
ಕಲಬುರಗಿ,ಜೂ.19-ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ನಡುವಿನಹಳ್ಳಿ ಗ್ರಾಮದ ಬಸವೇಶ್ವರ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಫರಹತಾಬಾದ ಪೊಲೀಸ್ ಠಾಣೆ ಪಿಐ ಮಲ್ಲಿಕಾರ್ಜುನ ಇಕ್ಕಳಕಿ, ಸಿಬ್ಬಂದಿಗಳಾದ ಗಡ್ಡೆಪ್ಪ, ಆನಂದ, ತಿರುಪತಿ, ಮಹಿಬೂಬ್, ದುರ್ಗೇಶ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಶರಣು ಅಂದೋಲ, ನಿಂಗಣ್ಣ ಕೆಲ್ಲೂರ, ಅಶೋಕ ಮತ್ತು ಸಿದ್ದು ಪೊಲೀಸ್ ಪಾಟೀಲ ಎಂಬುವವರನ್ನು 5300 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ: ಬಂಧನ
ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಾಗರಗಾ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ದಿಲೀಪಕುಮಾರ ಬಿ.ಸಾಗರ ಮತ್ತು ಸಿಬ್ಬಂದಿಗಳಾದ ಅಂಬಾಜಿ, ಪ್ರೀತಮ್, ನಾಗರಾಜ, ಸುನೀಲಕುಮಾರ ಅವರು ದಾಳಿ ನಡೆಸಿ ಕಾಲಾಹುಡಾ ರೋಜಾದ ಮಹ್ಮದ್ ಫರ್ದಿನ್ ಶೇಖ್ ತಂದೆ ಬದ್ದಿನ್ ಶೇಖ್ (22) ಎಂಬಾತನನ್ನು ಬಂಧಿಸಿ 3,500 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.