
ಬೀದರ್ೆ್ಫ.೨೩: ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉದ್ಯೋಗ, ಸಿರಿಧಾನ್ಯ, ಫಲ ಪುಷ್ಪ ಹಾಗೂ ಮತ್ಸ್ಯ ಮೇಳದಲ್ಲಿ ಬೀದರ್ ನಾಗರಿಕ ಸನ್ರ‍್ಗ ಸಮಿತಿ (ಬಿಎನ್‌ಎಸ್‌ಎಸ್) ದುಶ್ಚಟಗಳ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಸಿ ಗಮನ ಸೆಳೆಯಿತು.
ಮೇಳದಲ್ಲಿ ಮಳಿಗೆ ತೆರೆದಿದ್ದ ಸಮಿತಿ ‘ಬೀಡಿ, ಸಿಗರೇಟ್ ಸೇದುವುದಿಲ್ಲ, ಗುಟ್ಕಾ ತಿನ್ನುವುದಿಲ್ಲ, ಅಧಿಕ ಮೊಬೈಲ್ ಬಳಸುವುದಿಲ್ಲ, ಬೆಟ್ಟಿಂಗ್ ಆಡುವುದಿಲ್ಲ, ಸಾರಾಯಿ ಕುಡಿಯುವುದಿಲ್ಲ. ಈ ದುಶ್ಚಟಗಳಿಂದ ನಾನು ದೂರವಿರುತ್ತೇನೆ. ಇವೆಲ್ಲವು ಹಾನಿಕಾರಕವೆಂದು ಪ್ರಮಾಣೀಕರಿಸಿ ಸಹಿ ಮಾಡುತ್ತೇನೆ’ ಎಂಬ ಬರಹದ ಬಿಳಿ ಫಲಕ ಹಾಕಿತ್ತು. ಮೇಳಕ್ಕೆ ಭೇಟಿ ನೀಡಿದವರಿಂದ ಅದರ ಮೇಲೆ ಸಹಿ ಸಂಗ್ರಹಿಸಿತು.
ಮಳಿಗೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಹಿ ಸಂಗ್ರಹ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವತಃ ಸಹಿ ಮಾಡಿ ಅಭಿಯಾನವನ್ನು ಬೆಂಬಲಿಸಿದರು. ಬೀದರ್ ನಾಗರಿಕ ಸನ್ರ‍್ಗ ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹಾಗೂ ಸಮಿತಿಯ ಪದಾಧಿಕಾರಿಗಳು ಸಹಿ ಹಾಕಿದರು. ಸಮಿತಿಯ ರ‍್ಯರ‍್ಶಿ ಅಶೋಕ ವಡಗಾವೆ, ಖಜಾಂಚಿ ಡಾ. ರಾಜಶೇಖರ ಸೇಡಂಕರ್, ರಾಮಕೃಷ್ಣ ರೆಡ್ಡಿ ಮತ್ತಿತರರು ಇದ್ದರು.




























