
ದರ ಏರಿಕೆಗೆ ಆಕ್ರೋಶ
ಬೆಂಗಳೂರು, ಜ. ೬- ಬೆಂಗಳೂರು ಮೆಟ್ರೋ ಪ್ರಯಾಣ ದರವನ್ನು ಈ ತಿಂಗಳ ೯ ರಿಂದ ಏರಿಸಲು ನಿರ್ಧರಿಸಿರುವ ಬೆನ್ನಲ್ಲೆ ಮೆಟ್ರೋ ಬಾಯ್ ಕಾಟ್ ಅಭಿಯಾನ ಸೋಷಿಯಲ್ ಮಿಡೀಯಾದಲ್ಲಿ ಆರಂಭಿಸಲಾಗಿದೆ.
ಮೆಟ್ರೋ ದರ ಏರಿಕೆಗೆ ಸಿಟ್ಟಾಗಿರುವ ಪ್ರಯಾಣಿಕರು ಮೆಟ್ರೋ ಬಹಿಷ್ಕರಿಸಿ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿ, ಈ ಸಂಬಂಧ ಹಲವು ನೆಟ್ಟಿಗರು ಪೋಸ್ಟ್ ಮಾಡಿದ್ದಾರೆ.
ಮೆಟ್ರೋ ದರವನ್ನು ಫೆ. ೯ ರಿಂದ ಏರಿಕೆಯಾಗುತ್ತಿದೆ. ಮೆಟ್ರೋ ಬಹಿಷ್ಕರಿಸಿ ಬೈಕ್‌ನಲ್ಲಿ ಹೋಗುತ್ತೇವೆ ಎಂದು ಹಲವು ಪ್ರಯಾಣಿಕರು ಪೋಸ್ಟ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೆಟ್ರೋ ಬಾಯ್‌ಕಾಟ್ ಅಭಿಯಾನಕ್ಕೆ ಎಲ್ಲರೂ ಸ್ಪಂದಿಸಿ ಮೆಟ್ರೋ ಪ್ರಯಾಣ ದರ ಏರಿಕೆಯನ್ನು ವಿರೋಧಿಸಿ ಎಂದು ನೆಟ್ಟಿಗರು ಸಾಮಾಜಿದ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಬಿಎಂಆರ್‌ಸಿಎಲ್ ಇದೇ ಫೆ. ೯ ರಿಂದ ಜಾರಿಗೆ ಬರುವಂತೆ ಶೇ. ೫ ರಷ್ಟು ಪ್ರಯಾಣ ದರವನ್ನು ಏರಿಕೆ ಮಾಡಿದೆ. ಇದು ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವರ್ಷ ಬಿಎಂಆರ್‌ಸಿಎಲ್ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿತ್ತು.


























