
ಕಲಬುರಗಿ,ಮಾ.6-ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಉದನೂರ ಗ್ರಾಮದ ಜೋಡು ಬಸವೇಶ್ವರ ಗುಡಿ ಹತ್ತಿರ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಉಪ ವಿಭಾಗದ ಎಸಿಪಿ ಬಸವೇಶ್ವರ, ಫರಹತಾಬಾದ ಪೊಲೀಸ್ ಠಾಣೆ ಎಎಸ್‍ಐ ಅಶೋಕ, ಸಿಬ್ಬಂದಿಗಳಾದ ಲಕ್ಷ್ಮೀಕಾಂತ, ಪ್ರಕಾಶ್ ಅವರು ದಾಳಿ ನಡೆಸಿ ಉದನೂರ ಗ್ರಾಮದ ಹಜರತಸಾಬ ತಂದೆ ಹಸನಸಾಬ್ ಲದಾಫ್ (49) ಎಂಬಾತನನ್ನು ಬಂಧಿಸಿ 14, 825 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್‍ಪೆನ್ ಜಪ್ತಿ ಮಾಡಿದ್ದಾರೆ.
ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























