Home ಜಿಲ್ಲೆ ಮಾ .೯ ರಂದು ಬೃಹತ ಮೆರವಣಿಗೆ -ಧರ್ಮಸಭೆ

ಮಾ .೯ ರಂದು ಬೃಹತ ಮೆರವಣಿಗೆ -ಧರ್ಮಸಭೆ

ಸೈದಾಪುರ:ಮಾ.೮:ಪಟ್ಟಣದಲ್ಲಿ ನಾಳೆ ದಿ೯ ಸೋಮವಾರದಂದು ವಲಯ ಸೈದಾಪುರ ವೀರ ಮಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀ ರೇಣುಕಾಚಾರ್ಯ ಯುಗಮಾನೋತ್ಸವದ ಅಂಗವಾಗಿ ಶ್ರೀ ರೇಣುಕಾಚಾರ್ಯ ರವರ ಅದ್ಧೂರಿ ಜಯಂತೋತ್ಸವ ಜರುಗಲಿದೆ ಎಂದು ವೀರ ಮಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಸೈದಾಪುರ ವಲಯ ಅಧ್ಯಕ್ಷ ಶರಣಯ್ಯ ಸ್ವಾಮಿ ಪಂಚಕAತಿ ಮಠ ಕೊಂಡಾಪುರ ತಿಳಿಸಿದರು.
ಪಟ್ಟಣದಲ್ಲಿ ಆಮಂತ್ರಣ ಪತ್ರಿಕೆಗಳನ್ನು ಬಿಡಗಡೆ ಮಾತನಾಡಿದ ಅವರು ದಿ೯ ಸೋಮವಾರದಂದು ಬೆಳಗ್ಗೆ ೯ ಗಂಟೆಗೆ ರೈಲ್ವೇ ನಿಲ್ದಾಣದಿಂದ ಗಂಜ ಆವÀರಣದವರೆಗೆ ಅದ್ಧೂರ ಮೆರವಣಿಗೆ ತಲುಪಲಿದೆ. ನಂತರ ಬೆಳಗ್ಗೆ ೧೧-೩೦ ಗಂಟೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಧರ್ಮ ಸಭೆ ಜರುಗಲಿದೆ. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಬಾಡಿಯಾಲ ಮೂಲಮಠದ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು, ಕಡೇಚೂರು ಹಿರೇಮಠದ ಗುರುಮೂರ್ತಿ ಶಿವಾಚಾರ್ಯರು ದಿವ್ಯ ಸಾನಿಧ್ಯವನ್ನು ವಹಿಸಲ್ಲಿದ್ದಾರೆ. ರಾಯಚೂರು ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯರು, ಗಬ್ಬೂರ ಬೂದಿಬಸವೇಶ್ವರ ಸಂಸ್ಥಾನ ಮಠದ ಬೂದಿಬಸವ ಶಿವಾಚಾರ್ಯರು ಅಧ್ಯಕ್ಷತೆಯನ್ನು, ಸುಲ್ತಾನಪೂರ ಪಂಚಾಕ್ಷರಿ ಮಹಾಸಂಸ್ಥಾನ ತೀರ್ಥ ಬೃಹನ್ಮಠದ ಶಂಭು ಸೋಮನಾಥ ಶೀವಾಚಾರ್ಯರು, ಕೌಳೂರು ಸಿದ್ಧರಾಮ ಶಿವಯೋಗಿ ಸಂಸ್ಥಾನ ಬೃಹನ್ಮಠದ ಸಿದ್ಧರಾಮ ದೇವರು ಜ್ಯೋತಿ ಬೆಳಗುವರು, ಹೆಡಗಿಮದ್ರಾ ಶಾಂತ ಶಿವಯೋಗಿ ಮಠದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು, ಚೇಗುಂಟಾ ಶ್ರೀ ಪಾರ್ವತಿ ಪರಮೇಶ್ವರ ಸಂಸ್ಥಾನ ಕ್ಷೇತ್ರದ ಡಾ||ಕ್ಷೀರಲಿಂಗ ಮಹಾಸ್ವಾಮಿಗಳು, ಸೈದಾಪುರ ಸಿದ್ಧ ಚೇತನಾಶ್ರಮ ಸಿದ್ಧರೂಢಮಠದ ಸೋಮೇಶ್ವರಾನಾಂದ ಮಹಾಸ್ವಾಮಿಗಳು ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವರು. ಗುರುಮಠಕಲ್ ಮತಕ್ಷೇತ್ರದ ಶಾಸಕರಾದ ಶರಣಗೌಡ ಕಂದಕೂರ ಉದ್ಘಾಟನೆಯನ್ನು ಮಾಡಲ್ಲಿದ್ದಾರೆ. ಜಂಗಮ ಸಮಾಜದ ಹಿರಿಯ ಮುಖಂಡರಾದ ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ವೀರಶೈವ ಸಮಾಜದ ವಲಯ ಅಧ್ಯಕ್ಷ ಬಸವರಾಜಪ್ಪಗೌಡ ಮಾ.ಪಾಟೀಲ, ವೀರಶೈವ ಸಮಾಜದ ಹಿರಿಯ ಮುಖಂಡರಾದ ರಾಚಣ್ಣಗೌಡ ಮುದ್ನಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲ್ಲಿದ್ದಾರೆ. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಲಿನ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು. ವಲಯ ವೀರ ಮಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಇತರರಿದ್ದರು.