ಸುರಿಯುವ ಮಳೆಯಲ್ಲಿ ಧರಣಿ ನಡೆಸಿದ ನರಿಬೋಳ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಕಲಬುರಗಿ,ಆ.20-ಎಪಿಎಂಸಿಯಲ್ಲಿ ಇರುವ ರಾಜಸ್ಥಾನ ಸೇರಿ ಸೂಮಾರು 300ಕ್ಕೂ ಹೆಚ್ಚಿನ ಅನಧಿಕೃತ ಅಂಗಡಿಗಳ ತೆರವಿಗೆ ಆಗ್ರಹಿಸಿ ಸುರಿಯುವ ಮಳೆಯಲ್ಲಿಯೇ ಧರಣಿ ನಡೆಸಿದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಪಿಎಂಸಿಯಲ್ಲಿರುವ ಅನಧಿಕೃತ ಅಂಗಡಿಗಳ ತೆರವಿಗೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ನಿರಂತರ ಹೋರಾಟ ಮಾಡುತ್ತ ಬೆಂಗಳೂರಿಗೆ ತೆರಳಿ ಮನವಿ ಸಲ್ಲಿಸಿ 69 ದಿನಗಳ ಅನಿರ್ಧಿಷ್ಠಾವಧಿ ಧರಣಿ, ಪಾದಯಾತ್ರೆ ಸೇರಿದಂತೆ ಹಂತ ಹಂತದ ಹೋರಾಟ ಮಾಡಿದ ಫಲವಾಗಿ ಕೃಷಿ ಮಾರುಕಟ್ಟೆ ಸಚಿವರು, ಕಲಬುರ್ಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಖಡಕ್ ಆದೇಶ ನೀಡಿ ಕಾಯ್ದೆಯಂತೆ ಅನಧಿಕೃತ ಅಂಗಡಿಗಳನ್ನು ತೆರವುಗೋಳಿಸಿ ಎಂದು ಸೂಚಿಸಿದಾಗ ಕಾಯ್ರದರ್ಶಿ ಅವರು ಆಗಷ್ಟ 18 ರ ವರೆಗೆ ಖಾಲಿ ಮಾಡುವಂತೆ ನೋಟಿಸ್ ಕೋಡುತ್ತೆವೆ ಆಗಲೂ ಖಾಲಿ ಮಾಡದಿದ್ದರೆ ನಾವು ಕೀಲಿ ಹಾಕುತ್ತೆವೆ ಎಂದು ಹೆಳಿದ್ದರು ಆದರೆ ಇಂದು ಅವಧಿ ಮುಗಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಎಮ.ಎಸ್.ಪಾಟೀಲ್ ನರಿಬೋಳಿ ಅವರು ಎಪಿಎಂಸಿ ಆವರಣದಲ್ಲಿ ಮಳೆಯಲ್ಲಿಯೆ ಪ್ರತಿಭಟನೆ ಪ್ರಾರಂಬಿಸಿದರು ಬೆಳಿಗ್ಗೆಯಿಂದ ಪ್ರಾರಂಭವಾದ ಪ್ರತಿಬಟನೆ ವಿಷಯ ತಿಳಿಯುತ್ತಿದ್ದಂತೆ ಕಛೇರಿಗೆ ಆಗಮಿಸಿದ ಕಾರ್ಯದರ್ಶಿಗಳು ಕೊಟ್ಟ ಭರವಸೆಯಂತೆ ಕೆಲಸ ಮಾಡಲು ಸಿದ್ದರಿದ್ದವೆ 300 ಅಂಗಡಿಗಳಲ್ಲಿ 13 ಅಂಗಡಿಗಳವರು ನ್ಯಾಯಾಲಯದಿಂದ (ಸ್ಟೆ)ತಡೆಯಾಗ್ನೆ ತಂದಿದ್ದಾರೆ ತಡೆಯಾಜ್ಞೆ ತೆರವು ಗೋಳಿಸುವ ಕುರಿತಂತೆ ನ್ಯಾಯವಾದಿಗಳ ಜೋತೆ ಚರ್ಚಿಸಲು ಹೋಗಿದ್ದೆ ನಾವು ಇವತ್ತಿನಿಂದಲೆ 13 ಅಂದಡಿಗಳ ಹೋರತುಪಡಿಸಿ ಇನ್ನುಳಿದ ಅಂಗಡಿಗಳನ್ನು ಕೀಲಿ ಹಾಕಿ ಪಂಚನಾಮೆ ಮಾಡುತ್ತೆವೆ ಎಂದು ನರಿಬೋಳ ಅವರಿಗೆ ತಿಳಿಸಿದರು. ಆಗ ಕೀಲಿ ಹಾಕಲು ಪ್ರಾರಂಬಮಾಡುವವರೆಗೂ ಮಳೆಯಲ್ಲಿಯೆ ಕೂಳಿತಕೋಳ್ಳುವೆ ಎಂದು ಮಳೆಯಲ್ಲಿ ಧರಣಿ ಮುಂದುವರೆಸಿದ ಪರಿಣಾಮ ನರಿಬೋಳ ಆರೋಗ್ಯದಲ್ಲಿ ಎರುಪೇರಾಗಿ ನಗರದ ಯುನೈಟೆಡ್ ಹಾಸ್ಪತ್ರೇಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.