ಮಟಕಾ: ನಾಲ್ವರ ಬಂಧನ

ಕಲಬುರಗಿ,ಡಿ.10-ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನಕಿರಣಗಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಕಟ್ಟೆಯ ಹತ್ತಿರ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಫರಹತಾಬಾದ ಪೊಲೀಸ್ ಠಾಣೆ ಪಿಐ ಹುಸೇನ್ ಬಾಷಾ, ಸಿಬ್ಬಂದಿಗಳಾದ ಕಲ್ಯಾಣಕುಮಾರ, ಎಂ.ಆರ್.ಪಟೇಲ್, ಆನಂದ ಅವರು ದಾಳಿ ನಡೆಸಿ ಹೊನ್ನಕಿರಣಗಿ ಗ್ರಾಮದ ಭಗವಂತ ತಂದೆ ಶ್ರೀಮಂತ ಈರಬೋ (40) ಎಂಬಾತನನ್ನು ಬಂಧಿಸಿ 1240 ರೂ.ನಗದು, ಮಟಕಾ ಚೀಟಿ, ಬಾಲ್ ಪೆನ್ ಜಪ್ತಿ ಮಾಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಹೇರೂರ (ಬಿ) ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಹತ್ತಿರ ಮಟಕಾ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಪಿಐ ಹುಸೇನ್ ಬಾಷಾ, ಸಿಬ್ಬಂದಿಗಳಾದ ಕಲ್ಯಾಣಕುಮಾರ, ಸಾಜೀದ್ ಪಾಷಾ ಅವರು ದಾಳಿ ನಡೆಸಿ ಹುಲಿಕಂಠರಾಯ ತಂದೆ ಗೊಲ್ಲಾಳಪ್ಪ ಕುಕನೂರ (76) ಎಂಬಾತನನ್ನು ಬಂಧಿಸಿ 750 ರೂ.ನಗದು, ಸಿದ್ದು ತಂದೆ ಹುಲಿಕಂಠರಾಯ ಕುಕನೂರ (29) ಎಂಬಾತನನ್ನು ಬಂಧಿಸಿ 600 ರೂ.ನಗದು ಮಟಕಾ ಚೀಟಿ ಮತ್ತು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ.
ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಎಪಿಎಂಸಿ ಹಿಂದುಗಡೆ ಇರುವ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಪಿಎಸ್‍ಐ ತಾರಾಸಿಂಗ್, ಸಿಬ್ಬಂದಿಗಳಾದ ಶಿವಾನಂದ, ಬಂದೇನವಾಜ್, ರಾಜಕುಮಾರ, ಸೈಯ್ಯದ್ ತೌಸೀಫ್ ಹುಸೇನ್ ಅವರು ದಾಳಿ ನಡೆಸಿ ಫಿಲ್ಟರ್‍ಬೆಡ್ ಆಶ್ರಯ ಕಾಲೋನಿಯ ರಘು ತಂದೆ ಗೋಪಾಲ ಉಪಾಧ್ಯ (52) ಎಂಬಾತನನ್ನು ಬಂಧಿಸಿ 2119 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ.
ಫರಹತಾಬಾದ ಮತ್ತು ಚೌಕ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.