
ಕಾಳಗಿ:ಮಾ.15:ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಶನಿವಾರ ಅಡಿಗಲ್ಲು ನೆರವೇರಿಸಿದರು.
ಕಾಳಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, ಸುಮಾರು 860 ಲಕ್ಷಗಳಲ್ಲಿ ನೂತನ ಪ್ರಜಾಸೌದ, ಲೋಕೋಪಯೋಗಿ ಇಲಾಖೆಯ 999ಲಕ್ಷ, ಸಣ್ಣ ನೀರಾವರಿಯಿಂದ 440ಲಕ್ಷ, ಸೂರ್ಯನಾರಾಯಣ ಮಂದಿರ ಸಂರಕ್ಷಣೆಗಾಗಿ ಪುರಾತತ್ವ ಇಲಾಖೆಯಿಂದ 417ಲಕ್ಷ, ಕೃಷಿ, ಪಂಚಾಯತ್ ರಾಜ್, ಕೆಕೆಎರ್ ಟಿಸಿ, ಶಿಶು ಅಭಿವೃದ್ಧಿ, ಕರ್ನಾಟಕ ಗೃಹ ಮಂಡಳಿ ಸೇರಿ ಕಾಳಗಿ-ಚಿಂಚೋಳಿ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಅನುಷ್ಠಾನದಲ್ಲಿ 17ಕಾಮಗಾರಿಗಳ ಒಟ್ಟು 60 ಕೋಟಿಗಳ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು,
ಕಾಳಗಿ ತಾಲೂಕಿನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜನರ ಜೀವನಮಟ್ಟವನ್ನು ಹೆಚ್ಚಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಜಿಲ್ಲೆಗೆ 2,590ಕೋಟಿ ಬೆಳೆ ಪರಿಹಾರ ನೀಡಿ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ. 650ಕೋಟಿ ಬೆಳೆ ವಿಮೆ ನೀಡಲಾಗಿದೆ. ಪಂಚ ಗ್ಯಾರಂಟಿಗಳ ಮೂಲಕ ಜನರಿಗೆ ಅಗತ್ಯವಾದ ಸೌಲಭ್ಯಗಳನ್ನು ಹಂತ ಹಂತವಾಗಿ ಇಡೇರಿಸಲಾಗುತ್ತಿದೆ
ಎಂದು ಹೇಳಿದರು.
ಶಾಸಕ ಡಾ.ಅವಿನಾಶ ಜಾಧವ ಮಾತನಾಡಿ ಕಳೇದ ನಮ್ಮ ಬಿಜೆಪಿ ಸರಕಾರದಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ನೂರಾರು ಕಾಮಗಾರಿಗಳು ಮಾಡಿರುವುದಾಗಿ ತಿಳಿಸಿದ ಅವರು, ಅಭಿವೃದ್ಧಿ ಎಂಬ ವಿಚಾರ ಬಂದಾಗ ನಾವು ಪಕ್ಷ-ಭೇದ ಮರೆತು ಸೇವೆ ಸಲ್ಲಿಸಿರುವುದಾಗಿ ತಿಳಿಸಿದರು.
ಈಗ ತಮ್ಮ ಸರಕಾರದಲ್ಲೂ ಕೂಡಾ ಅಭಿವೃದ್ಧಿ ವಿಚಾರದಲ್ಲಿ ಸಮಾನವಾಗಿ ನಡೆದುಕೊಂಡು, ಸರ್ವರ ಸಹಕಾರದಿಂದ ತಾಲೂಕು ಪ್ರಗತಿಯತ್ತ ಧಾವಿಸಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ತಾಲೂಕಿಗೆ ಬೇಕಾಗಿರುವ ಸಬ್ ರಜೀಸ್ಟಾರ್, ಬಿಇಓ ಸೇರಿ ತಾಲೂಕಿಗೆ ಅವಸ್ಯವಿರುವ ಇಲಾಖೆಯ ಕಛೇರಿಗಳನ್ನು ಶೀಘ್ರದಲ್ಲೇ ಮಂಜೂರು ಮಡುವಂತೆ ಸಚೀವರಿಗೆ ಒತ್ತಾಯಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ, ಯುವ ನಾಯಕ ರಾಜೇಶ ಗುತ್ತೇದಾರ ಮಾತನಾಡಿದರು.
ಶಾಸಕರ ಕೈಗೆ ರಿಮೋಟ್ ಕೊಟ್ಟ ಸಚೀವ:
ಸುಮಾರು 60ಕೋಟಿ ರೂ.ಗಳ ವಿವಿಧ ಕಾಮಗಾರಿಗಳ ಕಲ್ಲುಗಳಿಗೆ ಹೊದಿಸಲ್ಪಟ್ಟ ಪರಿದಿ ಸರಿಸುವ ರಿಮೋಟ್ ಕಂಟ್ರೋಲ್ ಬಟನ್ ಒತ್ತಬೇಕಾಗಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರೀಯಂಕ್ ಖರ್ಗೆ ಪ್ರೀತಿಯಿಂದ ಪಕ್ಕದಲ್ಲಿರುವ ಶಾಸಕ ಡಾ.ಅವಿನಾಶ ಜಾಧವ ಕೈಗೆ ನೀಡಿ, ಅಭಿವೃದ್ಧಿಯಲ್ಲಿ ನಾವಿಬ್ಬರೂ ಒಂದೇ ಎಂಬ ಭಾವನೆ ಸಚೀವ ಮತ್ತು ಶಾಸಕರಲ್ಲಿ ಕಂಡು ಬಂತು.
ಚಿಂಚೋಳಿಗೊಂದು ವೇರ್ ಹೌಸ್:
ರೈತರು ಬೆಳೆದ ದವಸಧಾನ್ಯಗಳನ್ನು ಸೇಖರಣೆ ಮಾಡಿಕೊಳ್ಳುವ ದೃಷ್ಟಿಯಿಂದ ಚಿಂಚೋಳಿಗೊಂದು ವೇರ್ ಹೌಸ್ ನಿರ್ಮಿಸಿಕೊಡುವುದಾಗಿ ಸಚೀವರು ಭರವಸೆ ನೀಡಿದರು.
ಎರಡು ತಿಂಗಳಲ್ಲಿ ಗ್ರಾಪಂ.ಸದಸ್ಯರಿಗೆ ಸಿಹಿ ಸುದ್ದಿ:
ಗ್ರಾಪಂ.ಸದಸ್ಯರು ಇದು ವರೆಗೂ ನಮ್ಮ ಸದಸ್ಯರ ಭತ್ಯೆ ನೀಡಿಲ್ಲವೆಂಬ ಕೊರಗು ನಮ್ಮ ಗಮನಕ್ಕೆ ಬಂದಿದೆ.
ಇನ್ನೂ ಎರಡು ತಿಂಗಳಲ್ಲಿ ಗ್ರಾಪಂ.ಸದಸ್ಯರಿಗೆ ಸಿಹಿ ಸುದ್ದಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಕುರಿ ಮತ್ತು ಉಣ್ಣೆ ನಿಗಮ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ಕೆಕೆಆರ್ ಟಿಸಿ ನಿಗಮ ಅಧ್ಯಕ್ಷ ಅರುಣಕುಮಾರ ಪಾಟೀಲ, ಜಿಲ್ಲಾ ಪಂಚಗ್ಯಾರಂಟಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಜರ್ ಅಲಮ್ ಖಾನ, ರವಿರಾಜ ಕೊರವಿ, ಗೋಪಾಲರಾವ ಕಟ್ಟಿಮನಿ, ರಾಘವೇಂದ್ರ ಗುತ್ತೇದಾರ, ವಿಜಯಕುಮಾರ ಚೆಂಗಟಿ, ಪ್ರಶಾಂತ ಕದಂ, ಶಿವಶರಣಪ್ಪ ಕಮಲಾಪೂರ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಡೊಣ್ಣೂರ, ಶರಣು ಮಜ್ಜಗಿ, ದಿನೇಶ ಮೋಘಾ, ಅವಿನಾಶ ಕೊಡದೂರ, ವಿಠ್ಠಲ್ ಸೇಗಾಂವಕರ, ಜಿಲ್ಲಾಧಿಕಾರಿ ಫೌಜೀಯಾ ಬಿ.ತರನುಮ್, ಎಸ್ಪಿ ಅಡ್ಡೂರು ಶ್ರೀ ನೀವಾಸುಲು, ಜಿಪಂ.ಸಿಇಓ ಭುವನಸಿಂಗ ಮೀನಾ, ಎಸಿ ಸಾಹಿತ್ಯ ಆಲದ ಕಟ್ಟಿ, ಸೇಡಂ ಎಸಿ ಪ್ರಭುರೆಡ್ಡಿ, ಜಿಲ್ಲಾ ಕೃಷಿ ಅಧಿಕಾರಿ ಸಮದ್ ಪಟೇಲ್, ಕಾಳಗಿ ಗ್ರೇಡ್-1ತಹಸೀಲ್ದಾರ ಪೃಥ್ವಿ ರಾಜ ಪಾಟೀಲ, ಸೇಡಂ ತಹಸೀಲ್ದಾರ ನಾಗನಾಥ ತರಗೆ, ತಾಪಂ.ಇಓ ಬಸಲಿಂಗಪ್ಪ ಡಿಗ್ಗಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ರಾಯಪ್ಪ ಹುಣಸಗಿ ಸ್ವಾಗತಿಸಿದರು.
ಆರ್.ಜೆ.ದಿನೇಶ ದಂಡೋತಿ ನಿರೂಪಿಸಿ ವಂದಿಸಿದರು.



























