1.16 ಲಕ್ಷ ರೂ.ಮೌಲ್ಯದ ಮೊಬೈಲ್ ಕಳವು

ಕಲಬುರಗಿ,ಸೆ.2-ಡಬರಾಬಾದ ಕ್ರಾಸ್‍ನಲ್ಲಿರುವ ಪ್ಲಿಪ್‍ಕಾರ್ಟ್ ಆಫೀಸ್‍ನಲ್ಲಿ ಪಾರ್ಸ್‍ಲ್‍ಗಳನ್ನು ವಾಪಸ್ ಮಾಡುವ ಲೋಡ್‍ಗಾಡಿಯಿಂದ ವಿವಿಧ ಕಂಪನಿಯ 1.16 ಲಕ್ಷ ರೂ.ಮೌಲ್ಯದ ಮೊಬೈಲ್‍ಗಳನ್ನು ಕಳವು ಮಾಡಲಾಗಿದೆ ಎಂದು ಪ್ಲಿಪ್‍ಕಾರ್ಟ್‍ದಲ್ಲಿ ಟೀಮ್ ಲೀಡರ್ ಆಗಿರುವ ಸುನೀಲ ನಾಗದೆ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.