Home ಜಿಲ್ಲೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಆಸಂಗಿಯವರಿಗೆ ಸನ್ಮಾನ

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಆಸಂಗಿಯವರಿಗೆ ಸನ್ಮಾನ

ವಿಜಯಪುರ, ಮಾ. 17:
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ರುದ್ರಪ್ಪ ಆಸಂಗಿ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಹಾಗೂ ಪ್ರಕಾಶಕರ ಸಂಘ ಬೆಂಗಳೂರು ವತಿಯಿಂದ ಸೋಮವಾರ ವಿಜಯಪುರದಲ್ಲಿ ಸನ್ಮಾನಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಡಾ. ಮೆಹಬೂಬ ಮಾಲಬಾವಡಿ ಹಾಗೂ ಪದಾಧಿಕಾರಿಗಳು ಸಂಘದ ಕಚೇರಿಯಲ್ಲಿ ಆಸಂಗಿಯವರಿಗೆ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ. ಮೆಹಬೂಬ ಮಾಲಬಾವಡಿ ಅವರು ಮಾತನಾಡಿ, ಹಿರಿಯ ಪತ್ರಕರ್ತ ರುದ್ರಪ್ಪ ಆಸಂಗಿ ಅವರು ಕನ್ನಡಪ್ರಭ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಕರ್ನಾಟಕ ಘನ ಸರ್ಕಾರ 2025ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿದೆ. ನಮ್ಮ ಮಾರ್ಗದರ್ಶಕರಾಗಿರುವ ಆಸಂಗಿ ಅವರಿಗೆ ಮಾಧ್ಯಮ ಪ್ರಶಸ್ತಿ ಲಭಿಸಿರುವುದು ತುಂಬಾ ಹರ್ಷವಾಗಿದೆ. ಅವರಿಗೆ ಬರುವ ದಿನಗಳಲ್ಲಿ ಹೆಚ್ಚೆಚ್ಚು ಪ್ರಶಸ್ತಿಗಳು ದೊರೆಯಲಿ ಎಂದು ಶುಭ ಹಾರೈಸಿದರು.
ಶಿರೀನ್ ದಿನಪತ್ರಿಕೆ ಸಂಪಾದಕ ಲಾಲಸಾಬ ಚಟ್ಟರಕಿ ಮಾತನಾಡಿ, ರುದ್ರಪ್ಪ ಆಸಂಗಿ ಅವರಿಗೆ ಪ್ರಶಸ್ತಿ ಲಭಿಸಿರುವುದು ಹೆಚ್ಚಿನ ಖುಷಿಯಾಗಿದೆ. ಅವರು ಇನ್ಪಷ್ಟು ಪ್ರಶಸ್ತಿಗಳಿಗೆ ಭಾಜನರಾಗಲಿ ಎಂದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನೆಟ್ಟಿ ಮಾತನಾಡಿದರು.
ಲೇಖನಿ ಸಾಮ್ರಾಟ್ ಪತ್ರಿಕೆ ಸಂಪಾದಕ ಬಾಳು ಸಾರವಾಡ, ಪತ್ರಕರ್ತ ಶಿವಪ್ಪ ಕಾಂಬಳೆ, ಮಮದಾಪೂರ ಮತ್ತಿತರರು ಇದ್ದರು.