾಕಲು ಮೇಲಿನ ಕ್ಷೇತ್ರಗಳಲ್ಲಿನ ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಗಳ ಅವಶ್ಯಕತೆಯಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಸಾಯನಶಾಸ್ತ್ರದ ಬಗ್ಗೆ ಆಸಕ್ತಿದಾಯಕ ಪ್ರಯೋಗಗಳನ್ನು ಪ್ರದರ್ಶಿಸಲಾಯಿತು, ರಾಷ್ಟ್ರೋತ್ಥಾನ ಶಾಲೆ, ಅಪ್ಪಾ ಪಬ್ಲಿಕ್ ಶಾಲೆ, ಮೌಂಟ್ ಕಾರ್ಮೆಲ್ ಶಾಲೆ ಮತ್ತು ಗದಗ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗಾಗಿ ಅನೇಕ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಭೌತ ವಿಜ್ಞಾನ ನಿಕಾಯದ ಡೀನ್ ಪೆÇ್ರ. ವೆಂಕಟರಮಣ ದೊಡ್ಡಿ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು, ಪ್ರಿಯಾಂಕಾ ವಂದಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕ ಡಾ. ಒರಿಗುಂಟಿ ಆಂಜನೇಯುಲು, ಪೆÇ್ರ. ಹನುಮೇಗೌಡ, ಪೆÇ್ರ. ಶೇಷನಾಥ್ ಭೋಸ್ಲೆ, ಪೆÇ್ರ. ರಾಘವಯ್ಯ ಪಿ, ಡಾ. ಹರೀಶ ಹೊಳ್ಳಾ, ಡಾ. ವೆಂಕಟನಾರಾಯಣ, ಡಾ. ದೊರೈಪಾಂಡಿ, ಡಾ. ಅಶೋಕ ಪಬ್ಬತ್ತಿ, ಡಾ. ಭವ್ಯಾ, ಡಾ. ಗೋಪಾಲಕೃಷ್ಣ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.