ನಾಸಾದಲ್ಲಿ ಶೇ. ೨೦ ರಷ್ಟು ಉದ್ಯೋಗ ಕಡಿತ

ವಾಷಿಂಗ್ಟನ್,ಜು.೨೭- ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿನ ಶೇಕಡಾ ೨೦ ರಷ್ಟು ಉದ್ಯೋಗಿಗಳ ಸಂಖ್ಯೆ ಕಡಿತವಾಗಲಿದೆ ಎಂದು ನಾಸಾ ಹೇಳಿದೆ.
ರಾಷ್ಟ್ರೀಯ ವಾಯುಯಾನ ಮತ್ತು ಬಾಹ್ಯಾಕಾಶ ಆಡಳಿತದ ಸುಮಾರು ಶೇ.೨೦ ರಷ್ಟು ಉದ್ಯೋಗಿಗಳು ಬಾಹ್ಯಾಕಾಶ ಸಂಸ್ಥೆಯಿಂದ ನಿರ್ಗಮಿಸಲಿದ್ದಾರೆ ಎಂದು ಹೇಳಿದ್ದು ನಿರ್ಗಮನಕ್ಕೆ ನಿಖರ ಮಾಹಿತಿ ತಿಳಿಸಿಲ್ಲ


ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ನಾಸಾದಲ್ಲಿ ಸದ್ಯ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ಪೈಕಿ ಸುಮಾರು ೩,೮೭೦ ವ್ಯಕ್ತಿಗಳು ಹೊರಹೋಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ


ಮುಂಬರುವ ದಿನಗಳು ಮತ್ತು ವಾರಗಳಲ್ಲಿ ಈ ಸಂಖ್ಯೆ ಬದಲಾಗಬಹುದು ಎಂದು ಹೇಳಲಾಗಿದೆ. ವಿಶ್ವದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಶೇಕಡಾ ೨೦ ರಷ್ಟು ಉದ್ಯೋಗಿಗಳನ್ನು ಏಕಕಾಲದಲ್ಲಿ ಸಂಸ್ಥೆಯಿಂದ ತೆಗೆದು ಹಾಕುತ್ತಿರುವ ಬಗ್ಗೆ ನಿಖರ ಕಾರಣ ಸದ್ಯಕ್ಕೆ ತಿಳಿದಿಲ್ಲ.


ಮೂಲಗಳ ಪ್ರಕಾರ ಅಮೇರಿಕಾದ ಬಾಹ್ಯಾಕಾಶ ಸಂಶೋದನಾ ಸಂಸ್ಥೆ ನಾಸಾಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಅನುದಾನ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಇದು ಸಂಶೋಧನಾ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ, ಹೀಗಾಗಿ ಶೇಕಡಾ ೨೦ ರಷ್ಟು ಉದ್ಯೋಗಿಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.


ನಾಸಾದಲ್ಲಿರುವ ಶೇಕಡಾ ೨೦ ರಷ್ಟು ಅಥವಾ ಹೆಚ್ಚಿನ ಸಿಬ್ಬಂದಿ ಯಾವಾಗ ಸಂಸ್ಥೆಯಿಂದ ನಿರ್ಗಮಿಸುತ್ತಾರೆ ಎನ್ನುವ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದೆ.