
ಬೀದರ, ಅ. ೧೬: ಬೀದರ ನಗರದ ವಿದ್ಯಾನಗರ ಕಾಲೋನಿಯ ೧೧ನೇ ರಸ್ತೆಯಲ್ಲಿರುವ ಕಲ್ಪನಾ ಗಂಡ ಸುನೀಲಕುಮಾರ ರೆಡ್ಡಿ ಅವರ ಮನೆಯು ಅತಿ ಮಳೆಯಿಂದ ಹಾನಿಗಿಡಾಗಿದ್ದು, ವಿಷಯ ತಿಳಿದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಹಾನಿಗಿಡಾದ ಮನೆಗೆ ಭೇಟಿ ನೀಡಿದರು. ಹಾನಿಯಾದವರ ಕುಟುಂಬಕ್ಕೆ ಸಚಿವರು ವೈಯಕ್ತಿಕವಾಗಿ ೧೫ ಸಾವಿರ ಹಾಗೂ ಜಿಲ್ಲಾಡಳಿತದಿಂದ ೨೫ ಸಾವಿರ ರೂಪಾಯಿ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ನಗರಸಭೆ ಆಯುಕ್ತ ಶಿವರಾಜ ರಾಥೋಡ್, ಬೀದರ ಸಹಾಯಕ ಆಯುಕ್ತ ಮೊಹಮದ್ ಶಕೀಲ್, ಬೀದರ ತಾಲೂಕಿನ ತಹಸಿಲ್ದಾರ್ ಸೇರಿದಂತೆ ಇತರೆ ಉಪಸ್ಥಿತರಿದ್ದರು.