
ಬೇಕಾಗುವ ಸಾಮಗ್ರಿಗಳು
- ಪುದೀನ-೧೦೦ ಗ್ರಾಂ
- ಕೊತ್ತಂಬರಿ ಸೊಪ್ಪು- ೫೦ ಗ್ರಾಂ
- ನೆನಸಿದ ಅಕ್ಕಿ – ೧/೪ ಕೆ.ಜಿ.
- ಈರುಳ್ಳಿ – ೧ ದೊಡ್ಡದು
- ಟೊಮ್ಯಾಟೊ- ೧ ದೊಡ್ಡದು
- ಹಸಿ ಬಟಾಣಿ- ಅರ್ಧ ಕಪ್
- ಅನಾನಸ್ ಹೂ-೨ ಪೀಸ್
- ಹಸಿರು ಮೆಣಸಿನಕಾಯಿ- ೩
- ಚಕ್ಕೆ-೭-೮ ಪೀಸ್
- ಲವಂಗ-೩
- ೨-೩
- ಶುಂಠಿ ಬೆಳುಳ್ಳಿ ಪೇಸ್ಟ್ -೧ ಚಮಚ
- ತುಪ್ಪ -೩ ಚಮಚ
- ಉಪ್ಪು- ಒಂದೂವರೆ ಚಮಚ
- ೨- ೫೦
- ೨- ೩೦೦ ೨..
ಮಾಡುವ ವಿಧಾನ:
ಪುದೀನ ಹಾಗೂ ಅದರ ಅರ್ಧದಷ್ಟು ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಹಾಗೂ ಅಗತ್ಯವಿರುವಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಕುಕ್ಕರ್‌ಗೆ ಎಣ್ಣೆ ಅಥವಾ ತುಪ್ಪ ಹಾಕಿ ಕಾದ ನಂತರ ಚಕ್ಕೆ, ಲವಂಗ, ಏಲಕ್ಕಿ, ಅನಾನಸ್ ಹೂ, ಮತ್ತು ಕತ್ತರಿಸಿದ ಈರುಳ್ಳಿ ಹಾಕಿ ಹುರಿದು, ಟೊಮ್ಯಾಟೊ ಹಾಗೂ ಹಸಿ ಬಟಾಣಿ ಸೇರಿಸಿ ಚೆನ್ನಾಗಿ ಪ್ರೈ ಮಾಡಿ ನಂತರ ಶುಂಠಿ ಬೆಳುಳ್ಳಿ ಪೇಸ್ಟ್, ರುಬ್ಬಿದ ಮಸಾಲೆ, ಉಪ್ಪು, ನೆನಸಿದ ಅಕ್ಕಿ ಹಾಗೂ ನೀರು ಹಾಕಿ. ಎರಡು ವಿಷಲ್ ಕೂಗಿಸಿದರೆ, ;ರುಚಿಯಾದ ಪುದೀನ ರೈಸ್ ಬಾತ್ ತಯಾರಾಗಿರುತ್ತದೆ.