
ಕೆಂಗೇರಿ, ಜೂ.೧೭: ಬೀದಿ ಬದಿ ವ್ಯಾಪಾರಿಗಳು, ಕಟ್ಟಡಕಾರ್ಮಿಕರು, ಕೂಲಿಕಾರ್ಮಿಕರು, ಮನೆಗೆಲಸದವರು, ಆಟೋಚಾಲಕರು ಸೇರಿ, ನೂರಾರು ಜನರಿಗೆ ಕಂಬಳಿ, ಸೀರೆ, ಸಮವಸ್ತ್ರ, ವಿವಿಧ ಸವಲತ್ತುಗಳನ್ನು ಶಾಸಕ ಎಸ್.ಟಿ.ಸೋಮಶೇಖರ್ ವಿತರಿಸಿದರು.
ಕೆಪಿಸಿಸಿ ಕಾರ್ಮಿಕ ವಿಭಾಗ ಯಶವಂತಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ನಿಜವಾದ ಪಲಾನುಭವಗಳನ್ನು ತಲುಪಿಸುವ ಕೆಲಸ ಮಾಡಲು ಪದಾಧಿಕಾರಿಗಳು ಮುಖಂಡರು ಮುಂದಾಗಿ, ನಿಮಗೆ ಎಲ್ಲ ರೀತಿಯ ಸಹಕಾರ, ಬೆಂಬಲ, ಪ್ರೋತ್ಸಾಹ, ಸವಲತ್ತು ದೊರಕಿಸಿಕೊಡುತ್ತೇನೆ. ಸರ್ಕಾರದ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ ಎಂದರು ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಸಾವನ್ನಪ್ಪಿದರೆ ಅಥವಾ ಅಪಘಾತವಾಗಿ ಶಾಶ್ವತ ದುರ್ಬಲತೆ ಹೊಂದಿದರೆ, ಕಾರ್ಮಿಕ ಕುಟುಂಬಕ್ಕೆ ಸರ್ಕಾರದಿಂದ ಸಹಾಯಹಸ್ತ ನೀಡಲಾಗುತ್ತದೆ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ಬೆಂಗಳೂರು ಜಿಲ್ಲಾ ಪ್ರಧಾನಕಾರ್ಯದರ್ಶಿ ಎನ್.ಶಂಕರ್ ಮಾತನಾಡಿ ನಗರ ಪ್ರದೇಶದ ಜನರಿಗೆ ಸವಲತ್ತು ನೀಡಲಾಗುತ್ತಿದ್ದು. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೂ ಕಾರ್ಮಿಕ ವಿಭಾಗದ ವತಿಯಿಂದ ಸವಲತ್ತು ವಿತರಿಸಿಲಾಗುವುದು ಎಂದರು.
ಕೆಂಗೇರಿ ರೈತ ಸಹಕಾರ ಬ್ಯಾಮಕ್ ನಿರ್ದೇಶಕ ವೆಂಕಟಾಚಲಪತಿ, ದಲಿತ ಸಂಘರ್ಷ ಸಮಿತಿಯ ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ವೆಂಕಟೇಶ್‌ಹೊನ್ನಯ್ಯ, ಪರಿಶಿಷ್ಟ ಜಾತಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅಪ್ಪಾಜಿ, ವಾರ್ಡ್ ಅದ್ಯಕ್ಷ ಪ್ರಭು, ಕಾರ್ಮಿಕ ವಿಭಾಗದ ಅಧ್ಯಕ್ಷೆ ಪದ್ಮ. ಸೈಯದ್ ಅಹಮದ್, ಜಯಪ್ರಕಾಶ್ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಂ.ಶಿವಕುಮಾರ್, ಭಾರತ ಸೇವಾದಳದ ಅಧ್ಯಕ್ಷ ಡಿ.ವಿ.ರುದ್ರಮೂರ್ತಿ, ಗಾಂಧಿ ನಗರ, ಲಕ್ಷ್ಮಿದೇವಸ್ಥಾನದ ನಾರಾಯಣಸ್ವಾಮಿ, ಅಖಿಲ ಕರ್ನಾಟಕ ಶಿವಕುಮಾರ ಸ್ವಾಮಿ ಭಕ್ತವೃಂದ ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಸ್.ಮಂಜುನಾಥ ಸ್ವಾಮಿ ಹಾಗೂ ಕಾರ್ಮಿಕ ಘಟಕದ ಎಲ್ಲಾ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.