
ಬೀದರ:ಫೆ.೧೧:ಹಿಂದೆ ಸಂಚಾರಕ್ಕೆ ಪ್ರಾಣಿಗಳು, ಸರಕು ಸಾಗಾಣಿಕೆಗೆ ಎತ್ತಿನಗಾಡಿ ಮನೆಗೆ ಒಂದರAತೆ ಇದ್ದವು. ಇಂದು ಮನೆ ಮನೆಗೆ ದ್ವಿಚಕ್ರ ವಾಹನ, ಕಾರುಗಳಿವೆ. ಜನರಲ್ಲಿ ವಾಹನ ಸಂಚಾರ ಪರವಾನಿಗೆ ಪಡೆಯಲು ಶೈಕ್ಷಣಿಕ ಅರ್ಹತೆ ಅಗತ್ಯ ಎಂಬ ತಪ್ಪು ಕಲ್ಪನೆಯಿದೆ. ಅದು ತಪ್ಪು. ವಯಸ್ಸು ೧೮ ವರ್ಷ ದಾಟಿದರೂ ಸಾಕು ಅವರು ದ್ವಿಚಕ್ರ ವಾಹನ ಸವಾರರಾಗಿ ಪರವಾನಗಿ ಪಡೆಯಲು ಅರ್ಹರು ಎಂದು ಬಸವಕಲ್ಯಾಣ ಮೋಟಾರು ವಾಹನ ನಿರೀಕ್ಷಕರಾದ ವಿಜಯಕುಮಾರ ಉಮರ್ಗೆ ತಿಳಿಸಿದರು.ಹುಲಸೂರು ಪಟ್ಟಣದ ಇಂದಿರಾನಗರದಲ್ಲಿ ನೂತನವಾಗಿ ಆರಂಭವಾದ ಕಾಳೆ ಮೋಟಾರ್ ವಾಹನ ತರಬೇತಿ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ದೊಡ್ಡ ವಾಹನಗಳನ್ನು ಚಲಾಯಿಸಲು ೨೦ ವರ್ಷ ವಯಸ್ಸು, ಅದರ ದಾಖಲೆ, ಆಧಾರ್ ಕಾರ್ಡ್ ಕಡ್ಡಾಯವಾಗಿ ನೀಡುವ ಮೂಲಕ ಪರವಾನಗಿ ಪಡೆಯಬಹುದು. ವಾಹನ ಚಾಲನೆ ಪರವಾನಗಿ ಪಡೆಯಲು ದಲ್ಲಾಳಿಗಳ ಮೊರೆ ಹೋಗುವ ಅಗತ್ಯವಿಲ್ಲ. ಆರ್‌ಟಿಒ ಕಚೇರಿ ಸುತ್ತುವ ಬದಲು ನಿಮ್ಮ ಮೊಬೈಲ್ ಮೂಲಕವೇ ಪಡೆಯಬಹುದು ಎಂದರು.ಪಟ್ಟಣದಲ್ಲಿ ಕಾಳೆ ಮೋಟಾರ್ ವಾಹನ ತರಬೇತಿ ಶಾಲೆ ಆರಂಭವಾಗಿದೆ. ಸೂತ್ತಲ ಗ್ರಾಮದ ಯುವಕರು, ಮಹಿಳೆಯರು ವಾಹನ ಸಂಚಾರದ ತರಬೇತಿ ಶಾಲೆಯಲ್ಲಿ ತರಬೇತಿಪಡೆದು ಪರವಾನಗೆ ಪಡೆಯಿರಿ ಎಂದರು.ಶಿಕ್ಷಣ ಸಂಸ್ಥೆಯ ವಾಹನ ಚಾಲಕರು ಹೆವಿ ಬ್ಯಾಚ್ ಹೊಂದಿರುವವರು ಕಡ್ಡಾಯವಾಗಿ ೫ವರ್ಷ ಅನುಭವ ಹೊಂದಿರುವುದು ಮುಖ್ಯ. ಈಗಾಗಲೇ ಪಟ್ಟಣದಲ್ಲಿ ಹಲವು ಅಟೋಗಳು ಬಸವಕಲ್ಯಾಣ ತಾಲೂಕಿನ ಪರವಾನಗಿ ಪಡೆದು ಹುಲಸೂರ ಪಟ್ಟಣದಲ್ಲಿ ಓಡಿಸುತ್ತಿದ್ದು, ನಮ್ಮ ಗಮನಕ್ಕೆ ಬಂದಿದೆ. ಇದು ಕಾನೂನು ಬಾಹೀರ. ಆದಷ್ಟು ಬೇಗ
ನಿಮ್ಮ ಆಟೋ ಪರವಾನಗಿಯನ್ನು ಪರಿಷ್ಕರಣೆ ಮಾಡಿಕೊಳ್ಳಬೇಕು ಎಂದು ಆಟೋ ಚಾಲಕರಿಗೆ ಹೇಳಿದರು.ಯುವ ಮುಖಂಡ ಆಕಾಶ ಖಂಡಾಳೆ ಮಾತನಾಡಿ, ವಾಹನ ತರಬೇತಿ ಶಾಲೆ ನಮ್ಮ ತಾಲೂಕು ಕೇಂದ್ರದಲ್ಲಿ ಆರಂಭವಾಗಿದೆ. ಈ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು ಅಪಘಾತ ಸಂಭವಿಸದAತೆ ಮುನ್ನೆಚ್ಚರಿಕೆ ವಹಿಸಬೇಕೆಂದರು.ತಹಸೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ಯುವಕರು ಉದ್ಯೋಗವಿಲ್ಲದೆ ಕಾಲಹರಣ ಮಾಡುತ್ತಿದ್ದಾರೆ. ವಾಹನ ಚಾಲನೆ ಶಾಲೆಯಲ್ಲಿ ತರಬೇತಿ ಪಡೆದು, ಪರವಾನಿಗೆ ಪಡೆದು ಉದ್ಯೋಗ ಕಂಡುಕೊಳ್ಳಬೇಕೆAದರು. ಯುವಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು. ಹೆಲ್ಮೇಟ್, ಸೀಟ್ ಬೆಲ್ಟ್ ಕಡ್ಡಾಯ ಧರಿಸಬೇಕು ಎಂದು ಸಲಹೆ ನೀಡಿದರು.ಮೋಟಾರ್ ವಾಹನ ನಿರೀಕ್ಷಕ ರಾಜಕುಮಾರ ಚಪ್ಪೆ ಮಾತನಾಡಿ, ವಾಹನದ ದಾಖಲೆ ಗಳನ್ನು ಸರಿಯಾಗಿ ಸಮಯಕ್ಕೆ ನವಿಕರಿಸಿಕೋಳಬೇಕು. ವಾಹನದ ಇನ್ಸೂರೆನ್ಸ. ಆರ್ ಸಿ ಬುಕ. ಪಿಯುಸಿ. ಚಾಲನಾ ಪತ್ರ. ವಾಹನದಲ್ಲಿ ಒಂದು ಜಿರಾಕ್ಸ ಇಟ್ಟು ಚಾಲನೆ ಮಾಡಬೇಕು ಎಂದು ನುಡಿದ್ದರು. ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷೆ ಲತಾ ಹಾರಕುಡೆ ಮಾತನಾಡಿ, ಚಾಲಕರು ಕುಡಿದು ವಾಹನ ಓಡಿಸುವುದರಿಂದ ಅಪಘಾತಗಳು ಆಗುತ್ತಿವೆ. ಹೀಗಾಗಿ, ವಾಹನ ಚಾಲಕರು ಕುಡಿದು ವಾಹನ ಓಡಿಸಬಾರದು. ನಿಮ್ಮ ಕುಟುಂಬಸ್ಥರಿಗಾಗಿಯಾದರೂ ಕುಡಿಯದಂತೆ ಓಡಿಸಿ ಎಂದರು. ಹುಲಸೂರ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹಲವು ರೀತಿಯ ವಾಹನಗಳು ಹೊಂದಿರುವರು ಇದ್ದಾರೆ. ಕಾಳೆ ಮೋಟಾರ್ ವಾಹನ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು ಪರವಾನಗಿ ಪಡೆಯಲು ಅನುಕೂಲ ವ್ಯವಸ್ಥೆ ಮಾಡಲಾಗಿದೆ.
ಪ್ರಾಚಾರ್ಯ ಪ್ರಶಾಂತ ಕಾಳೆ ಮಾತನಡಿ ನಮ್ಮ ಮೋಟಾರ್ ವಾಹನ ತರಬೇತಿ ಶಾಲೆಯಿಂದ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಸಂಚಾರ ನಿಯಮ, ರಸ್ತೆ ಚಿಹ್ನೆಗಳು, ಸುರಕ್ಷತೆ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಭಾಗ್ಯವಂತಿ ಮೋಟಾರ ವಾಹನ ತರಬೇತಿ ಶಾಲೆಯ ಪ್ರಾಚಾರ್ಯ ಶಿವರಾಜ ಜಮಾದಾರ ಖಾಜಾಪುರ ಮಾತನಾಡಿ ದ್ವಿಚೆಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೇಟ ಧರಿಸಿ ವಾಹನ ಚಲಾಯಿಸಬೆಕು, ವಾಹನ ಚಲಾಯಿಸುವಾಗ ಮೋಬೈಲ ಫೋನ ಹೆಡ ಪೋನ.ಬ್ಲುಟುತ. ಬಳಸಬಾರದು. ದ್ವಿಚೆಕ್ರ ವಾಹನದ ಮೇಲೆ ಇಬ್ಬರಿಗಿಂತ ಹೆಚ್ಚು ಜನರು ಚಾಲನೆ ಮಾಡಬಾರದು.ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇವೇಲವು ಪಾಲಿಸುವುದರಿಂದ ಅಪಘಾತ ಕಡಿಮೆ ಮಾಡಲು ಸಾಧ್ಯವಾಗುತ್ತವೆ ಎಂದು ನುಡಿದ್ದರು.
ಪ್ರಮುಖರಾದ ಟೋಕರಿ ಕೋಳಿ ಸಮಾಜ ತಾಲೂಕು ಅಧ್ಯಕ್ಷೆ ರೇಖಾ ಹೋಸಮನಿ,ಸೋನಾಲಿ ವಿಜಯಸಿಂಗ್, ಸುಧೀರ ಕಾಡಾದಿ,. ಜಿಪಂ ಮಾಜಿ ಅಧ್ಯಕ್ಷ ಅನಿಲ್ ಭೂಸಾರೆ, ಪ್ರವೀಣ ಕಾಡಾದಿ, ಫಯಾಜ್ ಪಟೇಲ್, ಗ್ರಾಪಂ ಮಾಜಿ ಅಧ್ಯಕ್ಷ ಸೋಮನಾಥ ನಂದಗೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಮೌನೇಶ ಪಾಂಚಾಳ ನಿರೂಪಣೆ ಮಾಡಿದರು.




























