Home ಮುಖಪುಟ ಸುದ್ದಿ ಎರಡನೇ ವಾರಕ್ಕೆ ಕಾಲಿಟ್ಟ ಮದ್ಯಪ್ರಾಚ್ಯ ಸಂಘರ್ಷ

ಎರಡನೇ ವಾರಕ್ಕೆ ಕಾಲಿಟ್ಟ ಮದ್ಯಪ್ರಾಚ್ಯ ಸಂಘರ್ಷ

ವಾಷಿಂಗ್ಟನ್,ಮಾ.೮- ಇಸ್ರೇಲ್- ಅಮೆರಿಕ ಜೊತೆಗೂಡಿ ಇರಾನ್ ಮೇಲೆ ದಾಳಿ ಎರಡನೇ ವಾರಕ್ಕೆ ಕಾಲಿಟ್ಟಿದ್ದು ದಾಳಿ, ಪ್ರತಿದಾಳಿ ಮುಂದುವರಿಸಿದ್ದು ಇದರ ಪರಿಣಾಮ ನಾರ್ವೆ ಸೇರಿದಂತೆ ಮತ್ತಿತರ ಕಡೆ ಅಮೆರಿಕ ರಾಯಬಾರ ಕಚೇರಿ, ವಿಮಾನ ನಿಲ್ದಾಣ, ತೈಲ ಸಂಗ್ರಹಗಾರ ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಸಿದ್ದು ಇದರಿಂದ ಪ್ರಭಲ ಸ್ಫೋಟ ಸಂಭವಿಸಿದೆ.

ಪಶ್ಚಿಮ ಏಷ್ಯಾದಲ್ಲಿ ಯುದ್ಧ ಎರಡನೇ ವಾರಕ್ಕೆ ಪ್ರವೇಶಿಸಿದ್ದು, ಗಲ್ಫ್‌ನ ದೇಶಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇಸ್ರೇಲ್ ,ಮುಂಜಾನೆ ದಕ್ಷಿಣ ಲೆಬನಾನ್‌ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆ ಹೆಚ್ಚು ಮಾಡಿದೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕುಡ್ಸ್ ಪೋರ್ಸ್‌ನ ಲೆಬನಾನಿನ ಶಾಖೆಗೆ ಸಂಬಂಧಿಸಿದ ಕಮಾಂಡ್‌ರ್‌ಗಳು ಸೇರಿದಂತೆ ಅನೇಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇರಾನ್‌ಗೆ ಅಮೆರಿಕ ಶಾಕ್ ನೀಡಿದೆ

ಇರಾಕ್‌ನ ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಮೇಲೆ ಕತ್ಯುಷಾ ರಾಕೆಟ್‌ಗಳು ದಾಳಿ ನಡೆಸಿದ ನಂತರ ಈ ದಾಳಿ ಸಂಭವಿಸಿದೆ, ಈ ದಾಳಿಯ ಹಿಂದೆ ಇರಾನ್ ಕೈವಾಡವಿರುವುದ ಸ್ಪಷ್ಟವಾಗಿದೆ. ಇರಾನ್‌ನ ರಾಜಧಾನಿ ಟೆಹ್ರಾನ್ ಮತ್ತು ಇಸ್ರೇಲ್‌ನ ಜೆರುಸಲೆಮ್‌ನಲ್ಲಿಯೂ ಸ್ಫೋಟಗಳು ಕೇಳಿಬಂದವು, ಹೊಸ ದಾಳಿಯಲ್ಲಿ ಇರಾನಿನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಇಸ್ರೇಲ್ ಹೇಳಿದೆ.

ದಕ್ಷಿಣ ಟೆಹ್ರಾನ್‌ನಲ್ಲಿರುವ ತೈಲ ಸಂಗ್ರಹಣಾ ವ್ಯವಸ್ಥೆ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಆದರೆ, ಹತ್ತಿರದ ಸಂಸ್ಕರಣಾಗಾರಕ್ಕೆ ಯಾವುದೇ ಹಾನಿಯಾಗಿಲ್ಲ. ದಾಳಿಗಳು ನಗರದಾದ್ಯಂತ ಬೆಂಕಿ ಮತ್ತು ಹೊಗೆ ಹರಡಿದೆ.ಅಲ್ಬೋರ್ಜ್ ಪ್ರಾಂತ್ಯದ ಕರಾಜ್ ನಗರದಲ್ಲಿಯೂ ಸ್ಫೋಟಗಳ ಶಬ್ದ ಕೇಳಿಬಂದಿದೆ. ಈ ನಡುವೆ ಇಸ್ಫಹಾನ್ ವಿಮಾನ ನಿಲ್ದಾಣದಲ್ಲಿ ಇರಾನಿನ ಎಫ್ -೧೪ ಜೆಟ್‌ಗಳನ್ನು ನಾಶಪಡಿಸಿದ್ದೇವೆ . ದಾಳಿಯನ್ನು ಇಸ್ರೇಲ್ ಸೇನೆ ಖಚಿತಪಡಿಸಿದೆ.

ಟೆಹ್ರಾನ್‌ನಲ್ಲಿರುವ ತೈಲ ಸಂಗ್ರಹಾಗಾರದ ಮೇಲೆ ದಾಳಿ ಮಾಡಿದ ಒಂದು ದಿನದ ನಂತರ ಈ ದಾಳಿಗಳು ನಡೆದವು, ಇದು ದೊಡ್ಡ ಬೆಂಕಿಗೆ ಕಾರಣವಾಯಿತು. ಈ ನಡುವೆ ಅಮೆರಿಕ ಮತ್ತು ಇಸ್ರೇಲ್ ನಡುವೆ ಯುರೇನಿಯಂನ ದಾಸ್ತಾನುಗಳನ್ನು ಭದ್ರಪಡಿಸಿಕೊಳ್ಳಲು ಇರಾನ್‌ಗೆ ವಿಶೇಷ ಪಡೆಗಳನ್ನು ನಿಯೋಜಿಸುವ ಸಾಧ್ಯತೆ ಹೆಚ್ಚಿದೆ

ಪ್ರಾದೇಶಿಕ ಉದ್ವಿಗ್ನತೆಗಳು ಗಲ್ಫ್ ರಾಜ್ಯಗಳ ಮೇಲೂ ಪರಿಣಾಮ ಬೀರಿವೆ. ದಾಳಿಯ ನಂತರ ಕುವೈತ್ ನಗರ ಮತ್ತು ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿಗೆ ಆಹುತಿಯಾಗಿದೆ

ಸೌದಿ ಅರೇಬಿಯಾ ರಿಯಾದ್ ಬಳಿ ಹೆಚ್ಚುವರಿ ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಉಲ್ಬಣಗೊಳ್ಳುತ್ತಿರುವ ಸಂಘರ್ಷದ ನಡುವೆ, ಚೀನಾ ಯುದ್ಧವನ್ನು ಟೀಕಿಸಿತು ಮತ್ತು ಅಂತರರಾಷ್ಟ್ರೀಯ ವಿವಾದಗಳನ್ನು ಬಲವಂತದ ಮೂಲಕ ಇತ್ಯರ್ಥಪಡಿಸಬೇಕು ಎಂದಿದೆ

ಇಸ್ರೇಲ್‌ನ ಮೂಲಸೌಕರ್ಯ ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ರಾಜಧಾನಿ ಟೆಹ್ರಾನ್ ವಿಮಾನ ನಿಲ್ದಾಣದಲ್ಲಿ ಭಾರಿ ಸ್ಫೋಟಗಳು ಸಂಭವಿಸಿವೆ. ಇರಾನ್ ಇಸ್ರೇಲ್ ಮತ್ತು ಅಮೇರಿಕಾದ ವಾಯುನೆಲೆಗಳ ಮೇಲೆ ಹೊಸ ಕ್ಷಿಪಣಿ ದಾಳಿ ನಡೆದಿದೆ. ಇದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿದೆ, ಯುದ್ದ ೯ ದಿನಕ್ಕೆ ಕಾಲಿಟ್ಟುದ್ದು ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ

ಮಧ್ಯಪ್ರಾಚ್ಯ ಸಂಘರ್ಷದಲ್ಲಿ ’ಹೆಲಿಕಾಪ್ಟರ್ ಒಳನುಸುಳುವಿಕೆ’ಯ ನಂತರ ಹಿಜ್ಬೊಲ್ಲಾ -ಇಸ್ರೇಲ್ ಪಡೆಗಳೊಂದಿಗೆ ಘರ್ಷಣೆ ನಡೆದಿದೆ, ಈ ಘರ್ಷಣೆಯಲ್ಲಿ ಸಾವು ನೋವುಗಳ ಬಗ್ಗೆ ಯಾವುದೇ ವರದಿ ಸದ್ಯಕ್ಕೆ ಲಭ್ಯವಾಗಿಲ್ಲ

ನಾಲ್ಕು ಮಿಲಿಟರಿ ಹೆಲಿಕಾಪ್ಟರ್‍ಗಳು ಸಿರಿಯಾದಿಂದ ದಾಟಿ ಪೂರ್ವ ಲೆಬನಾನ್‌ನ ಬೆಕಾ ಕಣಿವೆಯಲ್ಲಿರುವ ನಬಿ ಶೀಟ್ ಬಳಿ ಇಳಿದ ನಂತರ ತನ್ನ ಹೋರಾಟಗಾರರು ಇಸ್ರೇಲಿ ಪಡೆಗಳನ್ನು ಹೊಡೆದುರುಳಿಸಿದ್ದಾರೆ ಎಂದು ಹಿಜ್ಬೊಲ್ಲಾ ಹೇಳಿದೆ

ಪಟ್ಟಣದ ಸ್ಮಶಾನದ ಬಳಿ ತನ್ನ ಹೋರಾಟಗಾರರು ಮುಂದುವರಿಯುತ್ತಿರುವ ಸೈನಿಕರನ್ನು ಎದುರಿಸಿದ್ದು ಭೀಕರ ಗುಂಡಿನ ಚಕಮಕಿಗೆ ಕಾರಣವಾಗಿದೆ ಎಂದು ಹಿಜ್ಬುಲ್ಲಾ ಗುಂಪು ಹೇಳಿದೆ.

ದುಬೈ ಮಾಧ್ಯಮ ಕಚೇರಿಯ ಹೇಳಿಕೆಯ ಪ್ರಕಾರ, ವೈಮಾನಿಕ ದಾಳಿಯ ನಂತರ ಅವಶೇಷಗಳು ಬಿದ್ದ ನಂತರ “ಸಣ್ಣ ಘಟನೆ” ಸಂಭವಿಸಿದೆ ಎಂದು ದುಬೈ ಅಧಿಕಾರಿಗಳು ಹೇಳಿದ್ದಾರೆ. ಪರಿಸ್ಥಿತಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಲಾಯಿತು ಮತ್ತು ಯಾವುದೇ ಹಾನಿಗಳ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ನಾಗರಿಕರನ್ನು ಕೊಂದರೆ ಭೇಟೆ: ಟ್ರಂಪ್

ಅಮೆರಿಕದ ನಾಗರಿಕರನ್ನು ಕೊಂದರೆ ನಿಮ್ಮನ್ನು ಬೇಟೆಯಾಡುತ್ತೇವೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಇನ್ಮುಂದೆ ಮಧ್ಯಪ್ರಾಚ್ಯದ ಬೆದರಿಸುವ ರಾಷ್ಟ್ರವಲ್ಲ. ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಂತರ ಸಂಪೂರ್ಣ ಸೋತ ದೇಶವಾಗಿದೆ ಹೇಳಿದ್ದಾರೆ

ಮಧ್ಯಪ್ರಾಚ್ಯದಲ್ಲಿ ಯುದ್ಧ ಎರಡನೇ ವಾರಕ್ಕೆ ಕಾಲಿಟ್ಟಿರುವುದರಿಂದ ಮುಂದಿನ ದಿನಗಳಲ್ಲಿ ಇರಾನ್ ಮತ್ತಷ್ಟು ಹೊಡೆ ಅನುಭವಿಸಲಿದೆ ಎಂದು ಎಚ್ಚರಿಸಿದ್ದಾರೆ

ಇರಾನ್ ಮಧ್ಯಪ್ರಾಚ್ಯದಲ್ಲಿರುವ ತನ್ನ ನೆರೆಹೊರೆಯವರಿಗೆ ಕ್ಷಮೆಯಾಚಿಸಿದೆ, ಶರಣಾಗತಿ ನೀಡಿದೆ. ಹೀಗಾಗಿ ಅದು ಅವರನ್ನು ಹೊಡೆಯುವುದಿಲ್ಲ ಎಂದು ಭರವಸೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್‌ನ ನಿರಂತರ ದಾಳಿಯಿಂದಾಗಿ ಇರಾನ್ ಈ ಭರವಸೆ ನೀಡಬೇಕಾಗಿದೆ ಎಂದಿದ್ದಾರೆ

ಇರಾನ್ ಮಧ್ಯಪ್ರಾಚ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಆಳಲು ನೋಡುತ್ತಿದೆ. ಆದರೆ, ಸಾವಿರಾರು ವರ್ಷಗಳಲ್ಲಿ ಸುತ್ತಮುತ್ತಲಿನ ಮಧ್ಯಪ್ರಾಚ್ಯ ದೇಶಗಳಿಗೆ ಇರಾನ್ ಮೊದಲ ಬಾರಿಗೆ ಸೋತಿದೆ ಎಂದಿದ್ದಾg.

ನಾರ್ವೆಯ ಒಸ್ಲೋದಲ್ಲಿ ದಾಳಿ

ನಾರ್ವೆಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಬಳಿ ಇರಾನ್ ದಾಳಿ ನಡೆಸಿದಿದ್ದು ಬಾರಿ ಸ್ಪೋಟ ಸಂಭವಿಸಿದೆ, ಈ ನಡುವೆ ಇಸ್ರೇಲ್ ಇರಾನ್ ತೈಲ ಘಟಕದ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಬೆಂಕಿಗೆ ಆಹುತಿಯಾಗಿದೆ

ನಾರ್ವೆಯ ರಾಜಧಾನಿ ಓಸ್ಲೋದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಬಳಿ ಜೋರಾದ ಸ್ಫೋಟ ಕೇಳಿಬಂದಿದೆ. ಸದ್ಯಕ್ಕೆ ಸಾವು ನೋವು ಸಂಭವಿಸಿದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಈ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಾಗಿದೆ ಎಂದು ನಾರ್ವೆಯ ಪೊಲೀಸರು ತಿಳಿಸಿದ್ದಾರೆ

ಸ್ಫೋಟಕ್ಕೆ ಕಾರಣವೇನು ಅಥವಾ ಯಾರು ಭಾಗಿಯಾಗಿದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಓಸ್ಲೋ ಪೊಲೀಸ್ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. “ಪೊಲೀಸರು ರಾಯಭಾರ ಕಚೇರಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಮತ್ತು ಯಾವುದೇ ಗಾಯಗೊಂಡ ವ್ಯಕ್ತಿಗಳ ವರದಿಗಳಿಲ್ಲ” ಎಂದು ಹೇಳಲಾಗಿದೆ