ಆರ್.ವಿ.ಬಿಡಪ್ ಕಾನೂನು ಮಹಾವಿದ್ಯಾಲಯಕ್ಕೆ ನ್ಯಾಕ್ ಬಿ. ಗ್ರೇಡ್ ಮಾನ್ಯತೆ

ಬೀದರ :ಜೂ.13: ಬೀದರನ ಪತ್ರಿತಿಷ್ಠಿತ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೇಯ ಆರ್.ವಿ ಬಿಡಪ್ ಕಾನೂನು ಮಹಾವಿಧ್ಯಾಲಯಕ್ಕೆ ಪ್ರ-ಪ್ರಥಮ ಚಕ್ರದ ಮೌಲ್ಯ ಮಾಪನದಲ್ಲಿ ರಾಷ್ಟೀಯ ಮೌಲ್ಯ ಮಾಪನ ಮತ್ತು ಮಾನ್ಯತ ಮಂಡಳಿ (ನ್ಯಾಕ್) ಆನ್‍ಲೈನ್ ಮೂಲಕ ತಪಾಸಣೆಯ ನಂತರ ಬಿ. ಗ್ರೇಡ್ ಹಾಗೂ ಸಿ.ಜಿ.ಪಿ.ಎ 2.47 ರೋಂದಿಗೆ ಮಾನ್ಯತೆ ಗಳಿಸಿದೆ ಎಂದು ಸ್ಥಳಿಯ ಆಡಳಿತ ಅಧಿಕಾರಿ ಡಾ ಎಸ್ ಕೆ ಸಾತನೂರು ರವರು ತಿಳಿಸಿದ್ದಾರೆ.
ದಿನಾಂಕ: 26 , 27 ಮೇ 2025 ರಂದು ನ್ಯಾಕ ತಂಡವು ಆನ್‍ಲೈನ್ ಪರಿಶೀಲನೆ ಮಾಡಿ ವಿವಿಧ ಗಣಪಟ್ಟದ ಮಾನದಂಡಗಳ ಪ್ರಕಾರ ಪ್ರಮಾಣಿಕವಾಗಿ ಮೌಲ್ಯ ಮಾಪನ ನಡೆಸಿರುವುದು ಕಾಲೇಜಿಗೆ ಶೈಕ್ಷಣಿಕೆ, ಘನತೆ, ಶ್ರೆಷ್ಟತೆ, ಸಮಗ್ರ ಅಭೀವೃದ್ದಿ ಮತ್ತು ಗುಣಪಟ್ಟದ ಶಿಕ್ಷಣ ಸಂಕಲ್ಪದ ಪ್ರತಿಬಿಂಬವೆಂದು ಸಂತಸ ವ್ಯಕ್ತಪಡಿಸಿದ್ದಾರೆ ಪ್ರಸಂಸನಿಯ ಸಾಧನೆಗೆ ಕ.ರಾ.ಶಿ.ಸಂಸ್ಥೆಯ ಅಧ್ಯಕ್ಷರು ಶ್ರೀ ಬಸವರಾಜ ಜಾಬಶಟ್ಟಿ , ಉಪಾದ್ಯಕ್ಷರಾದ ಶ್ರೀ ಬಿ.ಜಿ. ಶೆಟಕಾರ್ ಹಾಗೂ ಶ್ರೀ ಸತೀಶ ಪಾಟೀಲ ಕಾರ್ಯದರ್ಶಿಗಳು, ಶ್ರೀ ಶಿವಾನಂದ ಗಾದಗಿ ಜಂಟಿ ಕಾರ್ಯದರ್ಶಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಸದರಿ ನ್ಯಾಕ ಮಾನ್ಯತೆಗೆ ಆಂತರಿಕ ಗುಣಪಟ್ಟ ಭರವಸೆ ಕೋಶದ (ನ್ಯಾಕ) ಸಂಯೋಜಕರಾದ ಗಣಪತಿ ಟಿ ಸಹಾಯಕ ಪ್ರಾಧ್ಯಪಕರು ಮತ್ತು ಭೋದಕ ಭೋದಕೆತರ
ಸಿಬ್ಬಂದಿಗಳು ಹಾಲಿ ಮತ್ತು ಹಳೆಯ ಕಾನೂನು ವಿಧ್ಯರ್ಥಿಗಳ ಅನಂತ ಸಹಕಾರ ಕಾರಣ ಎಂದು ಪ್ರಾಂಶುಪಾಲರಾದ ಶ್ರೀ ಮುನಿಯಪ್ಪ ಟಿ ತಿಳಿಸಿರುತ್ತಾರೆ.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೇಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಸವರಾಜ ಜಾಬಶಟ್ಟಿ ರವರು ಆರ್.ವಿ.ಬಿಡಪ್ ಕಾನೂನು ಮಹಾವಿಧ್ಯಲಯಕ್ಕೆ ನ್ಯಾಕ್ ಬಿ. ಗ್ರೇಡ್ ಮಾನ್ಯತೆ ದೊರಕಿರುವುದುದರಿಂದ ಸಂತೋಷದ ವಿಷಯವಾಗಿದೆ ಮತ್ತು ಕಾನೂನು ಮಹಾವಿಧ್ಯಲಯವು ಬೀದರ ಜಿಲ್ಲೆಯಲ್ಲಿಯೆ ಅತ್ಯಂತ ಹಳೆಯ ಪ್ರತಿಷ್ಠಿತ ಕಾನೂನು ಮಹಾವಿಧ್ಯಲಯವಾಗಿದ್ದು ಕಾನೂನು ಕ್ಷೇತ್ರದಲ್ಲಿ ಜಿಲ್ಲೆಗೆ ಅಂತ್ಯತ ಗಣನಿಯವಾದಂತ ಸೇವೆಯನು ನೀಡುತ್ತ ಬಂದಿರುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ