
ನವದೆಹಲಿ,ಡಿ.೫- ದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ೧ಸಾವಿರಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ರದ್ದಾಗಿವೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದ್ದು ಮತ್ತಷ್ಟು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು ದೇಶದ ಹಲವು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಜೊತೆಗೆ ವಿಮಾನಯಾನ ಸಂಸ್ಥೆಯ ಮೇಲೆ ಅತೃಪ್ತಿ ಅಸಮಾಧಾನ ಹೊರ ಹಾಕಿದ್ದಾರೆ.
ಸಿಬ್ಬಂದಿಗಳ ಕೊರತೆ ಸೇರಿದಂತೆ ವಿವಿಧ ಕಾರಣದಿಂದ ೧೦೦೦ಕ್ಕೂ ಹೆಚ್ಚು ವಿಮಾನಯಾನಗಳು ರದ್ದಾಗುತ್ತಿದೆ.ಇದರಿಂದ ಸಮಸ್ಯೆ ಎದುರಿಸುವಂತಾಗಿದೆ.
ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಮ್ಮ ಸಚಿವಾಲಯ ಮತ್ತು ಇಂಡಿಗೋದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಪ್ರಯಾಣಿಕರಿಗೆ ಎದುರಾದ ಸಮಸ್ಯೆ ಬಗೆ ಹರಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಈ ನಡುವೆ ವಿಮಾನಗಳ ಕಾರ್ಯಾಚರಣೆ ಸ್ಥಿರಗೊಳಿಸಲು ವಿಮಾನಯಾನ ಸಂಸ್ಥೆ ಫೆಬ್ರವರಿ ೧೦ ರವರೆಗೆ ಸಮಯವಾಕಾಶ ಕೋರಿದೆ.
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ೧೦೦೦ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ್ದು, ಎರಡು ದಿನಗಳಲ್ಲಿ ವಿಮಾನ ವಿಳಂಬಕ್ಕೆ ವಿಮಾನಯಾನ ಸಂಸ್ಥೆ ಎರಡನೇ ಬಾರಿಗೆ ಕ್ಷಮೆಯಾಚಿಸಿದೆ.
ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. “ಇಂಡಿಗೋ ತಂಡಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿವೆ ಮತ್ತು ಈ ವಿಳಂಬಗಳ ಕ್ಯಾಸ್ಕೇಡಿಂಗ್ ಪರಿಣಾಮ ಕಡಿಮೆ ಮಾಡಲು ಮತ್ತು ಸಾಮಾನ್ಯ ಸ್ಥಿತಿ ಮರುಸ್ಥಾಪಿಸಲು ವಿಮಾನ ನಿಲ್ದಾಣ ನಿರ್ವಾಹಕರ ಬೆಂಬಲದೊಂದಿಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಇಂಡಿಗೋ ಇಂದೂ ಕೂಡ ೫೫೦ ಕ್ಕೂ ಹೆಚ್ಚು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ ಮತ್ತು ಹಲವಾರು ವಿಮಾನ ನಿಲ್ದಾಣಗಳಲ್ಲಿ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನಿಷ್ಠ ೯೯, ಹೈದರಾಬಾದ್‌ನಲ್ಲಿ ೭೯, ದೆಹಲಿಯಲ್ಲಿ ಸುಮಾರು ೧೫೦ ಮತ್ತು ಮುಂಬೈನಲ್ಲಿ ೧೧೮ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಕನಿಷ್ಠ ೧೫೦ ವಿಮಾನಗಳು ಇನ್ನೂ ಹಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ ೧ ರಲ್ಲಿ ಪರಿಶೀಲನೆ ನಡೆಸುತ್ತಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಂಡಗಳು, ಅಡಚಣೆಯಿಂದ ಉಂಟಾದ ಜನದಟ್ಟಣೆ ನಿಭಾಯಿಸಲು ಇಂಡಿಗೋ “ಅಸಮರ್ಪಕ” ಪ್ರಯಾಣಿಕರ ನಿರ್ವಹಣಾ ಸಿಬ್ಬಂದಿಯನ್ನು ಹೊಂದಿಲ್ಲ ಎಂದು ಹೇಳಿದೆ.
ಡಿಸೆಂಬರ್ ೮ ರಿಂದ ಪ್ರಾರಂಭವಾಗಲಿರುವ ವೇಳಾಪಟ್ಟಿ ಸ್ಥಿರೀಕರಣ ಪ್ರಯತ್ನಗಳು ಮತ್ತು ವಿಮಾನ ಕಡಿತದ ಭಾಗವಾಗಿ ಮುಂದಿನ ಎರಡು ಮೂರು ದಿನಗಳಲ್ಲಿ ಹೆಚ್ಚಿನ ರದ್ಧತಿಗಳು ನಡೆಯಲಿವೆ ಎಂದು ಅದು ಹೇಳಿದೆ.
ಕಳೆದ ೨ ದಿನಗಳಿಂದ ವಿಮಾನ ಹಾರಾಟದಲ್ಲಿ ಉಂಟಾದ ವ್ಯತ್ಯಯದಿಂದಾಗಿ ಇಂಡಿಗೋ ಸಂಸ್ಥೆ ಗ್ರಾಹಕರಲ್ಲಿ ಕ್ಷಮೆಯಾಚಿಸಿದ್ದ ಫೆ. ೧೦ರ ಬಳಿಕ ಸುಗಮ ಕಾರ್ಯಾಚರಣೆಯ ಭರವಸೆ ನೀಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮಾಡಿರುವ ಇಂಡಿಗೋ ಸಮಸ್ಯೆ ಅನುಭವಿಸಿದ ಗ್ರಾಹಕರು ಮತ್ತು ನಮ್ಮ ಉದ್ಯಮದ ಪಾಲುದಾರರಲ್ಲಿ ನಾವು ಮನಪೂರ್ವಕ ಕ್ಷಮೆಯಾಚಿಸುತ್ತೇವೆ. ಬರುವ ಫೆ. ೧೦ ರೊಳಗೆ ಎಲ್ಲವನ್ನು ಸರಿಪಡಿಸಿ ವಿಮಾನಗಳ ಸ್ಥಿರ ಕಾರ್ಯಾಚರಣೆ ನಡೆಸಲಾಗಿದೆ ಎಂದಿದೆ.


































